" ಧ್ಯಾನದಿಂದ ಎಷ್ಟೋ ಅದ್ಭುತಗಳು "

 

ನನ್ನ ಹೆಸರು ಸುಗುಣ. ನನ್ನ ಊರು ಆಂಧ್ರ ಪ್ರದೇಶದ ಚಿತ್ತೂರು. ನನ್ನ ಧ್ಯಾನಾನುಭವಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನನ್ನ ಆರೋಗ್ಯ ಸರಿ ಇರಲಿಲ್ಲ. ಯಾವಾಗಲೂ ಕೈಕಾಲು ವಿಪರೀತ ನೋವು. ವಿಪರೀತ ಹೊಟ್ಟೆ ನೋವು ಇರುತ್ತಿತ್ತು. ಎಷ್ಟೋ ಜನ ವೈದ್ಯರುಗಳ ಹತ್ತಿರ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದರಿಂದ ಬೇಸತ್ತು, ನನ್ನ ಯಜಮಾನರು, ನನ್ನನ್ನು ಬೆಂಗಳೂರಿಗೆ ಕರೆತಂದರು. ಇಲ್ಲಿ ಫುಟ್‌ಪಾತ್ ವ್ಯಾಪಾರ ಮಾಡುತ್ತಾ, ಎಷ್ಟೋ ವೈದ್ಯರಿಗೆ ತೋರಿಸಿದರೂ, ನನಗೆ ಗುಣವಾಗಲಿಲ್ಲ. ನಾವು ಕತ್ತರಿಗುಪ್ಪೆಯಲ್ಲಿ ಮನೆ ಮಾಡಿಕೊಂಡಿದ್ದಾಗ, ಅಲ್ಲಿಯೇ ವಾಸಿಸುವ ‘ದೀಪಾ’ ಎನ್ನುವ ಯುವತಿಯೊಬ್ಬರು, ‘ಧ್ಯಾನ’ದ ಬಗ್ಗೆ ಇರುವ ಒಂದು ಪಾಂಪ್ಲೆಟ್ ಕೊಟ್ಟರು. 2006 ಗುರುಪೂರ್ಣಿಮೆಯ ದಿನ ಶ್ರೀಪಾದರಾವ್ ಎನ್ನುವ ಮಾಸ್ಟರ್ ರಾಜೇಶ್ವರಿ ನಿಲಯ ಎನ್.ಆರ್ ಕಾಲೋನಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲಿ ನಮಗೆ ಧ್ಯಾನದ ಬಗ್ಗೆ ಹೇಳಿಕೊಟ್ಟರು. ಅಂದಿನಿಂದ ಇಂದಿನವರೆಗೆ ನಾವು ಒಂದು ದಿನವೂ ತಪ್ಪದೆ ಧ್ಯಾನ ಮಾಡುತ್ತಿದ್ದೇವೆ. ಈಗ ನನ್ನ ಕೈಕಾಲು ನೋವು, ಹೊಟ್ಟೆ ನೋವು ಎಲ್ಲಾ ನಿಂತು ಹೋಗಿದೆ. ಲಕ್ಷಾಂತರ ವೈದ್ಯರಿಗೆ ಆಸ್ಪತ್ರೆಗಳಿಗೆ ಖರ್ಚು ಮಾಡಿದರೂ ವಾಸಿಯಾಗದ್ದು, ಧ್ಯಾನ ಮಾಡಲು ಪ್ರಾರಂಭಿಸಿದ ನಂತರ ವಾಸಿಯಾಗಿದೆ. ಈಗ  "ಶ್ರೀ ಸಾಯಿ ಧ್ಯಾನ ಮಂದಿರ" ನ್ನುವ ಹೆಸರಿಟ್ಟು ನಮ್ಮ ಮನೆಯಲ್ಲೆ ಸೆಂಟರ್ ಮಾಡಿ, ನಾವು ಎಲ್ಲರಿಗೂ ಧ್ಯಾನವನ್ನು ಹೇಳಿಕೊಟ್ಟು ಪ್ರಚಾರ ಮಾಡುತ್ತಿದ್ದೇವೆ. ಪೂಜ್ಯರಾದ ಶ್ರೀಮತಿ ಸ್ವರ್ಣಮಾಲಾ ಪತ್ರಿಯವರು, ಪ್ರೇಮ್‌ನಾಥ್ ಸಾರ್, ತಟವರ್ತಿ ವೀರರಾಘವರಾವ್, ತಿಮ್ಮರಾಜು ಮತ್ತು ಇನ್ನು ಇತರೆ ಮಾಸ್ಟರ್‌ಗಳು ನಮ್ಮಲ್ಲಿಗೆ ಬಂದು ತರಗತಿಗಳನ್ನು ನಡೆಸಿದ್ದಾರೆ. 

ಇನ್ನೊಂದು ಅನುಭವ, ಜೂನ್ 23, 2010 ಬೆಂಗಳೂರಿನಿಂದ ಚಿತ್ತೂರಿನ ಕಾಣಿಪಾಕಂ ದೇವಸ್ಥಾನದಲ್ಲಿ ಮದುವೆಗಾಗಿ ಹೋಗಿದ್ದೆನು. ಮದುವೆಯಿಂದ ಹಿಂತಿರುಗಿ 24 ಜೂನ್ ಬರುತ್ತಿದ್ದೆ. ಬಸ್‌ನಲ್ಲಿ 3 ಗಂಟೆಗಳ ಕಾಲ ಧ್ಯಾನಕ್ಕಾಗಿ ಕುಳಿತೆನು. ಧ್ಯಾನದಲ್ಲಿ ಮಾಸ್ಟರ್ ಕಾಣಿಸಿ "ಈ ಬಸ್ಸಿನಲ್ಲಿ ಪ್ರಯಾಣ ಬೇಡ" ಎಂದು ಸಂದೇಶವನ್ನು ಕೊಟ್ಟರು. ಆದರೆ, ನಾನು ನನ್ನ ಸ್ನೇಹಿತನನ್ನು ಬೇರೆ ಬಸ್ಸಿಗೆ ಹೋಗಲು ಕೇಳಿದೆ, ಅವರು ಒಪ್ಪಲಿಲ್ಲ. ಆದ್ದರಿಂದ, ಅದೇ ಬಸ್ಸಿನಲ್ಲಿ ಉಳಿದುಕೊಂಡು ಮತ್ತೆ ಧ್ಯಾನವನ್ನು ಮಾಡಿದೆನು. ಮತ್ತೆ ಅದೇ ಸಂದೇಶ ಬಂತು "ಪ್ರಯಾಣ ಮಾಡುತ್ತಿರುವ ಬಸ್ಸು ತುಂಬ ತೊಂದರೆಯಲ್ಲಿದೆ" ಎಂದು. ಅದಾದ ಒಂದು ಗಂಟೆಯಲ್ಲಿ ಬಸ್ಸಿಗೆ ಆಕ್ಸಿಡೆಂಟ್ ಆಯಿತು. ಬಸ್ ಉರುಳಿಕೊಂಡು ಕೆಳಗೆ ಬಿದ್ದಿತು. 60 ಜನರಿಗೆ ತೀವ್ರವಾದ ಗಾಯಗಳಾಯಿತು, 5 ಜನ ಸ್ಥಳದಲ್ಲೇ ಮೃತಪಟ್ಟರು. ಅಷ್ಟು ತೀವ್ರವಾದ ಆಕ್ಸಿಡೆಂಟ್‌ನಲ್ಲೂ ಸಹ ನನಗೆ ಯಾವುದೇ ಚಿಕ್ಕ ಗಾಯವಿಲ್ಲದೆ ಸುರಕ್ಷಿತವಾಗಿದ್ದೆ.

 

ಸುಗುಣ
ಬೆಂಗಳೂರು
ಮೊಬೈಲ್  : +91 94487 48143

Go to top