" ಧ್ಯಾನಮಹಾಚಕ್ರದ ಅಖಂಡ ಧ್ಯಾನದಲ್ಲಿ ನನಗೆ ಶಾಂತತೆ, ತೃಪ್ತಿ, ಆನಂದದ ಅನುಭವವಾಯ್ತು "

 

 

ಧ್ಯಾನ ಮಹಾಚಕ್ರದಲ್ಲಿ, 22ರ ಬೆಳಗ್ಗೆ 10 ಗಂಟೆಯಿಂದ 31 ಬೆಳಗ್ಗೆ ಸುಮಾರು 9 ಗಂಟೆವರೆಗೂ ನಡೆದ ಅಖಂಡ ಧ್ಯಾನದಲ್ಲಿ 2011 ಧ್ಯಾನಿಗಳ ಮಧ್ಯೆ ನಾನೂ ಒಬ್ಬಳು. ಆ 9 ದಿನ ಪೂರ್ತಿ ಮೌನದಲ್ಲೂ, ದ್ರವಾಹಾರದಲ್ಲೂ ಇದ್ದೆ. ಆ 9 ದಿನಗಳ ‘ ಅಖಂಡ ಧ್ಯಾನ ’ದಲ್ಲಿ ನನಗೆ ಶಾಂತತೆ, ತೃಪ್ತಿ, ಆನಂದದ ಅನುಭವವಾಯ್ತು. ಬಳಲಿಕೆ, ಆಯಾಸದ ಅನುಭವವಿಲ್ಲ. ರಾತ್ರಿ ಹೊತ್ತು ಸಹ ಧ್ಯಾನದಲ್ಲಿ ಆಗಾಗ ಬೆಳಕು ಕಾಣಿಸುತ್ತಿತ್ತು. ಹಾಲು ಉಕ್ಕಿದ ವಾಸನೆ, ವಿಭೂತಿ ವಾಸನೆ, ತಿಳಿಯದ ಹೂವಿನ ವಾಸನೆಯ ಅನುಭವವಾಯ್ತು.

 

31 ರಂದು ಬೆಳಗ್ಗೆ ಸುಮಾರು 8-9 ಗಂಟೆ ಸಮಯದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರು ಎಲ್ಲರ ಹತ್ತಿರ ಬಂದು ‘ಓಕೆ’ ಹೇಳಿ ಎಬ್ಬಿಸುತ್ತಿದ್ದರು. ಆಗ ಅವರು ನನ್ನ ಬಳಿ ಬಂದಾಗ ನನ್ನ ಕಣ್ಣಿಗೆ 2 ವರ್ಷದ ಬಾಲ ಕೃಷ್ಣನಂತೆ ನನ್ನ ಹತ್ತಿರ ಬಂದಂತಾಯ್ತು. ಆಗ ಅವರ ಕಣ್ಣುಗಳಲ್ಲಿ ನೆಲೆಸಿದ್ದ ಅಪಾರವಾದ ಶಾಂತತೆ, ಆನಂದ, ಸಹನೆ, ಮುಗ್ಧತೆ, ತೃಪ್ತಿಯ ನೋಟ ನನಗೆ ದರ್ಶನವಾಯ್ತು. ಅವರನ್ನು ಹೀಗೆ ದರ್ಶಿಸಿದ ನನಗೆ ಆದ ಆನಂದವು ಜೀವನದಲ್ಲಿ ಎಂದೂ ಅನುಭವಿಸಿರಲಿಲ್ಲ ಎಂದೆನಿಸಿತು.

 

ರೇಣುಕಾ ರಾಮಯ್ಯ
ಬೆಂಗಳೂರು
ಫೋನ್  :  +91 8453032557

Go to top