" ಧ್ಯಾನ ಮಾಡುತ್ತಿದ್ದಾಗ ವೀರಬ್ರಹ್ಮೇಂದ್ರ ಸ್ವಾಮಿಗಳ ದರ್ಶನವಾಯಿತು "

 

  

ನನ್ನ ಹೆಸರು S.ಲೋಕೇಶ್. ನಾನು ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದೇನೆ. ನನ್ನ ಶ್ರೀಮತಿಯಿಂದ ನನಗೆ ಧ್ಯಾನ ಪರಿಚಯವಾಯಿತು. ಧ್ಯಾನ ಮಾಡಿದ ಮೊದಲ ದಿನದಿಂದ ನನ್ನಲ್ಲಿ ಅನೇಕ ಬದಲಾವಣೆಗಳಾದವು. ತಲೆನೋವು, ಉಸಿರಾಟದ ತೊಂದರೆ, ಶುಗರ್ ಎಲ್ಲಾ ಧ್ಯಾನದಿಂದ ಹೋಯಿತು. ನಾನು 2009 ಜನವರಿಯಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮತ್ತು ನಮ್ಮೂರಿನ ಸುಮ ಮೇಡಂ, ಅಂಬಿಕ ಮೇಡಂರವರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡು ಅದರಂತೆ ಧ್ಯಾನ ಸಾಧನೆ ಮಾಡುತ್ತಿದ್ದೆವು. ಹೀಗೆ ಒಂದು ದಿನ ಧ್ಯಾನ ಮಾಡುತ್ತಿದ್ದಾಗ ವೀರ ಬ್ರಹ್ಮೇಂದ್ರ ಸ್ವಾಮಿಗಳ ದರ್ಶನವಾಯಿತು. ನಾನು ಅವರ ಮುಂದೆ ಧ್ಯಾನಕ್ಕೆ ಕುಳಿತಂತೆ ಕಾಣಿಸಿತು. ಆಗ ಅವರೇ "ನೀನು ಅನಾಹತ ಚಕ್ರದಲ್ಲಿದ್ದೀಯ" ಎಂದು ಹೇಳಿದರು. ನಂತರ ನೀನು ಪಾಪಾಘ್ನಿಯಲ್ಲಿ ಧ್ಯಾನ ಮಾಡು ಎಂದರು. ನೀನು ಸ್ಕಂದಗಿರಿ ಬೆಟ್ಟದ ಬುಡದಲ್ಲಿ ಧ್ಯಾನಮಾಡು ಅಲ್ಲಿ ಯಾವ ತೊಂದರೆಯಿರುವುದಿಲ್ಲ ಎಂದರು. ಅಲ್ಲಿ ಧ್ಯಾನ ಮಾಡುತ್ತಿದ್ದಾಗ ಶ್ರೀಕೃಷ್ಣ ಚಿನ್ನದ ಕೊಳಲನ್ನು ಹಿಡಿದುಕೊಂಡು ನಿಂತಿರುವಂತೆ ಕಾಣಿಸಿತು. ಇನ್ನೂ ಅನೇಕ ಅನುಭವಗಳು ನನಗಾಯಿತು. ಅನೇಕ ಲೋಕಗಳು ನನಗೆ ಕಾಣಿಸಿತು.

 

ನಾವು ಪ್ರತಿ ಗುರುಪೂರ್ಣಿಮೆಯಂದು ಪಾಪಾಘ್ನಿಯಲ್ಲಿರುವ ಅನ್ನಪೂರ್ಣೇಶ್ವರಿ ಭವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಧ್ಯಾನವನ್ನು ಮಾಡುತ್ತೇವೆ. ಸುಮಾರು 100 ರಿಂದ 180 ಜನ ಸೇರುತ್ತೇವೆ. ಧ್ಯಾನ ಮಾಡುತ್ತಿದ್ದಾಗ, ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ಬಂದು ನಮ್ಮ ಮಧ್ಯೆ ಕುಳಿತು ಧ್ಯಾನ ಮಾಡಿದಂತೆ ಕಾಣಿಸಿತು. ನೀವೆಲ್ಲಾ ಇಲ್ಲಿ ಬಂದು ಧ್ಯಾನ ಮಾಡಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದರು. "ನನ್ನ ಪೂಜೆಮಾಡುವವರು ನನ್ನ ಮಕ್ಕಳಂತೆ. ಧ್ಯಾನ ಮಾಡುವವರು ನನ್ನ ಸಮಾನ"ವೆಂದು ಸಂದೇಶ ನೀಡಿದರು. 

 

ಚಂದ್ರಗ್ರಹಣದ ದಿನ ಧ್ಯಾನ ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರಕ್ಕೆ ಒಂದು ದೊಡ್ಡ ಪಿರಮಿಡ್ ಬೇಕು ಎಂದು ಕೇಳಿದ್ದಕ್ಕೆ ಪ್ರಪಂಚಕ್ಕೆ ದೊಡ್ಡ ಪಿರಮಿಡ್ ‘ಸ್ಕಂದಗಿರಿ ಬೆಟ್ಟ’ ಎಂದು ಉತ್ತರ ಬಂತು. ಜೊತೆಗೆ ಬೆಟ್ಟದಲ್ಲಿ ಕ್ರಿಸ್ಟಲ್‌ನ ಒಂದು ಲಿಂಗವಿದೆ ಅದಕ್ಕೆ ನಿರಂತರವಾಗಿ ಚೈತನ್ಯಶಕ್ತಿ ಬರುತ್ತಿರುತ್ತದೆ ಎಂದು ಉತ್ತರ ಬಂತು. ನಾನು ನನ್ನ ಶ್ರೀಮತಿ ಸ್ಕಂದಗಿರಿಯಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಆಕಾಶದಲ್ಲಿರುವ ಮೋಡಗಳು ಪಿರಮಿಡ್ ಆಕಾರದಲ್ಲಿ ಕಾಣಿಸಿತು. ಇದು ಏಕೆ ಹೀಗೆ ಎಂದು ಪ್ರಶ್ನೆ ಹಾಕಿದಾಗ ಅಲ್ಲಿರುವ ಆಸ್ಟ್ರಲ್ ಮಾಸ್ಟರ‍್ಸ್ ಎನರ್ಜಿ, ಬೆಟ್ಟದ ಎನರ್ಜಿ, ಪ್ರಕೃತಿ ನಿನಗೆ ಕೊಟ್ಟಂತಹ ಕೊಡುಗೆ ಎಂದು ಸಂದೇಶ ಬಂತು.

 

ನಮ್ಮೂರಿಗೆ ಯಾರೇ ಮಾಸ್ಟರ್‌ಗಳು ಬಂದರೂ ಪಾಪಾಘ್ನಿ ಮಠಕ್ಕೆ ಭೇಟಿ ನೀಡಿ ಧ್ಯಾನ ಮಾಡಿ ಅಲ್ಲಿನ ಎನರ್ಜಿಯನ್ನು ಪಡೆದು ಖುಷಿಯಾಗುತ್ತಾರೆ. ವರಾಹಮೂರ್ತಿಸಾರ್, ಪ್ರೇಮ್‌ನಾಥ್ ಸಾರ್, ಮಾರಂ ಸಾರ್, ಬಾಲಕೃಷ್ಣ ಸಾರ್, ರಾಯ್ ಜಗಪತಿರಾಜು, ಪಾರ್ವತಮ್ಮ ಮೇಡಂ, ಶ್ರೀನಿವಾಸ್ ಸಾರ್, ಇನ್ನು ಅನೇಕರು ಧ್ಯಾನ ಸತ್ಸಂಗಗಳನ್ನು ಅಲ್ಲಿ ನಡೆಸಿರುತ್ತಾರೆ. 

 

3-7-12 ರ ಮಂಗಳವಾರ ಗುರುಪೂರ್ಣಿಮೆಂದು ನಾವುಗಳು 180 ಜನರು ಅಲ್ಲಿ ಹೋಗಿ ಧ್ಯಾನ ಮಾಡಿದೆವು. ಆ ದಿನ ಅನ್ನದಾನದ ಕಾರ್ಯಕ್ರಮವೂ ಇತ್ತು. ಆ ದಿನ ಧ್ಯಾನಿಗಳೇ ಅಲ್ಲದೆ ಶ್ರೀ ಮಠಕ್ಕೆ ಭೇಟಿಯಿತ್ತು ನೂರಾರು ಜನ ಭಕ್ತರಿಗೂ ವಿತರಿಸಿ ಆ ದಿನದ ಧ್ಯಾನ ಕಾರ್ಯಕ್ರಮಕ್ಕೆ ಗೌರಿಬಿದನೂರಿನ ವರಾಹಮೂರ್ತಿಯವರು, ಬೆಂಗಳೂರಿನ ಸತ್ಯನಾರಾಯಣರವರು, ಚಿಕ್ಕಬಳ್ಳಾಪುರದ ಜೈಲ್ ಸೂಪರಿಂಟೆಂಡೆಂಟ್ ಲಕ್ಷ್ಮೀನಾರಾಯಣರವರು ಬಂದಿದ್ದರು. ಧ್ಯಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಮಾರನೆಯ ದಿನ ಬೆಳಗಿನ ಜಾವ ಧ್ಯಾನಕ್ಕೆ ಕುಳಿತಾಗ ಒಬ್ಬ ಮಾಸಿದ, ಹರಕಲು ಬಟ್ಟೆಯನ್ನು ಹೊದ್ದುಕೊಂಡಿದ್ದ ವ್ಯಕ್ತಿಯು ಆ ದಿನ ಬಂದು ಪ್ರಸಾದ ಸ್ವೀಕರಿಸಿದ್ದು ಕಾಣಿಸಿತು. ಅವರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಗಳೆಂದು ಗೊತ್ತಾಯಿತು. ಯೋಗಿಗಳಿಗೆ ಅನ್ನದಾನ ಮಾಡಿ ಧ್ಯಾನ ಮಾಡಿಸಿದ್ದು ನನಗೆ ತುಂಬಾ ಖುಷಿಯಾಯಿತು ಎಂದು ಸಂದೇಶ ನೀಡಿದರು. ಆ ದಿನ ಕೆಲವರಿಗೆ ಧ್ಯಾನದಲ್ಲಿದ್ದಾಗ ಓಂಕಾರನಾದ ಕೇಳಿಸಿತು. ಇಲ್ಲಿ ಅತ್ಯಂತ ಹೆಚ್ಚಿನ ಚೈತನ್ಯಶಕ್ತಿಯಿದೆ ಎಲ್ಲಾ ಪಿರಮಿಡ್ ಮಾಸ್ಟರ್‌ಗಳು ಧ್ಯಾನ ಮಾಡಿ ಆ ಎನರ್ಜಿಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಪಾಪಾಘ್ನಿ ಮಠವು ಚಿಕ್ಕಬಳ್ಳಾಪುರದಿಂದ 6 ಕಿಲೋಮೀಟರ್ ದೂರದಲ್ಲಿದೆ.

 

S. ಲೋಕೇಶ್
ಚಿಕ್ಕಬಳ್ಳಾಪುರ
ಫೋನ್ : +91 9945370070

Go to top