" ಈಜಿಪ್ಟ್‌ಗೆ ಹೋಗುತ್ತಿದ್ದೇನೆಂದರೆ ನನಗೆ ಮರೆಯಲಾಗದ ಅದ್ಭುತ ಘಟನೆ "

 

ನನ್ನ ಹೆಸರು ಶಿರೀಷ, ಊರು ಬೆಂಗಳೂರು. ನಾನು ಈಜಿಪ್ಟ್‌ಗೆ ಹೋಗುತ್ತಿದ್ದೇನೆಂದರೆ ನನಗೆ ಮರೆಯಲಾಗದ ಅದ್ಭುತ ಘಟನೆ. ನಾನು "ರಹಸ್ಯ" ಅನ್ನು ಪುಸ್ತಕ ಓದಿದ ಮೇಲೆ, ನನ್ನಲ್ಲಿ ಬಂದ ಬದಲಾವಣೆಯಿಂದ ನನಗೆ ಅನುಕೂಲವಿಲ್ಲದ ವಿಷಯಗಳೆಲ್ಲಾ ಅನುಕೂಲಕರವಾಗಿತ್ತು ಆದ್ದರಿಂದ ನನಗೆ ಈಜಿಪ್ಟ್‌ಗೆ ಧ್ಯಾನ ಯಾತ್ರೆಗೆ ಹೋಗಲು ಸಹಾಯವಾಯಿತು.

 

ನೈಲು ನದಿಯಲ್ಲಿ ಕ್ರೂಜ್ ಪ್ರಯಾಣ ನಮಗೆ ತುಂಬಾ ಸಂತೋಷ ತಂದಿತ್ತು. ಹುಣ್ಣಿಮೆಯ ದಿನ ನಾವು ಧ್ಯಾನ ಮಾಡುತ್ತಿರುವಾಗ ಬುದ್ಧ, ಮಹಾವತಾರ್ ಬಾಬಾಜಿ, ಈಜಿಪ್ಟಿಯನ್ ಮಾಸ್ಟರ‍್ಸ್ ಹಾಗೆ ಎಷ್ಟೋ ಮಾಸ್ಟರ‍್ಸ್ ಅಲ್ಲಿಗೆ ಬಂದಿದ್ದರು. ಪತ್ರೀಜಿ ಈಜಿಪ್ಟ್ ಯಾತ್ರೆಯ ಮೊದಲಿನಿಂದ ಕೊನೆಯ ವರೆಗೆ ನಮ್ಮ ಜೊತೆಯಲ್ಲಿಯೇ ಇದ್ದರು. ಆ ಶಕ್ತಿಯನ್ನು ನಾವೆಲ್ಲರೂ ತುಂಬಾ ಅನುಭವಿಸಿದೆವು. ಹುಣ್ಣಿಮೆಯ ದಿನ ಕೋಣೆಯೆಲ್ಲಾ ಸುಗಂಧದ ಪರಿಮಳ ತುಂಬಿತ್ತು.

 

ನಾವೆಲ್ಲರೂ ಎದುರು ನೋಡುತ್ತಿದಂತಹ ಗೀಜಾ ಪಿರಮಿಡ್ ನಮ್ಮ ಕಣ್ಣು ಮುಂದೆ ಬಂದೆ ಬಿಟ್ಟಿತ್ತು. ಒಳಕ್ಕೆ ಹೋದ ತಕ್ಷಣವೇ ಯೋಚನಾ ರಹಿತ ಸ್ಥಿತಿಗೆ ಹೋದೆವು. ಕಿಂಗ್ಸ್ ಚೇಂಬರ್‌ನಲ್ಲಿ ಕುಳಿತು ಧ್ಯಾನ ಮಾಡುತ್ತಿರುವಾಗ ಅತ್ಯಂತ ಹೆಚ್ಚಿನ ಶಕ್ತಿಯನ್ನು ಪಡೆದೆವು. ಅಲ್ಲಿ ನನಗೆ ಒಂದು ಮೆಸ್ಸೇಜ್ ಬಂತು "ಯು ಆರ್ ಎನ್‌ಲೈಟೆನ್ಡ್" ಅಲ್ಲಿ ನಮಗೆ ಏಕತಾ ಭಾವನೆ ಬಂತು. ಅಲ್ಲಿ ನಾನು ನನ್ನ ಹಿಂದಿನ ಜನ್ಮಗಳನ್ನು ನೋಡಿಕೊಂಡೆ. ಒಟ್ಟಾರೆ ಈಜಿಪ್ಟ್ ಧ್ಯಾನ ಯಾತ್ರೆಯು ತುಂಬಾ ಸಂತೋಷ ಮತ್ತು ಅದ್ಭುತವಾಗಿ ಮುಗಿಸಿದೆವು. ಈ ಅವಕಾಶ ಕೊಟ್ಟಂತಹ ಪತ್ರೀಜಿಯವರಿಗೆ ನನ್ನ ಅನಂತ ವಂದನೆಗಳು ಮತ್ತು ನನಗೆ ಈಜಿಪ್ಟ್ ಧ್ಯಾನ ಯಾತ್ರೆಗೆ ಹೋಗಲು ಸಹಕರಿಸಿದ ನನ್ನ ಪತಿಗೆ ನನ್ನ ವಂದನೆಗಳು.

 

ಶಿರೀಷ ಪಾಮಿಡಿ
ಬೆಂಗಳೂರು

Go to top