" ಪಿರಮಿಡ್ ಶಕ್ತಿ ನನ್ನನ್ನು ರಕ್ಷಾಕವಚದಂತೆ ಕಾಪಾಡುತ್ತಿದೆ "

 

  

ನನ್ನ ಹೆಸರು ಶ್ರೀನಿವಾಸ ನಾಯಕ. ವಯಸ್ಸು 33 ವರ್ಷ. ವೃತ್ತಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್. ನನ್ನ ಮತ್ತು ಪಿರಮಿಡ್ ಸಂಬಂಧ ಆಕಸ್ಮಿಕ. ಪಿರಮಿಡ್ ಎಡೆಗೆ ನನ್ನ ಪಯಣ ಪೂರ್ವಯೋಜಿತವಾಗಿರಲಿಲ್ಲ. ಸಂಕಟ, ಸಂಕಷ್ಟ, ಪರಿಪಕ್ವವಲ್ಲದ ಜೀವನಶೈಲಿ, ಅಜ್ಞಾನ, ದುಖಃಗಳಿಂದ ಕೂಡಿದ ಲೋಹದ ಅದಿರಿನಂತ್ತಿದ್ದ ನನ್ನ ದೇಹವನ್ನು ಅಯಸ್ಕಾಂತದಂತೆ ತನ್ನೆಡೆಗೆ ಸೆಳೆದಿದ್ದು ಪಿರಮಿಡ್. ಅಂದಿನಿಂದ ಇಂದಿನವರೆಗೆ ಪ್ರತಿ ಕ್ಷಣ ಪಿರಮಿಡ್ ಶಕ್ತಿ ನನ್ನನ್ನು ರಕ್ಷಾಕವಚದಂತೆ ಕಾಪಾಡುತ್ತಿದೆ. 

 

ಸಹಜ, ಸರಳ ಸ್ವಾಭಾವಿಕ ಉಚ್ಛ್ವಾಸ-ನಿಶ್ವಾಸದೊಂದಿಗೆ ಕಣ್ಣು ಮುಚ್ಚಿ ಧ್ಯಾನ ಮಾಡುವುದಾಗಿ ನನ್ನ ಸುತ್ತ ಪ್ರಕೃತಿದತ್ತವಾದ ರಕ್ಷಣ ಕವಚ ಏರ್ಪಡುತ್ತದೆ ಎಂಬ ಅರಿವು ಪ್ರತ್ಯಕ್ಷ ಅನುಭವವಾಗಿದೆ. ನಮ್ಮ ಮನಸ್ಸನ್ನು ಆಲೋಚನಾರಹಿತ ಸ್ಥಿತಿ, ನಿರ್ಮಲ ಸ್ಥಿತಿಯಲ್ಲಿಡಲು ಶ್ವಾಸದಿಂದ ಮಾತ್ರವೇ ಸಾಧ್ಯ ಎಂಬ ಸತ್ಯವು ಆನಾಪಾನಸತಿ ಧ್ಯಾನ ಮಾರ್ಗದಿಂದ ಅನುಭವವಾಗಿದೆ.

 

ಪ್ರಪಂಚದ ಏಳು ಅದ್ಭುತಗಳಲ್ಲೊಂದಾದ ಗೀಜಾ ಪಿರಮಿಡನ್ನು ನಾವು ಕೇವಲ ಅದರ ಬಾಹ್ಯ ದೃಶ್ಯ, ಬೃಹದಾಕಾರ, ವಾಸ್ತುಶಿಲ್ಪವನ್ನು ಮಾತ್ರ ನೋಡಿ ಆಶ್ಚರ್ಯಪಡುತ್ತೇವೆಯೇ ಹೊರತು, ಅದರೊಳಗಿನ ವಿಶ್ವಶಕ್ತಿಯ ಗೋಜಿಗೆ ಹೋಗುವುದಿಲ್ಲ. ಅದರ ಅನುಭವ ನಮಗಿಲ್ಲ. ಅದನ್ನು ತಿಳಿಯುವ ಮನಸ್ಸಿಲ್ಲ. ಇಂಥ ಅದ್ಭುತ ಶಕ್ತಿಯನ್ನು ಉಚಿತವಾಗಿ, ಸರಳ, ಸಹಜ ಮಾರ್ಗದಲ್ಲಿ ಪಿರಮಿಡ್ ಮಾಸ್ಟರುಗಳು ತಮ್ಮ ಮನೆಯ ಬಾಗಿಲವರೆಗೆ ಬಂದು ಧ್ಯಾನವನ್ನು ಬೋಧಿಸುವ ಮಹಾನ್ ಕಾರ್ಯವನ್ನು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್‌ಮೆಂಟ್, ಇಂಡಿಯಾ - ಸಂಸ್ಥೆಯ ಸಹಯೋಗದೊಂದಿಗೆ ಮಾಡುತ್ತಿದ್ದಾರೆ. ಇಂಥ ಕಾರ್ಯನಿರ್ವಹಿಸಲು ಪಿರಮಿಡ್ ಮಾಸ್ಟರ್‌ಗಳು ಕಂಕಣಬದ್ಧರಾಗಿದ್ದಾರೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್‌ಮೆಂಟ್‌ನ ಸಂಸ್ಥಾಪಕರು, ಪಿತಾಮಹರಾದ ಪೂಜ್ಯ ಬ್ರಹ್ಮರ್ಷಿ ಸುಭಾಷ್ ಪತ್ರೀಜಿರವರಿಗೆ ಅನಂತ ಅನಂತ ಕೋಟಿ ಧನ್ಯವಾದಗಳು.

 

ಶ್ರೀನಿವಾಸ ನಾಯಕ
ಬಳ್ಳಾರಿ
ಫೋನ್ : +91 9916944110

Go to top