" 12 ಗಂಟೆಗಳ ಅಖಂಡ ಧ್ಯಾನದ ನನ್ನ ಅನುಭವ "

 

ನನ್ನ ಹೆಸರು ಸುಮಂಗಳ. ನಾನು ದಢಸೂಗೂರು-ಕಾಮಧೆನು ಪಿರಮಿಡ್ ಧ್ಯಾನಕೇಂದ್ರದಲ್ಲಿ 23-9-2009 ಬುಧವಾರದಂದು ಬೆಳಗಿನ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಶ್ವಾಸಾಹಾರದಿಂದ್ದಿದಿನಿ. ಕುಳಿತ 2 ಗಂಟೆ ನಂತರ ನನಗೆ ಗೊತ್ತಿಲ್ಲಿದೆಂದೋ Book Pen ಕೊಡಿ ಎಂದು ನನ್ನ ಮಾಡಿದರೆ ಇದನ್ನು ಮನೆಯವರು ಅರ್ಧ ಮಾಡಿಕೊಂಡು ತಂದು ನನ್ನ ತೊಡೆಯ ಮೇಲಿಟ್ಟು ಹೋಗಿದ್ದಾರೆ.ನಂತರ ನನಗಾದ ಅನುಭವ. ಆ ದೃಶ್ಯ ಅಕ್ಷರ ರೂಪಗಳಲ್ಲಿ ಕಂಡು ನನ್ನನ್ನು ಬರೆಯುವಂತೆ ಪ್ರೇರೇಪಿಸುತ್ತಿದೆ.ಹಾಗೇ ನನಗೆ ಗೊತ್ತಿಲ್ಲದೆಯೇ ಬರೆದೆ. ನಂತರ ಸಂಜೆ 7 ಗಂಟೆಗೆ ನನ್ನ ಮನೆಯವರು ಬಂದು ok ಹೇಳಿದ ನಂತರ ಸುಮಾರು 10 ನಿಮಿಷಗಳ ವರೆಗೆ ಕಣ್ಣುಗಳು ತೆರಿಯಲು ಆಗಲ್ಲಿಲ್ಲ.ಆದರೂ ಪದೇ ಪದೇ ok ಹೆಳಿತಣಗೆದೆ. ನಂತರ Book Pen ಕೇಳಿದ್ದು ಎನೋ ಬರೆದಿರುವಿರಿ ಅಂತ ಹೇಳಿದ ನಂತರ ಸರಿ ಅದೇನು ಬರೆದಿರುದೆ ಎಂದು ಓದಿದಾಗ ಆಶ್ಚರ್ಯವಾಯಿತು. ಹೀಗೆ ನಾನೇನಾ ಬರೆದಿದ್ದು ಎಂದು ಭೀಮೇಶಣ್ಣ ನವರಿಗೆ ಹೇಳಿದಾಗ ಇದನೇ ಆಟೋರೈಟಿಂಗ್ ಎನ್ನುತ್ತಾರೆ ಎಂದರು.ಅಲ್ಲಿ ನಾನು ಬರೆದ ವಿಷಯ-ಭೌತಿಕ ದೇಹವಾದ ಈ ನಾನು ಎಲ್ಲವನ್ನು ಮರಿತು ಶ್ವಾಸಧಾರದ ಜೊತೆ ಸಣ್ಣ ತಂತಿಯ ಹಾಗೆ ಪ್ರಯಾಣಿಸುತ್ತಾ ಕೆಲವು ಕ್ಷಣಗಳವರೆಗೆ ಹಾಗೇ ಇದ್ದು ನಂತರ ಅದನ್ನು ಮರೆತು ಎಲ್ಲೊ ಪ್ರಯಾಣಿಸುತ್ತಾ ನಂತರ ನಾನೆಲ್ಲಿ ಎಂದು ನನ್ನನ್ನು ನಾನೇ ನೋಡುಕೊಂಡರೂ ನಾನು ಕಾಣಲಿಲ್ಲ. ಆದರೂ ನಾನಿದ್ದೇನೆ, ಅಂತರಂಗದ ನಾನಿದ್ದೇನೆ,ಎಷ್ಟೋಂದು ಅದ್ಭುತ. ಹಾಗಾದರೆ ಆ ಕಂಡು ಕಾಣದ ಆ ನಾನು ಯಾರು ? ರೂಪವೂ ಇಲ್ಲದೆ, ಶ್ವಾಸವೂ ಇಲ್ಲದೆ ನಾನು ಯಾರು ? ಯಾರು ಗೊತ್ತೆ "ಅತೀತ ಆನಂದ ಲೋಕದಲ್ಲಿ ತೇಲಾಡುತ್ತಿರುವ ಪಕ್ಷಿಯ ಹಾಗೆ.ಹಾರಾಡುತ್ತಿರುವ ಆ ನಾನೇ ಭಗವಂತ, ಆ ನಾನೇ ಬ್ರಹ್ಮಾಂಡ, ಆ ನಾನೇ ಆನಂದ".

 

ಹಾಗಾದರೆ 'ಈ' ನಾನು ಯಾವಾಗಲೂ,ಎಲ್ಲಡೆಯೂ ಹೇಗೆ ಜೀವಿಸಬೇಕು? ಸಾಧನೆಯಿಂದ ಎಲ್ಲವೂ ಸಾಧ್ಯ. 'ಈ' ನಾನು ಇಹ-ಪರಗಳೆರಡಲ್ಲಿಯೂ ಅಮಿತಾನಂದದಿಂದ ಜೀವನ ಸಾಗಿಸವಾಗ ಮಾತ್ರ ಸೃಷ್ಟಿಯೆಲ್ಲವೂ ನಗುವಂತೆ ಗೋಚರಿಸುತ್ತದೆ.ಸೃಷ್ಟಿಯೂ ಸಹ ನನ್ನನ್ನು ನೋಡಿ ತತಿದೂಗುತ್ತಾ ಇದೆ. ಎಷ್ಟೊಂದು ವಿಸ್ಮಯ. ಅಷ್ಟೇ ಆನಂದ. ಸಾಕು ಈ ಸೆಗ್ಗಿ ಅಂಶಾತ್ಮ ಜೀವಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ.

 

S.M. ಸುಮಂಗಳ
ಸಿರಿಗುಪ್ಪ

Go to top