" ಧ್ಯಾನದಿಂದ ಜ್ಞಾನ ಜ್ಞಾನದಿಂದ ಮುಕ್ತಿ "

 

 

ನನ್ನ ಹೆಸರು ಶೋಭಲಿಂಗರಾಜು. ನಮ್ಮೂರು ದಾವಣಗೆರೆ 14ನೇ ವಾರ್ಡ್ ಬಸಾಪುರ ಗ್ರಾಮ. ಧ್ಯಾನದಿಂದ ಜ್ಞಾನ-ಜ್ಞಾನದಿಂದ ಮುಕ್ತಿ. ಇದು ಎಲ್ಲರ ಅನಿಸಿಕೆ. ಧ್ಯಾನದಿಂದ ಆರೋಗ್ಯ. ಧ್ಯಾನದಿಂದ ರೋಗ ಸಂಪೂರ್ಣ ಮುಕ್ತಿ. ಇದು ನನ್ನ ಸ್ವತಃ ಅನುಭವ. ನಾನು ಈಗ ಸುಮಾರು 6 ವರ್ಷಗಳಿಂದ ಧ್ಯಾನ ಮಾಡುತ್ತಾ ಬಂದಿದ್ದೇನೆ. ಎಲ್ಲರೂ ಹೇಳುವಹಾಗೆ ಧ್ಯಾನದಿಂದ ಅನೇಕ ಅನುಭವಗಳು ಆಗಿವೆ. ನನಗೆ ಥೈರಾಯಿಡ್ ಪ್ರಾಬ್ಲಮ್, ಸಂಧಿವಾತ ಇತ್ತು, ಹಾಗು ನನ್ನ ದೇಹದಲ್ಲಿ ರಕ್ತದ ಉತ್ಪಾದನೆ ಇರಲಿಲ್ಲ, ನಡೆಯಲು ಶಕ್ತಿ ಇರಲಿಲ್ಲ. ಹಾಸಿಗೆ ಹಿಡಿದಿದ್ದೆ. ಡಾಕ್ಟರ್ ಬಳಿ ಹೋದರೆ ನಿನಗೆ ಇನ್ನು ಮೇಲೆ ಕೆಲಸ ಮಾಡುವ ಶಕ್ತಿ ಬರಲ್ಲ. ನೀನು ಸಂಪೂರ್ಣ ವಿಶ್ರಾಂತಿಯಲ್ಲಿ ಕಾಲ ಕಳೆಯಬೇಕೆಂದು ಸೂಚಿಸಿದರು. ಆಗ ಇಬ್ಬರು ಮಕ್ಕಳು ಇನ್ನೂ ಚಿಕ್ಕವರು, ನಮಗೆ ಯಾರ ಆಸರೆಯೂ ಇರಲಿಲ್ಲ. ನಾನು ಸ್ವತಃ ಕೆಲಸಗಳನ್ನು ನಾನೇ ಮಾಡಬೇಕೆಂದು ನಿಶ್ಚಯ ಮಾಡಿಕೊಂಡಿದ್ದೆ. ಆಗ ಕೆಲವರ ಸಲಹೆಯಿಂದ ನಾನು ಧ್ಯಾನವನ್ನು ಮಾಡಲಿಕ್ಕೆ ಪ್ರಾರಂಭಮಾಡಿದೆ. ಆಗ ನನಗೆ ಕುಳಿತುಕೊಂಡು ಧ್ಯಾನ ಮಾಡುವ ಶಕ್ತಿ ಇರಲಿಲ್ಲ. ಆದ್ದರಿಂದ, ಮಲಗಿಕೊಂಡು ಧ್ಯಾನ ಪ್ರಾರಂಭ ಮಾಡಿದೆ. ಆಗ ನನ್ನಲ್ಲಿ ಹೊಸ ಚೈತನ್ಯ ಬಂತು. ಈಗ ದಿನಪೂರ್ತಿ ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡುತ್ತಾ ಇರುತ್ತೇನೆ. ನಮ್ಮ ಮನೆಯವರ ಹೆಸರು ರಾಜಣ್ಣ. ಇವರಿಗೆ ಮೊದಲು ಧ್ಯಾನದಲ್ಲಿ ನಂಬಿಕೆ ಇರಲಿಲ್ಲ. ಆಗ ನಾನು ಧ್ಯಾನದಲ್ಲಿ ಸಂಕಲ್ಪ ಮಾಡುತ್ತಾ ಬಂದೆ. ಅವರು ಸಹ ಈಗ ಧ್ಯಾನ ಮಾಡುತ್ತಾರೆ. ನಾವು ಕೊಡ್ಲಿಗಿ ಹಾಗು ಬೆಂಗಳೂರಿನ ಪಿರಾಮಿಡ್ ವ್ಯಾಲಿಗೂ ಸಹ ಬೇಟಿ ಮಾಡಿದ್ದೇವೆ. ಈಗ ನಮ್ಮ ಕುಟುಂಬ ಧ್ಯಾನದ ಕುಟುಂಬ ಆಗಿದೆ ಮತ್ತು ನಮ್ಮ ಊರಿನಲ್ಲಿ ನಡೆದ 41 ದಿನದ ಮಂಡಲ ಧ್ಯಾನ ಸಮಾರಂಭ ಬಹಳ ಅದ್ದೂರಿಯಿಂದ ನಡೆಯಿತು. ಗ್ರಾಮದ ಪ್ರತಿಯೊಬ್ಬರೂ ಸಹ ಭಾಗವಹಿಸಿದರು. ಗೌರಿಬಿದನೂರಿನ ವರಾಹಮೂರ್ತಿಯವರ ಉಪನ್ಯಾಸ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಇದೆಲ್ಲಾ ಕೇವಲ ಧ್ಯಾನದಿಂದ ಮಾತ್ರ ಸಾಧ್ಯ. ಆದ್ದರಿಂದ, ಎಲ್ಲರೂ ಧ್ಯಾನವನ್ನು ಮಾಡಿ, ಈ ಜಗತ್ತನ್ನು ಧ್ಯಾನ ಜಗತ್ತನ್ನು ಮಾಡೋಣ ಎಂದು ಎಲ್ಲರಲ್ಲಿ ಕೇಳಿಕೊಳ್ಳುತ್ತೇನೆ. ನಮಗೆ ಧ್ಯಾನದ ಬಗ್ಗೆ ಅರಿವು ಮೂಡಿಸಿದ ದಾವಣಗೆರೆ ಶ್ರೀನಿವಾಸರೆಡ್ಡಿಯವರಿಗೆ ವಂದಿಸುತ್ತೇನೆ.

 

 

ಶೋಭ K.H ಲಿಂಗರಾಜು
ಬಸಾಪುರ,
ದಾವಣಗೆರೆ
ಮೊಬೈಲ್ : +91 9964062057

Go to top