ನಮ್ಮ ಅನಾರೋಗ್ಯಕ್ಕೆ ನಾವು ಮಾಡಿದ ಕರ್ಮಗಳೇ ಕಾರಣ "

 

 

ನನ್ನ ಹೆಸರು V.M.ಶೋಭಾ, ನನಗೆ 53 ವರ್ಷ. ನಮ್ಮ ಊರು ಚಿಂತಾಮಣಿ. ನನಗೆ 25 ವರ್ಷ ಇದ್ದಾಗಲಿಂದ ತಲೆನೋವು ತಿಂಗಳಿಗೊಂದು ಬಾರಿ ತುಂಬಾ ಬರುತ್ತಿತ್ತು. ಎಷ್ಟು ಆಸ್ಪತ್ರೆಯಲ್ಲಿ ತೋರಿಸಿದರೂ, ನಾಟಿವೈದ್ಯ ಮಾಡಿದರೂ, ಕಡಿಮೆ ಆಗಲಿಲ್ಲ. ತಲೆನೋವು ಬಂದಾಗ ಏನು ಮಾತನಾಡುತ್ತೇನೋ, ನನಗೇ ಅರಿವಿಲ್ಲದಂತಾಗುತ್ತಿತ್ತು. ಮತ್ತು ವಾಂತಿಯಾಗಿ ಶರೀರದಲ್ಲಿ ಶಕ್ತಿಯೇ ಇರುತ್ತಿರಲಿಲ್ಲ. ಈ ನಾಲ್ಕು ವರ್ಷಗಳಿಂದ ಪ್ರತಿದಿನ ತಲೆನೋವು ಬಂದು ಅದೇ ರೀತಿ ಆಗುತ್ತಿತ್ತು. ತಲೆಯಲ್ಲಿ 1 ವಾರದಲ್ಲಿ ತಲೆಕೂದಲು ಹಿಡಿ ಹಿಡಿಯಾಗಿ ಉದುರಿ ಹೋಗಿ ಸಣ್ಣದಾರದಂತಾಗಿತ್ತು. (ಟೋಪನ್ ಧರಿಸುವಂತಾಗಿತ್ತು) 

 

ನಮ್ಮ ಊರಿಗೆ ಮಾಸ್ಟರ್‌ಗಳು ಬಂದಾಗ ಕಾರಣ ಕೇಳಿದಾಗ, ನಾನು ಧ್ಯಾನದ ಅನುಭವ ಹೇಳಿದಾಗ ನೀನು ಯಾವುದೋ ಜನ್ಮದಲ್ಲಿ ಯಾರಿಗೋ ತಲೆಗೆ ಹಿಂಸೆಕೊಟ್ಟಿದ್ದೀಯ ಅದಕ್ಕೆ ಈ ರೀತಿ ಆಗುತ್ತಾ ಇದೆ. ದಿನಕ್ಕೆ 6 ಗಂಟೆ ಧ್ಯಾನ ಮಾಡು ಎಂದು ಹೇಳಿದರು. ಅದರಂತೆ ಮಾಡಿದೆ. ಈಗ ಕಡಿಮೆ ಆಗಿದೆ, ಪ್ರತಿದಿನ ಬರುತ್ತಾ ಇದ್ದದ್ದು 15-20 ದಿನಗಳಿಗೊಮ್ಮೆ ಬರುತ್ತಾ ಇದೆ. ಅಷ್ಟು ಜಾಸ್ತಿ ಇಲ್ಲ. ಬರುಬರುತ್ತಾ ಅದು ಕಡಿಮೆ ಆಗುತ್ತೆ ಎನ್ನುವ ನಂಬಿಕೆ ಇದೆ. ಅದೇರೀತಿ ಮಂಡಿ ನೋವು, ಕಾಲು ನೋವು ಇತ್ತು. ಕುಳಿತುಕೊಂಡರೆ ನಿಂತುಕೊಳ್ಳುವುಕ್ಕೆ 10 ನಿಮಿಷ ನಡೆಯಲು 10 ನಿಮಿಷ ಆಗುತ್ತಿತ್ತು. ‘ಕ್ರಾಪ್ ಸರ್ಕಲ್ ಮ್ಯಾಟ್’ ಮೇಲೆ ಕುಳಿತು ಧ್ಯಾನಮಾಡಿದ ಮೇಲೆ ಪೂರ್ತಿಯಾಗಿ ಕಡಿಮೆಯಾಗಿದೆ. ನನ್ನ ಕೂದಲು ಸಹ ಜಡೆ ಹಾಕಿಕೊಳ್ಳುವಷ್ಟು ಬೆಳೆದಿದೆ. ಆಸ್ಪತ್ರೆಯಲ್ಲಿ ತೋರಿಸಿದರೆ ಕೂದಲು ಬೆಳೆಯುವುದಿಲ್ಲ. ನಿಮಗೆ ವಯಸ್ಸಾಗಿದೆ ಎಂದು ಹೇಳಿದ್ದರು. ಧ್ಯಾನ ಮಾಡಿದರೆ ಸಂಪೂರ್ಣವಾಗಿ ಆರೋಗ್ಯ ಪಡೆಯಬಹುದೆಂದು ನಾನು ನಂಬಿದ್ದೇನೆ. "ನಮ್ಮ ಅನಾರೋಗ್ಯಕ್ಕೆ ನಾವು ಮಾಡಿದ ಕರ್ಮಗಳೇ ಕಾರಣ" ಎಂದು ಈಗ ತಿಳಿದುಕೊಂಡಿದ್ದೇನೆ. 

 

ಅದೇ ರೀತಿ ಆರ್ಥಿಕವಾಗಿ, ಕುಟುಂಬದಲ್ಲಿ ಸಂತೋಷವಾಗಿ ಇರಬೇಕೆಂದರೆ, ನೆಂಟರಿಷ್ಟರಲ್ಲಿ, ಸ್ನೇಹಿತರಲ್ಲಿ, ಅಕ್ಕಪಕ್ಕದವರಲ್ಲಿ ಸಂತೋಷವಾಗಿ ಇರಬೇಕೆಂದರೆ, ಅವರ ಸಹಾಯ ಪಡೆಯಬೇಕೆಂದರೆ ನಮ್ಮ ಕರ್ಮಗಳೇ ಕಾರಣ ಎಂದು ತಿಳಿದುಕೊಂಡಿದ್ದೇನೆ. ಮೊದಲು ನಮ್ಮನ್ನು ನಾವು ನಂಬಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಕರ್ಮಗಳಿಂದ ಮುಕ್ತಿ ಹೊಂದಬಹುದು ಎಂದು ಈ ಧ್ಯಾನ ನನಗೆ ತಿಳಿಸಿಕೊಟ್ಟಿದೆ. 

 

ನನಗೆ ಒಬ್ಬಳೇ ಮಗಳು. ಅವಳು ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ ನಾವು ಆರ್ಥಿಕವಾಗಿ ಹೇಳಿಕೊಳ್ಳುವಂತೇನಿಲ್ಲ. ಆದರೂ ಕಷ್ಟಪಟ್ಟು ಓದಿಸಬೇಕು ಎನ್ನುವ ಛಲದಿಂದ, ಅವಳ ಆಸೆಯಂತೆ ಉನ್ನತವ್ಯಾಸಂಗಕ್ಕೆ ಸೇರಿಸಿದೆವು.  ಸೇರಿಸುವಾಗ ಪರವಾಗಿಲ್ಲ, ಇದ್ದಕಿದ್ದಂತೆ ಏಜನ್ಸಿಯಲ್ಲಿ ಲಾಸ್ ಬಂದಿತು. ಹಣವೇ ಇಲ್ಲದಂತಾಯಿತು. ನನ್ನ ಮಗಳ ಗುರಿಯೊಂದೇ ಕುರಿತು ಧ್ಯಾನಮಾಡೋಣ, ಅದೇ ನಮಗೆ ಅನುಕೂಲಮಾಡಿಕೊಡುತ್ತದೆ ಎಂದು ನಂಬಿದೆವು. ಅದೇ ರೀತಿ ಎರಡು ವರ್ಷಗಳಿಂದ ನಮಗೆ ತಿಳಿಯದೇ ಆಯಾ ವೇಳೆ ಹಣ ಅನುಕೂಲವಾಯಿತು. ಇನ್ನೂ 2 ವರ್ಷ ಇದೆ. ಅದೇ ರೀತಿ ಅನುಕೂಲ ಆಗುತ್ತೆ ಎಂದು ನಂಬಿದ್ದೇವೆ. 

 

ಎಲ್ಲದಕ್ಕೂ ಸಮಾಧಾನ ಎಂದರೆ ಪಿರಮಿಡ್ ಧ್ಯಾನ. ಇದನ್ನು ತಿಳಿಸಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ಅನಂತ ವಂದನೆಗಳು. ನನಗೆ ತಲನೋವು ಬಂದಾಗ ಚಿಕ್ಕನಾಯಕನಹಳ್ಳಿಯಲ್ಲಿರುವ ನನ್ನ ಅತ್ತಿಗೆಯ ಸ್ನೇಹಿತೆ ಶ್ರೀಮತಿ ರೂಪ ಎನ್ನುವರು ನನಗೆ ಈ ಧ್ಯಾನದ ಪರಿಚಯಮಾಡಿದರು. ಅನಂತರ ಚಿಂತಾಮಣಿಯಲ್ಲಿರುವ ಧ್ಯಾನದ ಸಂಘದವರಿಂದ, ಚಿಂತಾಮಣಿಯ ಪದ್ಮಲತಾಳ ಸಹಾಯದಿಂದ ಮುಂದುವರಿಸಿದೆ. ಸಾಧ್ಯವಾದಷ್ಟು ನಾನು ದಿನಕ್ಕೆ ಆರು ಗಂಟೆ ಧ್ಯಾನ ಮಾಡುತ್ತೇನೆ. ನನಗೆ ತುಂಬಾ ಅನುಭವಗಳಾಗಿದೆ. ಈ ಧ್ಯಾನದ ಬಗ್ಗೆ ಎಷ್ಟು ಹೇಳಿದರೂ ಸಾಲದು. 

 

ಶೋಭ
ಚಿಂತಾಮಣಿ
ಫೋನ್ : +91 9980981190

Go to top