" ನನ್ನ ಮೂರನೇ ಕಣ್ಣಿನ ಅನುಭವಗಳು "

 

ನನ್ನ ಹೆಸರು ಚಿಟ್ಟಂ ಸುಧಾ ಸುರೇಶ್. ನಮ್ಮ ಊರು ರಾಯಚೂರು. ನನಗೆ ಧ್ಯಾನ ಎಂದರೆ ಏನು ಎಂದು ಅರಿವು ಮಾಡಿಸಿದವರು ನಮ್ಮ ತಂದೆ ಮಾಕಂ ಶ್ರೀನಿವಾಸುಲು, ಚೆಳ್ಳಕೆರೆ ಮತ್ತು ನಮ್ಮ ಮಾಸ್ಟರ್ ಕೋಟೇಶ್ವರ್‌ರಾವು, ರಾಯಚೂರು. ನಾನು ಒಂದು ವರ್ಷದಿಂದ ಧ್ಯಾನ ಮಾಡುತ್ತಾ ಇದ್ದೇನೆ. ಚೆಳ್ಳಕೆರೆಯಲ್ಲಿ ನಮ್ಮ ಅಜ್ಜಿಯವರಾದ ಮಾಕಂ ಸಾವಿತ್ರಮ್ಮ ಅವರು 26-08-2009 ರಂದು ತೀರಿಕೊಂಡರು. ಆ ದಿನ ನಾವು ನಮ್ಮ ಬಂಧು-ಮಿತ್ರರು ಚೆಳ್ಳಕೆರೆಯಲ್ಲಿ ಮಾಸ್ಟರ್ ನಾಗೇಂದ್ರ ರವರ ನೇತೃತ್ವದಲ್ಲಿ ನಮ್ಮ ಅಜ್ಜಿಯ ದೇಹದ ಮುಂದೆ ಧ್ಯಾನ ಮಾಡಿದಾಗ ನನಗೆ ಆಗಿರುವ ಅನುಭವ, ನಾನು ನಮ್ಮ ಅಜ್ಜಿಯ ಆತ್ಮಕ್ಕೆ ಮುಕ್ತಿ ಸಿಗಬೇಕು ಎಂದು ಸಂಕಲ್ಪವನ್ನಿಟ್ಟುಕೊಂಡು ಧ್ಯಾನದಲ್ಲಿ ಕುಳಿತುಕೊಂಡೆ. ನನಗೆ ನಮ್ಮ ಅಜ್ಜಿಯ ಆತ್ಮವನ್ನು ಕೈಲಾಸ ಪರ್ವತಕ್ಕೆ ಕರೆದುಕೊಂಡು ಹೋದೆ. ನನಗೆ ಕೈಲಾಸ ಪರ್ವತವನ್ನು ವರ್ಣಿಸಲು ಅಸಾಧ್ಯ. ಅಲ್ಲಿ ಆ ಆತ್ಮವು ನೀಲಿಯ ಸರೋವರದಲ್ಲಿ ಮಂಜಿನಂತೆ ನೀರಿನಲ್ಲಿ ಮುಳುಗಿ ಬಂದು, ಮೇಲೆ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಬಂತು. ನಂತರ, ಅಲ್ಲಿಯ ಪರ್ವತ ತಣ್ಣನೆ ಗಾಳಿಯಿಂದ ತೃಪ್ತಿ ಹೊಂದಿ ಮತ್ತೊಂದು ಲೋಕಕ್ಕೆ ಸುರಂಗ ಮಾರ್ಗದಲ್ಲಿ ಬಹಳ ದೂರ ಪ್ರಯಾಣ ಮಾಡಿ ಸ್ವರ್ಣ ಲೋಕಕ್ಕೆ ಹೋಗಿದ್ದೆವು, ಅಲ್ಲಿಯೂ ಕ್ಯೂ ಸಿಸ್ಟಮ್ ಇದೆ. ಅಲ್ಲಿ ಬಂಗಾರದ ಬಣ್ಣದ ಆತ್ಮಗಳು ಶಾಂತಿಯುತವಾದ ಆತ್ಮಗಳು ಸಾಲಾಗಿ ಬರುತ್ತಾ ಹೋಗುತ್ತಾ ಇರುತ್ತವೆ. ಅವುಗಳ ಜೊತೆ ನಮ್ಮ ಅಜ್ಜಿಯ ಆತ್ಮವು ಜೊತೆಗೊಡಿ ಮತ್ತೆ ಪ್ರಯಾಣ ನಡೆಸಿತು. ಇದು ನನ್ನ ಧ್ಯಾನದ ಅನುಭವ. ಈ ಅನುಭವವನ್ನು ನಾನು ಮೊದಲು ನಾಗೇಂದ್ರ ಅವರಿಗೆ ತಿಳಿಸಿದೆ ಮತ್ತು ನಮ್ಮ ಮಾಸ್ಟರ್ ಕೋಟೇಶ್ವರರಾವು ಅವರಿಗೆ ತಿಳಿಸಿದೆ. ಅವರು ಬಹಳ ಹೆಮ್ಮೆಪಟ್ಟರು. ಧ್ಯಾನದಿಂದ ನಾನು ಕಣ್ಣಿಂದ ನೋಡಲು ಸಾಧ್ಯವಾಗಲಾರದಂತಹ ಲೋಕಗಳನ್ನು ನೋಡಿದ್ದೇನೆ. ಧ್ಯಾನದಿಂದ ಈಗ ನನ್ನಲ್ಲಿ ಆತ್ಮಸ್ತೈರ್ಯ ಹೆಚ್ಚಾಗಿದೆ.

 

ಚಿಟ್ಟಂ ಸುಧಾ ಸುರೇಶ್
ರಾಯಚೂರು

Go to top