" ಧ್ಯಾನವೇ ಸತ್ಯ "

 

ನನ್ನ ಹೆಸರು S. ಹನುಮಂತಪ್ಪ. ವಯಸ್ಸು 46 ವರ್ಷ. ಹುಟ್ಟಿದ ಊರು ಹಿರೇವಂದೂರು, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ. ವೃತ್ತಿಯಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜನಿಯರ್. ಜನವರಿ 2010ರಲ್ಲಿ ದಾವಣಗೆರೆಯಲ್ಲಿ ಪಿರಮಿಡ್ ಧ್ಯಾನ ಪ್ರಾರಂಭವಾದಾಗಿನಿಂದ ಪ್ರತಿನಿತ್ಯ ತಪ್ಪದೆ ಧ್ಯಾನ ಮಾಡುತ್ತಿದ್ದೇನೆ. ನಾನು ಮಾಂಸಾಹಾರ ಸೇವಿಸುತ್ತಿದ್ದರಿಂದ ಸುಮಾರು ದಿನಗಳು ಧ್ಯಾನದ ಪರಿಣಾಮ ಏನೂ ತೋರಲಿಲ್ಲ. ಧ್ಯಾನ ಕಸ್ತೂರಿ ಪತ್ರಿಕೆ ಹಾಗೂ ಶ್ರೀ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರು ಬರೆದ ಪುಸ್ತಕಗಳಿಂದ ಮತ್ತು ಅವರ ಹಿತನುಡಿಗಳಿಂದ ವಿಷಯಗಳನ್ನು ಮನನ ಮಾಡಿಕೊಂಡು ವಿಶ್ವದಲ್ಲಿ ಪ್ರತಿಯೊಂದು ಜೀವಿಗೂ ಆತ್ಮ ಇದೆ. ಅಂತಹ ಪ್ರಾಣಿಗಳನ್ನು ತಿಂದರೆ ನಾವು ಹೊತ್ತು ತಂದಿರುವ ಪಾಪಗಳ ಜೊತೆಗೆ ಮತ್ತಷ್ಟು ಪಾಪ ಸೇರಿಕೊಳ್ಳುತ್ತದೆ ಎಂದು ತಿಳಿದು ಸಂಪೂರ್ಣವಾಗಿ ಮಾಂಸಾಹಾರವನ್ನು ತ್ಯಜಿಸಿ ಧ್ಯಾನದಿಂದ ಜ್ಞಾನ, ಜ್ಞಾನದಿಂದ ಮುಕ್ತಿಯೆಂಬ ಸೂಕ್ತಿಯುಳ್ಳ ಧ್ಯಾನ ಮಾರ್ಗವನ್ನು ಅತಿ ಸುಲಭ ರೂಪದ ಆನಾಪಾನಸತಿಯ ಸಾಧನೆಯೊಂದಿಗೆ ನನ್ನ ಜೀವನದ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿದ್ದು, ಶಾಂತಿ ನೆಮ್ಮದಿಯನ್ನು ಕಂಡುಕೊಂಡಿದ್ದೇನೆ. ನಮ್ಮ ಕುಟುಂಬ ಧ್ಯಾನ ಕುಟುಂಬವಾಗಿ ಇದರಂತೆ ಹಾಗೂ ಬ್ರಹ್ಮರ್ಷಿ ಪತ್ರೀಜಿಯವರ ಧ್ಯೇಯೋದ್ದೇಶಗಳಂತೆ ಇಡೀ ಜಗತ್ತು ’ಧ್ಯಾನ ಜಗತ್ತು’ ಆಗಲೆಂಬುದು ನನ್ನ ವೈಯಕ್ತಿಕ ಆಶಯವಾಗಿದೆ.

 

S.ಹನುಮಂತಪ್ಪ
ದಾವಣಗೆರೆ
ಫೋನ್  : +91 944891150

Go to top