" ನಾವು ಎಷ್ಟೆಷ್ಟು ಧ್ಯಾನ ಮಾಡುತ್ತೇವೆಯೋ ಅಷ್ಟಷ್ಟು ಲಾಭಗಳು ಪಡಯುತ್ತೇವೆ "

 

ನನ್ನ ಹೆಸರು ಅಕ್ಕಮ್ಮ ಶ್ರೀನಿವಾಸಚಾರ. ಈ ಮೊದಲು ಧ್ಯಾನವೆಂದರೇನು? ಅದರ ರೀತಿನೀತಿಗಳೇನು? ಅದರಿಂದ ಉಪಯೋಗಗಳೇನು? ನನಗೆ ತಿಳಿದಿರಲಿಲಲ್ಲ. ಧ್ಯಾನದ ಬಗ್ಗೆ ಶ್ರೀನಿವಾಸರೆಡ್ಡಿಯವರು ನಮಗೆ ಸವಿವರವಾಗಿ ತಿಳಿಸಿದರು. ಅವರು ಧ್ಯಾನವನ್ನು ಹೇಗೆ ಮಾಡಬೇಕು, ಅದರ ಲಾಭಗಳೇನು ಎಂದು ತಿಳಿಸಿದರು. ಅದರಂತೆ ನಮ್ಮ ಗ್ರಾಮದಲ್ಲಿ ಏರ್ಪಡಿಸಿದ 41ದಿನಗಳ ಮಂಡಲ ಧ್ಯಾನದಲ್ಲಿ ನಾನು ಭಾಗವಹಿಸಿದೆ. ಹಾಗು ನನ್ನೊಂದಿಗೆ ನನ್ನ ಯಜಮಾನ್ರು, ನನ್ನ 4 ಮಕ್ಕಳು ಕೂಡ ಭಾಗವಹಿಸಿದೆವು. ನನಗೆ ಮಂಡಲ ಧ್ಯಾನದಿಂದ ತುಂಬ ಲಾಭಗಳನ್ನು ಪಡೆದುಕೊಂಡಿರುವೆ. ಹಾಗೂ ಹುಣ್ಣಿಮೆ ಧ್ಯಾನದಲ್ಲು ಕೂಡ ನಾವು ಭಾಗವಹಿಸಿದೆವು. ನಾನು ದಿನದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಧ್ಯಾನ ಮಾಡುತ್ತೇನೆ. ಈ ಮೊದಲು ನನಗೆ ಧ್ಯಾನಕ್ಕೆ ಕುಳಿತರೆ ಕಾಲು ನೋವು, ಮಂಡಿನೋವು, ಬೆನ್ನುನೋವು ಕಾಣಿಸುತ್ತಿತ್ತು. ಹಾಗೂ ಕಣ್ಣು ಮುಚ್ಚಿ ಕುಳಿತಾಗ ನನ್ನ ಮನಸ್ಸು ಬೇರೆಡೆಗೆ ಹರಿದಾಡುತ್ತಿತ್ತು. ಸಾಧ್ಯವಾದಷ್ಟು ಪ್ರತಿದಿನ ಧ್ಯಾನದಲ್ಲಿ ಸಾಧನೆ ಮಾಡಿ ನಾನು ಈಗ ಧ್ಯಾನದಲ್ಲಿ 1 ರಿಂದ 1.30 ಗಂಟೆಗಳ ಕಾಲ ಕುಳಿತುಕೊಳ್ಳುತ್ತೇನೆ. ಇದರಿಂದ ನನಗೆ ಧ್ಯಾನಸ್ಥಿತಿಯಲ್ಲಿದ್ದಾಗ ಬರುವ ಯೋಚನೆಗಳು ಮತ್ತು ಬಾಹ್ಯ ಪ್ರಪಂಚದಲ್ಲಿ ಬರುವ ಯೋಚನೆಗಳು ದೂರವಾಗಿವೆ. ನನಗೆ ಸಮೀಪವಿರುವ ಸ್ಥಳಗಳಿಗೆ ಪ್ರಯಾಣ ಮಾಡಿ ಮರಳಿ ಬಂದಾಗ ತಲೆ ನೋವು ಬರುತ್ತಿತ್ತು. ಅದು ಕಡಿಮೆಯಾಗಿದೆ. ಕಣ್ಣು ನೋವು, ಕಾಲು ನೋವು ಕಡಿಮೆಯಾಗಿದೆ. ನನಗೆ ಮುಖದ ಮೇಲಿರುವ ಬಿಳಿ ಕಲೆಗಳು ಕಡಿಮೆಯಾಗಿದೆ. ಮತ್ತು ನನ್ನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತಂದಿದೆ. ನಮ್ಮ ಮನೆಯಲ್ಲಿರುವ ನಾವು 6 ಜನಗಳು ಕೂಡ ಧ್ಯಾನಾರ್ಥಿಗಳಾಗಿದ್ದೇವೆ. ನಾವು ಎಷ್ಟೆಷ್ಟು ಧ್ಯಾನ ಮಾಡುತ್ತೇವೆಯೊ ಅಷ್ಟಷ್ಟು ಲಾಭಗಳು ಬರುವುದು. ಒಳ್ಳೆಯ ಆರೋಗ್ಯವನ್ನು ಪಡೆಯುವುದು ಒಳ್ಳೆಯ ಚಿಂತನೆಗಳು ಕೂಡ ನಮ್ಮಲ್ಲಿ ಬೆಳೆಯುತ್ತದೆ. ಇದು ನನಗೆ ಧ್ಯಾನದಿಂದ ಆದ ಅನುಭವಗಳು.

 

B.S. ಅಕ್ಕಮ್ಮಶ್ರೀನಿವಾಸಚಾರ
ಬಡಗೆರೆ
ಬಸಾಪುರ, ದಾವಣಗೆರೆ

Go to top