" ಪಿರಮಿಡ್ ವ್ಯಾಲಿಯೇ ನನ್ನ ಪ್ರಾಣವಾಗಿದೆ "

 

ನಾನು ಒಂದು ವರ್ಷದ ಮೌನ ಆಚರಣೆಯ ಸಮಯದಲ್ಲಿ 2007ರ ಮೇ ತಿಂಗಳಲ್ಲಿ ಬುದ್ಧಪೂರ್ಣಿಮೆ ಉತ್ಸವದ ಸಂದರ್ಭದಲ್ಲಿ ನಾನು ಪಿರಮಿಡ್ ವ್ಯಾಲಿಗೆ ಮೊದಲ ಬಾರಿ ಭೇಟಿ ನೀಡಿದಾಗ, ಅಲ್ಲಿನ ಪ್ರಕೃತಿ ಸೌಂದರ್ಯ ನನ್ನನ್ನು ಆಕರ್ಷಿಸಿತು. ಬೆಂಗಳೂರು ನಗರಕ್ಕೆ ಬಂದು 7 ವರ್ಷಗಳಾದರೂ ನಗರವನ್ನು ನೋಡಲು ಹೆಚ್ಚು ಉತ್ಸಾಹ ಇರದ ನನಗೆ ಪಿರಮಿಡ್‌ವ್ಯಾಲಿ ಅಂದರೆ ಅತೀವ ಉತ್ಸಾಹ ಬರುತ್ತದೆ; ವ್ಯಾಲಿ ಎಂದರೆ ಓಡಿ ಬರಬೇಕೆನಿಸುತ್ತದೆ. ಅಲ್ಲಿದ್ದರೆ ನನ್ನ ತಾಯಿಯ ಮಡಿಲಲ್ಲಿ ಇದ್ದ ಹಾಗೆ ಅನ್ನಿಸುತ್ತದೆ.

 

ಪ್ರತಿ ಹುಣ್ಣಿಮೆಗೆ ಯಾವುದಾದರೂ ಆಶ್ರಮಕ್ಕೆ ಹೋಗುತ್ತಿದ್ದ ನಾನು ಪಿರಮಿಡ್ ವ್ಯಾಲಿಯನ್ನು ನೋಡಿದ ನಂತರ ಇತರ ಸ್ಥಳಗಳಿಗೆ ಹೋಗುವುದನ್ನು ಬಿಟ್ಟು ವ್ಯಾಲಿಗೆ ಬರತೊಡಗಿದೆ.

 

ಪಿರಮಿಡ್ ವ್ಯಾಲಿ ಭೇಟಿಯ ನಂತರ ನನ್ನೊಳಗಿನ ಕ್ರಿಯಾಶೀಲತೆ ವಿಕಾಸಗೊಂಡು ಅದರ ಪರಿಣಾಮವಾಗಿ ನನ್ನಿಂದ ಅನೇಕ ಕೆತ್ತನೆ ಕೃತಿಗಳು, ಬಣ್ಣದ ಕಲಾಕೃತಿಗಳು, ಕವಿತೆಗಳು ಹೊರಬಂದಿದೆ.

 

ನಾನು ಕೈಗೊಂಡ ಒಂದು ವರ್ಷದ ಮೌನಾಚರಣೆ ವ್ರತವು ಪೂರ್ಣಗೊಂಡಿದ್ದಕ್ಕಾಗಿ ೨೦೧೦ರ ಬುದ್ಧಪೂರ್ಣಿಮ ಸಂದರ್ಭದಲ್ಲಿ ವೇದಿಕೆ ಮೇಲೆ ನನ್ನನ್ನು ಕರೆದು ಅಭಿನಂದಿಸಿದ್ದು ಒಂದು ಅವಿಸ್ಮರಿಣೀಯ ಅನುಭವವಾಗಿದೆ.

 

ಪಿರಮಿಡ್ ವ್ಯಾಲಿಯೇ ನನ್ನ ಪ್ರಾಣವಾಗಿದೆ. ಈಗಿರುವ ಮನೆಯಿಂದ ಇಲ್ಲಿಗೆ ಮತ್ತೆಮತ್ತೆ ಬರಲು ಅತೀವ ಆಸೆಯುಂಟಾಗುತ್ತದೆ. ಒಂದು ಪಕ್ಷಿ ತನ್ನ ಗೂಡಿಗೇ ಮರಳುವ ಹಾಗೆ, ನಾನೂ ಸಹ ಪಿರಮಿಡ್ ವ್ಯಾಲಿಗೆ ಮರಳುತ್ತೇನೆ ಅನ್ನಿಸುತ್ತದೆ.

 

 

A. ಸತ್ಯವತಿದೇವಿ
ಬೆಂಗಳೂರು

Go to top