" ನಾನು ಧ್ಯಾನದಲ್ಲಿ ನೂರಾರು ಘಟನೆಗಳನ್ನು ನೋಡುತ್ತೇನೆ "

 

ನಾನು ಶಿವಕುಮಾರ ಹೊಸಮನಿ, ಗುಲಬರ್ಗಾ ಹೈಕೋರ್ಟಿನ ಬಾರ್ ಅಸೋಷಿಯೇಶನ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ನಾಲ್ಕು ವರ್ಷಗಳಿಂದ ಕೆಲಸದಲ್ಲಿ ಇದ್ದೇನೆ. ನನಗೆ ಮನಸ್ಸಿಗೆ ಶಾಂತಿಯಿರಲಿಲ್ಲ. ಆರೋಗ್ಯದ ತೊಂದರೆ ಮತ್ತು ಯಾವಾಗಲೂ ಆರ್ಥಿಕವಾಗಿ ಬಹಳತೊಂದರೆಯಲ್ಲಿದ್ದೆ. ಭಯದಿಂದ ಕಣ್ಣುಗಳು ಕೆಂಪಾಗಿ ಇರುತ್ತಿದ್ದವು. ಅಲ್ಲದೇ, ಟೈಪಿಸ್ಟ್ ಕೆಲಸದಲ್ಲಿ ಏಕಾಗ್ರತೆ ಇರುತ್ತಿರಲಿಲ್ಲದ ಕಾರಣ ನನ್ನ ಕಡೆ ಟೈಪಿಂಗ್ ಕೆಲಸಕ್ಕೆ ಬಂದವರಿಗೆ, ಸರಿಯಾಗಿ ಯಾವುದೇ ಒಂದು ತಪ್ಪಿಲ್ಲದೆ ಟೈಪ್ ಮಾಡಲು ಆಗುತ್ತಿರಲಿಲ್ಲ. ಇಂಥಹ ನನ್ನ ಕೆಟ್ಟಪರಿಸ್ಥಿತಿ ನೋಡಿ, ಶ್ರೀಮತಿ ನೀವಾ ಚಿಮಕೋಡ್, ಹೈಕೋರ್ಟ್ ವಕೀಲರು, ನನ್ನ ಪಾಲಿಗೆ ನನ್ನ ಜೀವನದಲ್ಲಿ ದೇವರು ಬಂದಂತೆ ಬಂದು "ಧ್ಯಾನ"ದ ಬಗ್ಗೆ ತಿಳಿಸಿದರು ಮತ್ತು ಧ್ಯಾನ ಹೇಳಿಕೊಟ್ಟು ಧ್ಯಾನ ಹೇಗೆ ಮಾಡಬೇಕು ತಿಳಿಸಿ, ಸ್ವಲ್ಪ ದಿವಸಗಳಲ್ಲಿ ನಿನ್ನ ಎಲ್ಲಾ ಸಮಸ್ಯೆಗಳು ವಾಸಿಯಾಗುತ್ತವೆ ಎಂದು ಹೇಳಿದರು. ಅದರಂತೆ ನಾನು ಪ್ರತಿದಿನ ಧ್ಯಾನ ಮಾಡಲು ಪ್ರಾರಂಭಿಸಿದೆ. 2011 ಅಕ್ಟೋಬರ್‌ನಲ್ಲಿ ಪತ್ರೀಜಿಯವರ ಧ್ಯಾನ ತರಗತಿಯಲ್ಲಿ ಪಾಲ್ಗೊಂಡ ದಿನದಿಂದ ನಿತ್ಯ ಧ್ಯಾನ ಮಾಡಲು ಪ್ರಾರಂಭಿಸಿದೆ.

 

ಈಗ ನನ್ನ ಜೀವನದಲ್ಲಿ ಸಂಪೂರ್ಣವಾದ ಬದಲಾವಣೆಗಳಾಗಿವೆ ಎಂದು ಹೇಳಲು ನನಗೆ ತುಂಬ ಹರ್ಷವಾಗುತ್ತದೆ. ನನ್ನ ಆತ್ಮಸ್ಥೈರ್ಯ ಹೆಚ್ಚಾಗಿದೆ. ಆರೋಗ್ಯದ ಸಮಸ್ಯೆ, ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆಯಾಗಿವೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ. ಅಲ್ಲದೆ, ನಾನು ಒಬ್ಬ ಹೊಸ ಮನುಷ್ಯನಾಗಿದ್ದೇನೆಂದು ಹೇಳಿದರೆ ಅತಿಶಯೋಕ್ತಿಯಲ್ಲ.  ನನ್ನ ಕಾಯಕವಾದ D.T.P. ಕೆಲಸವು ಬಹಳ ಚೆನ್ನಾಗಿ ಸುಧಾರಿಸಿದೆ. ಈಗ ನನ್ನ ಹೊಸ ಮನೆಯನ್ನು ಕಟ್ಟುವ ಕೆಲಸ ಪ್ರಗತಿಯಲ್ಲಿದೆ.  ನಾನು ಮನಸ್ಸಿನಲ್ಲಿ ಏನು 'Thought ಕೊಡುತ್ತೇನೆ ಅವೆಲ್ಲವು ಸಾಕಾರವಾಗುತ್ತವೆ. ಈ ನನ್ನ ಹೊಸ ಜೀವನಕ್ಕೆ ನಾನು ಶ್ರೀಮತಿ ನೀವಾ ಚಿಮಕೋಡ್ ವಕೀಲರು ಹೈಕೋರ್ಟ್ ಗುಲಬರ್ಗಾ, ಶ್ರೀಮತಿ ಭುವನೇಶ್ವರಿ ಚಿಮಕೋಡ್‌ರವರಿಗೆ, ಹಾಗೂ ಶ್ರೀ ವಿಜಯಕುಮಾರ್‌ರವರಿಗೆ ತುಂಬ ಋಣಿಯಾಗಿದ್ದೇನೆ. ಅಲ್ಲದೆ ಅದರೊಂದಿಗೆ ನನಗೆ ಸಮಯ ಸಿಕ್ಕಾಗೆಲ್ಲಾ ಧ್ಯಾನ ಮತ್ತು ಅದರ ಮಹತ್ವವನ್ನು ಜನರಿಗೆ ತಿಳಿಸುತ್ತಾ ಇದ್ದೇನೆ. 

 

ನನ್ನ ತಂಗಿ ಹೆರಿಗೆ ಹೋಗಿದ್ದಾಗ ಹೆರಿಗೆ ಮುಂಚೆ ನಾನು ಧ್ಯಾನದಲ್ಲಿ ನನ್ನ ತಂಗಿ ಯಾವ ಮಗುವಿಗೆ ಜನ್ಮ ಕೊಡುತ್ತಾಳೆ ಎನ್ನುವುದು ಧ್ಯಾನದಲ್ಲಿ ಹೆರಿಗೆ ಮುಂಚೆ ನೋಡಿದ್ದೇನೆ. ಅದರಂತೆ ಸರಳ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾಳೆ. ಇಂಥಹ ನೂರಾರು ಘಟನೆಗಳು ನಾನು ಧ್ಯಾನದಲ್ಲಿ ನೋಡುತ್ತಲ್ಲಿದ್ದೇನೆ. ‘ಧ್ಯಾನ ಕಸ್ತೂರಿ’ ಮಾಸಪತ್ರಿಕೆಗೆ ಚಂದಾದಾರನಾಗಿ ಪ್ರತಿ ತಿಂಗಳು ತಪ್ಪದೆ ಓದುತ್ತೇನೆ.

 

ಕೊನೆಯದಾಗಿ, ಧ್ಯಾನ ಜಗತ್ ನಿರ್ಮಿಸಲು ಹೊರಟಿರುವ ಗುರುಗಳಾದ ಶ್ರೀ ಸುಭಾಷ್ ಪತ್ರೀಜಿಯವರಿಗೆ ನನ್ನ ಕೋಟಿ ಕೋಟಿ ವಂದನೆಗಳು.

 

 ಶಿವಕುಮಾರ್ ಹೊಸಮನಿ
ಗುಲಬರ್ಗ

Go to top