" ಅವರು ತೋರಿಸುವ ಆದರಣೆ ಹಡೆದ ತಂದೆಯ ಪ್ರೀತಿ ನೆನೆಪಿಗೆ ಬರುತ್ತದೆ "

 

 

 

ನನ್ನ ಹೆಸರು ಶ್ರೀಲಕ್ಷಿ. ನಾನು ಧ್ಯಾನಕ್ಕೆ ಹೆಜ್ಜೆ ಇಟ್ಟಿದ್ದು ಡಿಸೆಂಬರ್ 1988ರಲ್ಲಿ. ಆಗಿಂದ ಪತ್ರೀಜಿಯವರನ್ನು ಭೇಟಿಯಾದಾಗಲೆಲ್ಲಾ ಅನೇಕ ಹೊಸ ವಿಷಯಗಳನ್ನು ಕಲಿತುಕೊಳ್ಳುತ್ತಲೇ ಇದ್ದೇನೆ!

 

ನಾನು ಪ್ರಥಮ ಬಾರಿ ಪತ್ರೀಜಿಯವರನ್ನು ಕರ್ನೂಲ್‌ನಲ್ಲಿ ಭೆಟಿಯಾದೆ. ಆಗ ಅವರು ಅಲ್ಲಿ ಟೇಬಲ್ ಮೇಲೆ ಇರುವ "ಪ್ರವಕ್ತ" ಎಂಬುವ ಪುಸ್ತಕವನ್ನು ತೆಗೆದು ಅದರಕಡೆ ನೋಡದೇನೆ ಒಂದು ಪೇಜ್ ತೆರೆದು "ಇದು ಓದಿ" ಎನ್ನುತ್ತಾ ಆ ಪುಸ್ತಕವನ್ನು ನನಗೆ ಕೊಟ್ಟು ಹೊರಗೆ ಹೊರಟುಹೋದರು. ಅದರಲ್ಲಿ "ನಿಮ್ಮ ಮಕ್ಕಳು ನಿಮ್ಮಿಂದ ಬಂದಿದ್ದಾರೆ; ಅವರು ನಿಮ್ಮ ಮಕ್ಕಳಲ್ಲ; ಅಟಾಚ್‌ಮೆಂಟ್ಸ್ ನಲ್ಲಿ ಡಿಟಾಚ್‌ಮೆಂಟ್ ನೋಡಬೇಕು" ಎಂದು ಬರೆದಿದೆ. "ನನಗೆ ಮಕ್ಕಳಂದರೆ ತುಂಬ ಅನುಬಂಧ. ಆದ್ದರಿಂದ ಕೊಟ್ಟರೇನೊ" ಎಂದುಕೊಂಡೆ. ನಂತರ ಕೂಡ ಅನೇಕ ಬಾರಿ ಮಕ್ಕಳ ಕುರಿತು, ಅನುಬಂಧಗಳನ್ನು ಕುರಿತು ನನಗೆ ಹೇಳುತ್ತಿದ್ದರು. ಆದರೆ, ಅವರು ಒಂದು ಮಹಾಘಟನೆಗೆ ಹತ್ತು ವರ್ಷಗಳ ಮುಂಚಿತವಾಗಿಯೇ ನನ್ನನ್ನು ಸಿದ್ಧತೆ ಮಾಡಿದ್ದಾರೆಂದು 2008 ಮಾರ್ಚ್ 14ನೇ ದಿನಾಂಕ ನನ್ನ ದೊಡ್ಡ ಮಗಳು ದೇಹತ್ಯಾಗ ಮಾಡಿದ ದಿನ ತಿಳಿದುಬಂತು. ಪತ್ರೀಜಿ ಎಲ್ಲಾ ತಿಳಿದಿರುವ ಮಹಾಜ್ಞಾನಿ ಆದರೂ ಸಹ... ಏನು ತಿಳಿಯದ ಹಾಗೆ ಇರುವ ನಿಗರ್ವಿ.

 

*   *   *

 

ಪ್ರಾರಂಭದಲ್ಲಿ ನಾವು ವಿಜಯವಾಡದಲ್ಲಿ ವಾಸ ಮಾಡುತ್ತಿದ್ದು, ಅಲ್ಲಿ ಸಾರ್ ಒಂದು ದಿನ "ಮೇಡಮ್ ನಿಮ್ಮ ವಾಕ್ಕ್ಷೇತ್ರ ಚೆನ್ನಾಗಿದೆ; ನೀವು ಕ್ಲಾಸೆಸ್ ತೆಗೆದುಕೊಳ್ಳುತ್ತೀರಿ; ಪ್ರಪಂಚಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತೀರಿ" ಎಂದರು. ಆಗ ನಾನು "ನಾನಾ? ಕ್ಲಾಸೆಸ್ ತೆಗೆದುಕೊಳ್ಳುವುದಾ? ನಾನು ಹೇಗೆ ಹೇಳಬಲ್ಲೆ?" ಎಂದುಕೊಂಡೆ. ಇದು ನಡೆದ ಐದು ವರ್ಷಗಳ ನಂತರ ನಾನು ಸ್ಕೂಲ್ಸ್ಗೆ ಹೋಗಿ ಮಕ್ಕಳಿಗೆ ಧ್ಯಾನ ಹೇಳಿಕೊಡಲು ಆರಂಭಿಸಿದೆ ! ಇದುವರೆಗೂ ಸಾವಿರಾರು ಜನ ಮಕ್ಕಳಿಗೆ ಧ್ಯಾನ ಹೇಳಿಕೊಟ್ಟಿದ್ದೇನೆ! ಅನೇಕ ಕ್ಲಾಸೆಸ್ ತೆಗೆದುಕೊಳ್ಳುತ್ತಿದ್ದೇನೆ! ತನ್ನ ಶಿಷ್ಯರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ, ಆತ್ಮ ವಿಶ್ವಾಸದಿಂದ ಅವರು ಮುನ್ನಡೆಯುವ ಹಾಗೆ ಮಾಡುತ್ತಾರೆ ಪತ್ರೀಜಿ! ಅವರ ಬಾಯಿಂದ ಯಾವ ಒಂದು ಮಾತು ಸಹ ವ್ಯರ್ಥವಾಗಿ ಬರುವುದಿಲ್ಲ.. ಎಂದು ನನಗೆ ಅರ್ಥವಾಯಿತು. ಅವರ ಮಾತುಗಳು ದೊಡ್ಡ ಶಕ್ತಿ ಧಾರೆಗಳು ಇದ್ದಹಾಗೆ ! ದಟೀಜ್ ಪತ್ರೀಜಿ !!

*   *   *

ನಮ್ಮ ಯಜಮಾನರು.. "ಶ್ರೀರಾಮ್" ಅವರು... ಉದ್ಯೋಗದ ಸಲವಾಗಿ ಮುಂಬಯಿನಲ್ಲಿ ನಾಲ್ಕು ವರ್ಷಗಳಿದ್ದರು. ಆಗ ನಾನು, ಮಕ್ಕಳು ಮೊದಲು ವಿಜಯವಾಡದಲ್ಲಿ, ನಂತರ ಹೈದರಾಬಾದ್‌ನಲ್ಲಿ ಇರುತ್ತಿದ್ದೆವು. ಪತ್ರೀಜಿಗೆ ಯಾವತ್ತಿಗೂ ವೈಯಕ್ತಿಕ ಸಮಸ್ಯೆಗಳನ್ನು ಹೇಳುವ ಅಭ್ಯಾಸವಿಲ್ಲ. ಆದರೆ, ಆ ದಿನ ಸಾರ್ ಮನೆಗೆ ಹೋದಾಗ ನನ್ನೊಳಗಿಂದ "ಸಾರ್‌ನ ಕೇಳು, ಕೇಳು" ಎಂದನಿಸಿತು. ಆಗ ನಾನು ಪತ್ರೀಜಿಯವರನ್ನು "ಸಾರ್ ಇನ್ನೂ ಎಷ್ಟು ವರ್ಷಗಳು ನಾವು ಒಂದು ಕಡೆ, ಶ್ರೀರಾಮ್ ಒಂದು ಕಡೆ...? ನಮಗೆ ಇನ್ನೂ ಎಷ್ಟು ದಿನ ಈ ಪರೀಕ್ಷೆ?" ಎಂದು ಕೇಳಿದೆ. ಅವರು ನನ್ನ ಕಡೆ ನೋಡಿ "ಟಾಟಾ ಕಂಪೆನಿ ನನ್ನ ಜೇಬಿನಲ್ಲಿದೆ; ನಾನು ಹೇಳಿದ ತಕ್ಷಣ ನಿಮ್ಮ ಯಜಮಾನರನ್ನು ಕಳಿಸಿಬಿಡುತ್ತಾರೆ" ಎಂದರು. ನಾನೇನು ಮಾತನಾಡಲಿಲ್ಲ. ಒಂದು ನಂಬಿಕೆಯಿಂದ ಮನೆಗೆ ಬಂದುಬಿಟ್ಟೆ.

 

ನಂತರ, ಹತ್ತು ದಿನಗಳಲ್ಲಿ ಟಾಟಾ ಕಂಪೆನಿಯವರು ಶ್ರೀರಾಮ್‌ನು ಕರೆದು "ನಾವು ಕರೆದಾಗಲೆಲ್ಲಾ ನೀವು ಮುಂಬಾಯಿಗೆ ಬಂದಿದ್ದೀರ, ಅದಕ್ಕೆ ನೀವು ನಿಮ್ಮ ಕುಟುಂಬ ಸದಸ್ಯರಿಗೆ ಹತ್ತಿರವಿದ್ದು, ಹೈದರಾಬಾದ್‌ನಿಂದಲೇ ಕೆಲಸ ಮಾಡಿ" ಎಂದು ಹೇಳಿದರು! ಇದು ನಿಜವಾಗಲೂ ಒಂದು ಅದ್ಭುತ, ಒಂದು ಮಿರಾಕೆಲ್!! ಏಕೆಂದರೆ, ಅವರ ಪೋಸ್ಟಿಂಗ್ ಮುಂಬಾಯಿನಲ್ಲಿ ವಿನಹ ಹೈದರಾಬಾದ್‌ನಲ್ಲಿ ಇಲ್ಲ, ಇಲ್ಲಿಂದಲೇ ಅಲ್ಲಿಗಾಗಿ ಕೆಲಸ ಮಾಡಿ ಎಂದು ಹೇಳಿದರು. ಇದು ತುಂಬಾ ಅಪರೂಪ! ಇದು ನನ್ನ ಗುರುಗಳು ನನಗೆ ನೀಡಿದಂತಹ ಅದ್ಭುತವಾದ ವರ ! "ಗುರುಗಳು ಸದಾ ತನ್ನ ಶಿಷ್ಯರನ್ನು ನೋಡಿಕೊಳ್ಳುತ್ತಾರೆ" ಎಂಬುವುದಕ್ಕೆ ಇದು ಮಹಾನಿದರ್ಶನ... ದಟೀಜ್ ಪತ್ರೀಜಿ!!

 

*   *   *

 

ಕಳೆದ ವರ್ಷ... 2008 ಡಿಸೆಂಬರ್ ತಿಂಗಳ ಕೊನೆಯ ದಿನಗಳಲ್ಲಿ "ಬೆಂಗಳೂರು ಧ್ಯಾನ ಮಹಾಯಜ್ಞ" ದಲ್ಲಿ ಒಂದು ದಿನ "ಡಾಕ್ಟರ್ ರೇಮಂಡ್ ಮೂಡಿ"ಯವರು ಕ್ಲಾಸ್ ತೆಗೆದುಕೊಂಡರು. ಅವರ ಉಪನ್ಯಾಸವೆಲ್ಲಾ ಕೇಳಿದನಂತರ "ಅವರನ್ನು ಭೇಟಿಯಾಗಬೇಕು; ಅವರ ಜೊತೆ ಮಾತನಾಡಬೇಕು" ಎಂದು ತುಂಬಾ ಕೋರಿಕೆಯಾಯಿತು. ಆದರೆ, ಅವರ ಸುತ್ತಾ ವಿಪರೀತವಾಗಿ ಜನ... "ಭೇಟಿಯಾಗಲು ಸಾಧ್ಯವಿಲ್ಲವೇನೊ" ಎಂದುಕೊಳ್ಳುತ್ತಾ ಊಟ ಮಾಡಲು ಡೈನಿಂಗ್ ಹಾಲ್ ಕಡೆ ಹೋದೆ. ಅಲ್ಲಿಗೆ ಪತ್ರೀಜಿ ರೇಮಂಡ್‌ಮೂಡಿರವರನ್ನು ಊಟಕ್ಕೆ ಕರೆದುಕೊಂಡು ಬಂದರು, ಊಟ ಆದನಂತರ ಪತ್ರೀಜಿ ಅವರನ್ನು ಕರೆದುಕೊಂಡು ಹೊರಗೆ ಹೋಗುತ್ತಿದ್ದಾರೆ. ಅನೇಕ ಜನರಿದ್ದರು. ನಾನು ನೋಡುತ್ತಾ ನಿಂತುಕೊಂಡೆ, ಪತ್ರೀಜಿ... ಆಚೆ ಹೋದವರು ಒಂದು ಕ್ಷಣ ನಿಂತು "ಮೇಡಮ್! ನೀವು ಇವರನ್ನು ಭೇಟಿಯಾಗಬೇಕೆಂದುಕೊಂಡರಲ್ಲವೆ, ಬನ್ನಿ" ಎಂದು ಕರೆದರು! ಹೋಗಿ ಷೇಕ್‌ಹ್ಯಾಂಡ್ ಕೊಟ್ಟು "ಅವರು ಹೊರಟು ಹೋಗುತ್ತಿದ್ದಾರಲ್ಲವೆ... ಈಗ ಮಾತನಾಡಿದರೆ ಚೆನ್ನಾಗಿ ಇರುವುದಿಲ್ಲವೇನೊ" ಎಂದು ಯೋಚಿಸುತ್ತಿದ್ದರೆ, ಆಗ ಸಾರ್..."ಮೇಡಮ್! ಇವರ ಜೊತೆ ಮಾತನಾಡಿ!" ಎಂದರು. ನನ್ನ ಕೋರಿಕೆ ಈಡೇರಿದ್ದಕ್ಕೆ ತುಂಬಾ ಸಂತೋಷವಾಯಿತು. ನನ್ನ ಮನಸ್ಸಿನಲ್ಲಿರುವ ಬಯಕೆಯನ್ನು ಪತ್ರಿಸಾರ್ ಗ್ರಹಿಸಿದ್ದಕ್ಕೆ ತುಂಬಾ ಆನಂದವಾಯಿತು! ದಟೀಜ್ ಪತ್ರೀಜಿ!!

 

*   *   *

 

ಧ್ಯಾನಕ್ಕೆ ಬರುವುದಕ್ಕಿಂತ ಮುಂಚೆ, ಶಿರಡಿಗೆ ಹೋದಾಗ, ಹೀಗೆ ಯಾವುದು ಮನಸ್ಸಿನಲ್ಲಿ ನೆನಸಿದರೆ ಅದು ನಡೆಯುತ್ತಿತ್ತು. ಈಗ ಪುನಃ ಹೀಗೆ ನಡೆಯಿತು. "ಇವರು ಶಿರಡಿಬಾಬಾನೆ" ಅನಿಸಿತು! "ನನ್ನ ಗುರುಗಳಿಗೆ ನಾನು ಏನೂ ಹೇಳಬೇಕಾದ ಅವಶ್ಯಕತೆ ಇಲ್ಲ" ಎನಿಸಿತು. ಇಷ್ಟು ಚೆನ್ನಾಗಿ ತನ್ನ ಶಿಷ್ಯರನ್ನು ನೋಡಿಕೊಳ್ಳುತ್ತಿರುವ ಪತ್ರೀಜಿಗೆ ಶತಕೋಟಿ ಪ್ರಣಾಮಗಳು!

 

*   *   *

 

ಪತ್ರೀಜಿಯವರನ್ನು ಭೇಟಿಯಾದ ಪ್ರತಿ ಒಂದು ಬಾರಿ ಒಬ್ಬ ಗುರುಗಳಹಾಗೆ ಅಲ್ಲದೆ ಒಬ್ಬ ವ್ಯಕ್ತಿಯಹಾಗೆ ಕೂಡ ಅವರಿಂದ ನಾನು ಅನೇಕ ವಿಷಯಗಳನ್ನು ಕಲಿತುಕೊಳ್ಳುತ್ತಲೇ ಇದ್ದೇನೆ. "ಅವರ ಮನೆಗೆ ಹೋದ ಪ್ರತಿ ಒಂದು ಸಲ ಊಟಮಾಡದೆ, ಕನಿಷ್ಠ ಪಕ್ಷ "ಟೀ" ಆದರೂ ಕುಡಿಯದೆ ಬರಲಿಲ್ಲ" ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ತಾನು ಊಟಮಾಡುತ್ತಾ ಪಕ್ಕದಲ್ಲಿರುವವರನೆಲ್ಲರನ್ನೂ ಊಟಮಾಡಿ ಎಂದು ಹೇಳುತ್ತಾ ಅವರು ತೋರಿಸುವ ಆದರಣೆಯಿಂದಾಗಿ ಹಡೆದ ತಂದೆಯ ಪ್ರೀತಿ ನೆನಪಿಗೆ ಬರುತ್ತದೆ. ಅವರ ಮನೆಯಿಂದ ಹೊರಡುವಾಗ ಅವರು ಗೇಟ್‌ವರೆಗೂ ಬಂದು ಕಳುಹಿಸಿಕೊಡುತ್ತಾರೆ! ಇದು ಅವರಲ್ಲಿರುವ ನಿರಹಂಕಾರತತ್ವಕ್ಕೆ, ಪ್ರೇಮ ತತ್ವಕ್ಕೆ ನಿದರ್ಶನ! ಒಬ್ಬ ವ್ಯಕ್ತಿಯಾಗಿ ಅವರಲ್ಲಿರುವ ಧರ್ಮನಿರತೆಯನ್ನು ನೋಡಿ ನಾವು ತುಂಬಾ ಕಲಿತುಕೊಳ್ಳಬಹುದು! ದಟೀಜ್ ಪತ್ರೀಜಿ !!

 

*   *   *

 

1998ರಲ್ಲಿ ನಾವು ವಿಜಯವಾಡದಲ್ಲಿ ಇದ್ದಾಗ, ಪತ್ರೀಜಿ ಅಲ್ಲಿಗೆ ಬಂದಾಗ, ನಾವು ಅವರ ಜೊತೆ ತುಂಬ ಸಮಯವನ್ನು ಕಳೆಯುತ್ತಿದ್ದೆವು. "ಮೇಡಮ್ Put a question" ಎನ್ನುತ್ತಿದ್ದರು. ಹಾಗೆ ಅವರ ಬಾಯಿಂದ "‘ಧರ್ಮ’ ಅಂದರೆ ಏನು? ‘ಬುದ್ಧಿ’ ಅಂದರೆ ಏನು? ‘ನೆಗೆಟಿವ್ ಥಿಂಕಿಂಗ್’ ಅಂದರೆ ಏನು? ‘ಅರಿವಿನಿಂದ ಕೂಡಿದ ಆಲೋಚನೆಗಳು’ ಅಂದರೆ ಏನು? ಎರಡಕ್ಕೂ ಇರುವ ವ್ಯತ್ಯಾಸವೇನು?" ಹೀಗೆ ಅನೇಕಾನೇಕ ಕಾನ್ಸೆಪ್ಟ್ ಅವರನ್ನು ನೇರವಾಗಿ ಕೇಳಿ ತಿಳಿದುಕೊಳ್ಳಲಾಯಿತು. ಈ ದಿನ ಇಷ್ಟು ಚೆನ್ನಾಗಿ ನನಗಿರುವ ಜ್ಞಾನವನ್ನು ಇತರರ ಜೊತೆ ಹಂಚಿಕೊಳ್ಳುತ್ತಿದ್ದೇನೆಂದರೆ ನನಗೆ ಪತ್ರಿಸಾರ್ ನೀಡಿರುವಂತಹ ದಿವ್ಯ ಸಂದೇಶಗಳೇ ಅದಕ್ಕೆ ಬುನಾದಿ! ಕ್ಲಾಸೆಸ್ ತೆಗೆದುಕೊಳ್ಳುತ್ತಿದ್ದೇನೆಂದರೆ ‘ಸಾರ್’ ನನಗೆ ನೀಡಿರುವಂತಹ ಜ್ಞಾನವೇ ಅದಕ್ಕೆ ಬುನಾದಿ! ಥಾಂಕ್ಸ್ ಟು ಪತ್ರೀಜಿ !!

 

*   *   *

 

ಒಂದು ದಿನ ಸಾರ್ ಮನೆಗೆ ಹೋದಾಗ ಅವರ ಮನೆಯಲ್ಲಿರುವ "ರಿಚಾರ್ಡ್ ಬಾಕ್" ಸಂದೇಶಗಳಿಂದಿರುವ ಪೇಯಿಂಟಿಂಗ್ ನನಗೆ ತುಂಬ ಇಷ್ಟವಾಯಿತು. ಪತ್ರೀಜಿಯವರಿಗೆ ನಾನು "ಸಾರ್! ಇದು ತುಂಬ ಚೆನ್ನಾಗಿದೆ" ಎಂದೆ. ತಕ್ಷಣ ಅವರು "ನೀವು ತೆಗೆದುಕೊಂಡು ಹೋಗಿ ಮೇಡಮ್" ಎಂದು ಆ ಪೇಯಿಂಟಿಂಗ್ನ ತೆಗೆಸಿ ಕಾರಲ್ಲಿ ಇಡು ಅಂದರು. ಒಂದು ಕ್ಷಣ ಬೆರಗಾದೆ. "ಎಲ್ಲರನ್ನೂ ಸರಿಸಮಾನವಾಗಿ ನೋಡಿ, ಎಲ್ಲರಲ್ಲೂ ಪ್ರೀತಿಯ ತತ್ವವನ್ನು ನೋಡಿ" ಎಂದು ಹೇಳುವ ಅವರು, "ಅವರು ಪಾಲಿಸುವುದೇ ಹೇಳುತ್ತಿದ್ದಾರೆ" ಎನಿಸಿತು. ಅವರು ಯಾವುದು ಪಾಲಿಸುತ್ತಿದ್ದಾರೊ, ಮಾಡುತ್ತಿದ್ದಾರೊ ಅದೇ ಹೇಳುತ್ತಿದ್ದಾರೆ ಎನಿಸಿತು! ದಟೀಜ್ ಪತ್ರೀಜಿ !!

 

*   *   *

 

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ನಿಂದಾಗಿ ಎಲ್ಲಿ ಹೋದರೂ ಧ್ಯಾನಿಗಳೆಲ್ಲರಿಗೂ ಅನೇಕ ಜನ ಆತ್ಮಬಂಧುಗಳಿದ್ದಾರೆ. ಇಂತಹ ಒಳ್ಳೆಯ ಧ್ಯಾನಸೌರಭವನ್ನು ಈ ಸೊಸೈಟಿಯಿಂದ ಎಲ್ಲರೂ ಪಡೆಯುತ್ತಿದ್ದೇವೆ. Thanks to Patriji ! ದಟೀಜ್ ಪತ್ರೀಜಿ !!

 

 

ಶ್ರೀಲಕ್ಷಿ
ಹೈದರಾಬಾದ್

Go to top