" ನಾನು ಮತ್ತು ನನ್ನ ಗುರು ಹನುಮಾನ್‌ "

 

ನನ್ನ ಹೆಸರು ಸಾಯಿ ಸ್ವರೂಪ್. ನನಗೆ 11 ವರ್ಷ. ನನ್ನ ತಾಯಿ ಆರನೇ ವರ್ಷದಲ್ಲಿ ಧ್ಯಾನ ಕಲಿಸಿದರು. ಧ್ಯಾನ ಪ್ರಾರಂಭಮಾಡಿದಾಗ ಎಷ್ಟೋ ಬಣ್ಣಗಳು, ಪ್ರಕೃತಿಯ ದೃಶ್ಯಗಳು ಕಾಣಿಸಿತು. ಧ್ಯಾನದಲ್ಲಿ ಎಷ್ಟೋ ಮಾಸ್ಟರ‍್ಸ್ (ಆಂಜನೇಯ ಸ್ವಾಮಿ, ಶಿವ, ಪುಟ್ಟಪರ್ತಿ ಬಾಬಾ, ಪತ್ರೀಜಿ, ಮಹಾವತಾರ್ ಬಾಬಾಜಿ)ಇವರನ್ನು ಭೇಟಿಯಾಗಿ, ಅವರಿಂದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಂಡೆನು. ಧ್ಯಾನ ಮಾಡುವುದರಿಂದ ನಾನು ಎಷ್ಟೋ ಆನಂದವಾಗಿ, ಆರೋಗ್ಯವಾಗಿದ್ದೀನಿ.

 

ಒಮ್ಮೆ ಧ್ಯಾನದಲ್ಲಿ ಆಂಜನೇಯ ಸ್ವಾಮಿ ಕಾಣಿಸಿದಾಗ ಅವರನ್ನು ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ. ಸಹಸ್ರಾರ ಅಂದರೆ ಏನು? ಎಂದು ಕೇಳಿದಾಗ ಅದಕ್ಕೆ ಆಂಜನೇಯ ಸ್ವಾಮಿ "ಸಹಸ್ರಾರ ಅಂದರೆ ಹೂವಿನ ಚಕ್ರ" ಎಂದು ಹೇಳಿದರು. ಆಗ ನನ್ನ ಸಹಸ್ರಾರ ಚಕ್ರವನ್ನು ನಾನು ನೋಡಿಕೊಂಡೆನು. ಅದು ದೊಡ್ಡ ಹೂವಿನ ಹಾಗೆ ಇದೆ. ಅದರ ರೆಕ್ಕೆಗಳು ಮುಚ್ಚಿಕೊಂಡಿದೆ. ಈ ರೆಕ್ಕೆಗಳು ತೆರೆದುಕೊಳ್ಳಬೇಕಾದರೆ ಏನು ಮಾಡಬೇಕು ಎಂದು ಕೇಳಿದಾಗ "ಯಾವಾಗಲೂ ಆನಂದವಾಗಿ ಇದ್ದರೆ ಆ ರೆಕ್ಕೆಗಳು ತೆಗೆದುಕೊಳ್ಳುತ್ತದೆ" ಎಂದು ಸಮಾಧಾನ ಕೊಟ್ಟರು.

 

ಇನ್ನೊಂದು ಪ್ರಶ್ನೆ ಏನೆಂದರೆ 2012 ನಲ್ಲಿ ಏನಾಗುತ್ತದೆ ಎಂದು ಕೇಳಿದೆನು. "ಎಲ್ಲಾ ಗ್ರಹಗಳು ಒಂದೇ ಸಮವಾಗಿ (ನೇರವಾಗಿ) ಬರುತ್ತೆ. ಆಗ ಭೂಮಿಗೆ ಎಷ್ಟೋ ಎನರ್ಜಿ ಮತ್ತು ಆನಂದವು ಲಭಿಸುತ್ತದೆ" ಎಂದು ಆಂಜನೇಯ ಸ್ವಾಮಿ ಹೇಳಿದರು.

 

ಒಮ್ಮೆ ಆಂಜನೇಯ ಸ್ವಾಮಿಯ ಜೊತೆ ಸೂಕ್ಷ ಶರೀರಯಾನ ಮಾಡುವಾಗ ಅನೇಕ ಆಸ್ಟ್ರಲ್ ಪಿರಮಿಡ್ಸ್ ನೋಡಿದೆನು. ಅದರೊಳಗೆ ಧ್ಯಾನ ಮಾಡಿದಾಗ ಸಾಕಷ್ಟು ಎನರ್ಜಿ ಎಲ್ಲಾ ಕಡೆಗೂ ಆ ಪಿರಮಿಡ್ಸ್‌ನಿಂದ ಹೋಗುವುದು ನೋಡಿದೆನು.

 

ನನಗೆ ಕರಾಟೆ ಎಂದರೆ ತುಂಬಾ ಇಷ್ಟ. ಒಂದು ದಿನ ನನ್ನ ಅಮ್ಮ ಹೇಳಿದರು "ನೀನು ಯಾವ ವಿದ್ಯೆಯಾದರೂ ಧ್ಯಾನದಲ್ಲಿ ಕಲಿತುಕೊಳ್ಳಬಹುದು" ಎಂದು. ಆಗ ಪತ್ರೀಜಿ ಸಹಾಯದಿಂದ ಬ್ರೂಸ್‌ಲೀನ ಭೇಟಿಮಾಡಿ ಕರಾಟೆಯಲ್ಲಿ ಎಷ್ಟೋ techniques ಕಲಿತುಕೊಂಡೆನು.

 

ನಾನು ಸೂಕ್ಷ ಶರೀರಯಾನದಲ್ಲಿ ಹನುಮಾನ್ ಮಾಸ್ಟರ್ ಜೊತೆ ಮಾನಸಸರೋವರಕ್ಕೆ ಹೋಗಿದ್ದೀನಿ. ಹೀಗೆ ಹೇಳುತ್ತಾ ಹೋದರೆ ಎಷ್ಟೋ ಅನುಭವಗಳು. ಪ್ರತಿ ಒಬ್ಬರೂ ‘ಧ್ಯಾನ’ ಮಾಡಿ.

 

 

ಸಾಯಿ ಸ್ವರೂಪ್
ಬೆಂಗಳೂರು

Go to top