" ಓದುವುದರಲ್ಲಿ ತುಂಬಾ ಆಸಕ್ತಿ ಉಂಟಾಗಿದೆ "

 

 

41 ದಿನಗಳ ಮಂಡಲ ಧ್ಯಾನವನ್ನು ಮಾಡಿದ್ದೇನೆ.  ಅದೇ ರೀತಿ ದಿನ ನಿತ್ಯ ಧ್ಯಾನವನ್ನು ಮಾಡುತ್ತಿದ್ದೇನೆ.  ನನಗೆ ತುಂಬಾ ಸಂತೋಷವಾಗುತ್ತಿದೆ.  ನನಗೆ ಓದುವುದರಲ್ಲಿ ತುಂಬಾ ಆಸಕ್ತಿ ಉಂಟಾಗಿದೆ.  ನನಗೆ ಆಗಾಗ ತಲೆನೋವು ಬರುತ್ತಿತ್ತು. ಈಗ ಅದು ಕಡಿಮೆಯಾಗಿದೆ. ಧ್ಯಾನ ಮಾಡುವುದರಿಂದ ದೈಹಿಕವಾದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ, ಮಾನಸಿಕ ನೆಮ್ಮದಿ ದೊರೆಯಿತು. ಅದೇ ರೀತಿ ಧ್ಯಾನ ಮಾಡಿದಾಗ ನೋವುಗಳೆಲ್ಲಾ ಶಮನವಾಗಿ ತುಂಬಾ ಆನಂದವಾಯಿತು. ನಾನು ಧ್ಯಾನ ಮಾಡುವುದರಿಂದ ಆತ್ಮವಿಶ್ವಾಸ, ಏಕಾಗ್ರತೆಯ ಶಕ್ತಿ, ಮಾನಸಿಕ ಶಾಂತಿ ಎಲ್ಲವೂ ಲಭಿಸಿದೆ.  ಧ್ಯಾನದಿಂದಲೇ ಜ್ಞಾನ, ಜ್ಞಾನದಿಂದಲೇ ಜೀವನ ಪರಿಪೂರ್ಣವಾಗಿರುತ್ತದೆ. ನಾನು ಧ್ಯಾನವನ್ನು ಮಾಡಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕು ಅನಿಸುತ್ತದೆ.

 

 

ಶೃತಿ.D
ಬಸಾಪುರ, 
ದಾವಣಗೆರೆ

Go to top