" ಧ್ಯಾನ ಶಿಬಿರದಿಂದ ನನಗಾದ ಅನುಭವಗಳು ಮತ್ತು ಅನುಕೂಲಗಳು "

 

ಈ ಧ್ಯಾನ ಶಿಬಿರಕ್ಕೆ ಮೊದಲು ಒಂದು ವಾರ ಹೋದಾಗ ನನಗೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಮತ್ತು ಯಾವ ಅನುಭವವೂ ಆಗಲಿಲ್ಲ. ಹಾಗೇ ದಿನಕಳೆದಂತೆ ಮನಸ್ಸನ್ನು ಶ್ರದ್ಧೆಯಿಂದ ಧ್ಯಾನದಲ್ಲಿ ಕೇಂದ್ರೀಕರಿಸಲು ಪ್ರಯತ್ನಿಸಿದಾಗ ಮನಸ್ಸಿನಲ್ಲಿ ನೆಮ್ಮದಿಯ ವಾತಾವರಣ ಮೂಡಲು ಶುರುವಾಯಿತು.

 

ನನಗೆ ಆಗಾಗ ತಲೆಸುತ್ತು ಬರುತ್ತಿತ್ತು. ಮೈಕೈ ನೋವು, ಕೆಲಸವನ್ನು ಮಾಡಲು ಹೋದರೆ ಮನಸ್ಸೇ ಬರುತ್ತಿರಲಿಲ್ಲ. ಈ ಧ್ಯಾನವನ್ನು ಮಾಡುತ್ತ ಮಾಡುತ್ತ ಹೋದಂತೆಲ್ಲ ಕೆಲಸದಲ್ಲಿ ಉತ್ಸಾಹ, ಆನಂದ, ಮಾತಿನಲ್ಲಿ ಸರಳತೆ ಹೀಗೆ ಮನಸ್ಸಿಗೆ ತುಂಬಾ ಸಂತೋಷ, ಆನಂದವಾಗುತ್ತದೆ. ಈ ಮೊದಲು ತಲೆನೊವು, ಮೈಕೈ ನೋವು, ಸೊಂಟ ನೋವು, ಮನಸ್ಸಿನಲ್ಲಿ ಅನೇಕ ರೀತಿಯ ಚಿಂತೆಗಳು ಬರುತ್ತಿದ್ದವು. ಬರಬರುತ್ತಾ ಈ ಎಲ್ಲಾ ಅಡಚಣೆಗಳೂ ಮಾಯವಾಗಿದಂತಾಗಿದೆ.

 

ಈ ಧ್ಯಾನವನ್ನು ಎಲ್ಲಾ ಜನರೂ ಮಾಡಬೇಕು. ಹೀಗೆ ಎಲ್ಲರೂ ಒಂದೇ ಬಾರಿ ಧ್ಯಾನ ಮಾಡುವುದರಿಂದ ಸಂಘಟನೆ ಮತ್ತು ಶಕ್ತಿ ಬರುತ್ತದೆ. ಈ ರೀತಿ ಪಿರಮಿಡ್ ಧ್ಯಾನ ಹೇಳಿ ಕೊಡಲು ಬಂದವರು ನಮಗೆ ಚೆನ್ನಾಗಿ ತಿಳುವಳಿಕೆ ನೀಡಿದರು. ಈ ಧ್ಯಾನ ಶಿಬಿರದಿಂದ ನನಗಾದ ಸಂತೋಷಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದ ಸಂಘಟಿಕರಿಗೆ ಮನಃಪೂರ್ವಕವಾಗಿ ವಂದಿಸುತ್ತೇನೆ, ಹಾಗೂ ಅಭಿನಂದಿಸುತ್ತೇನೆ.

 

ಸಿದ್ದಪ್ಪ
ಆನೆಕೊಂಡ

Go to top