" ಜಯ ಹೋ ಪಿರಮಿಡ್ ಧ್ಯಾನ "  

 

 

ನನ್ನ ಈ ದೇಹದ ಹೆಸರು S.M. ಸುಮಂಗಳ ಮಲ್ಲಿಕಾರ್ಜುನಸ್ವಾಮಿ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾದಲ್ಲಿ ವಾಸವಾಗಿದ್ದೇನೆ. ನನಗೆ ಧ್ಯಾನ ಪರಿಚಯವಾಗಿದ್ದು ಸಿರುಗುಪ್ಪಾದಲ್ಲಿ ರಂಗಾರಾವ್ ಮಾಸ್ಟರ್‌ರಿಂದ 2006 ಆಗಸ್ಟ್ 21 ರಂದು. ಆದರೆ, ಪ್ರತಿನಿತ್ಯವೂ ನಾನು ಧ್ಯಾನ ಮಾಡುತ್ತಿರಲಿಲ್ಲ. ನಂತರ, 2006 ಅಕ್ಟೋಬರ್ 4 ರಿಂದ 41 ದಿನಗಳ ಸಾಮೂಹಿಕ ಮಂಡಲ ಧ್ಯಾನವು ಶ್ರೀಕೃಷ್ಣಾ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ನಡೆಯಿತು. ಈ ಧ್ಯಾನದಿಂದ ನಾನು ಅಂದು ನನ್ನ ಶ್ವಾಸವಿರುವವರೆಗೂ ಧ್ಯಾನ ಬಿಡಬಾರದು ಎಂದು ಪ್ರತಿಜ್ಞೆ ಮಾಡಿಕೊಂಡೆ. ಅಂದಿನಿಂದ ಧ್ಯಾನ ನನ್ನ ಜೀವನದ ಅತಿ ಮುಖ್ಯ ಭಾಗವಾಯಿತು. ಇಂದು ನನ್ನ ಜೀವನ "ನಿತ್ಯ ಕಲ್ಯಾಣಂ ಪಚ್ಚ ತೋರಣಂ" ಎನ್ನುವ ಹಾಗೆ ಪ್ರತಿದಿನವೂ ಆನಂದವಾಗಿ ಸಾಗುತ್ತಿದೆ. ಕಾರಣ ನನ್ನ ಧ್ಯಾನ ಜನನವಾಗಿದ್ದು ಪಿರಮಿಡ್‌ನಲ್ಲಿ. ಬೆಳೆಯುತ್ತಿರುವುದೂ ಪಿರಮಿಡ್‌ನಲ್ಲಿಯೇ. ಏಕೆಂದರೆ, ಶ್ರೀಕೃಷ್ಣಾ ಪಿರಮಿಡ್ ಧ್ಯಾನ ಕೇಂದ್ರ ಇರುವುದು ನಮ್ಮ ಮನೆಯ ಹಿಂಭಾಗದಲ್ಲಿಯೇ. ಒಬ್ಬ ರಾಜಕುಮಾರನ ಬೆಳವಣಿಗೆ ಹೇಗಿರುತ್ತದೆಯೋ ಅಷ್ಟೊಂದು ಶ್ರೀಮಂತವಾಗಿ ಅದ್ಭುತವಾಗಿ ನನ್ನ ಆಧ್ಯಾತ್ಮಿಕ ಧ್ಯಾನ ಜೀವನ ಬೆಳೆಯುತ್ತಿದೆ. ಹೊರಗಡೆ 3 ಗಂಟೆಯ ಧ್ಯಾನ ಪಿರಮಿಡ್‌ನಲ್ಲಿ 1 ಗಂಟೆಗೆ ಸಮ. ಇಂತಹ ಶಕ್ತಿತಾಣದಲ್ಲಿ ಪ್ರತಿನಿತ್ಯವೂ 4 ಗಂಟೆ - 5 ಗಂಟೆ ಹಾಗೆ ಮಾಡುತ್ತಾ ಬಂದೆ. ಅದು ಒಂದು ವರ್ಷದವರೆಗೆ ಮಾತ್ರ. ಆ ಒಂದು ವರ್ಷ ಧ್ಯಾನದ ಫಲಿತಾಂಶವೇ 2008 ಜನವರಿ 28 ರಿಂದ ನನ್ನೊಳಗಿನ ಮಾಸ್ಟರ್ ಹೊರಗಡೆ ಬಂದು ಪ್ರಚಾರವೆ ನನ್ನ ಧ್ಯೇಯವಾಯಿತು.

 

ನಂತರ, 2008 ಫೆಬ್ರವರಿ 27 ರಂದು ಬ್ರಹ್ಮರ್ಷಿ ಪತ್ರೀಜಿಯವರ ಹಸ್ತದಿಂದ ನಾನು ಶ್ರೀಕೃಷ್ಣಾ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷ ಪದವಿ ಪಡೆದೆ. ಆ ವಿಧವಾಗಿ ನಾನು ನೂರಕ್ಕೆ ನೂರರಷ್ಟು ನ್ಯಾಯ ಕೊಟ್ಟಿದ್ದೇನೆ. ಈ 3 ವರ್ಷದಲ್ಲಿ ಸಾಕಷ್ಟು class conduct ಮಾಡಿದ್ದೇನೆ. ಅದರಲ್ಲಿ ಕೆಲವು ಭೀಮೇಶ್ ರೆಡ್ಡಿಯವರು ನೆಡೆಸಿಕೊಟ್ಟ Life is Beautiful workshop ನ್ನು ಅವರು ಬೆಂಗಳೂರಿಗೆ shift ಆದನಂತರ ನಾನು ಆ workshop ಮುಂದುವರಿಸಿದೆ. ಸಿರುಗುಪ್ಪಾದ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಎಷ್ಟು ಮುಖ್ಯ ಎಂದು ತಿಳಿಸಿ ಅಲ್ಲಿಯೂ ಕ್ಲಾಸ್ ಮಾಡಿರುವೆ. ಹಾಗೆ ಮಾಗ್ಡಿ (ರಾಯಚೂರ district)ಯಲ್ಲಿ ಹಲವಾರು ಶಾಲಾ, ಕಾಲೇಜುಗಳಲ್ಲಿ ಮತ್ತು ಜನರಲ್ ಧ್ಯಾನ ಕ್ಲಾಸ್, ಹಾಗೆ ಬಳ್ಳಾರಿ, ಗುಲ್ಬರ್ಗಾ, ದಾವಣಗೆರೆ, ಚಳ್ಳಕೆರೆ, ತೆಕ್ಕಲಕೋಡಿ ಹೀಗೆ ಹಲವಾರು ಊರುಗಳಲ್ಲಿ ಸಿರುಗುಪ್ಪಾದಲ್ಲಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಸಾಕಷ್ಟು ಧ್ಯಾನ ಪ್ರಚಾರ ಮಾಡುತ್ತಿದ್ದೇನೆ. ನನ್ನ ಗುರಿ ಈ ವಿಶ್ವದಲ್ಲಿ ಎಲ್ಲರೂ ಧ್ಯಾನ ಮಾಡಬೇಕು. ಏಲ್ಲರೂ ಆನಂದವಾಗಿರಬೇಕು. ಅದಕ್ಕಾಗಿ ನಾನು ಸಾಧ್ಯವಾದಷ್ಟು ಶ್ರಮಿಸುತ್ತೇನೆ. ಅದರಲ್ಲಿ ವಿದ್ಯಾರ್ಥಿಯರಿಗೆ ಮತ್ತು ಗ್ರಾಮೀಣ ಜನರಿಗೆ ಮಾಡುವುದೆಂದರೆ ತುಂಬಾ ಇಷ್ಟ. ನಾನು ಧ್ಯಾನ ಮಾಡಿದ ವರ್ಷದಲ್ಲಿಯೇ ಅಧ್ಯಕ್ಷೆಯಾದ ಕಾರಣ ಪುಸ್ತಕ ಜ್ಞಾನ ಕಡಿಮೆ. ಪಿರಮಿಡ್‌ನಲ್ಲಿ ಧ್ಯಾನ ಮಾಡಿದ್ದರಿಂದ ಅಂತರ್ ಜ್ಞಾನ ಆಯಾ ಸಂದರ್ಭಕ್ಕೆ ತಕ್ಕಹಾಗೇ ಕೊಡುತ್ತಲೇ ಇದೆ. ಒಟ್ಟಾರೆ ನನ್ನ ಹೇಳಿಕೆಯೆಂದರೆ "ಖಾಲೀ ಮನಸ್ಸಿನಿಂದ ಧ್ಯಾನ ಮಾಡಿದರೆ ನಮಗೆ ಜೀವನದಲ್ಲಿ ಏನಿದ್ದರೆ ನಾವು ಆನಂದವಾಗಿರುತ್ತೇವೆಯೋ ಅದೆಲ್ಲಾ 100% ಬಂದೇ ಬರುತ್ತದೆ. ಜೀವನಕ್ಕೆ ಯಾವುದರ ಅವಶ್ಯಕತೆಯಿಲ್ಲವೋ 100% ಗ್ಯಾರಂಟಿ ತೊಲಗುತ್ತದೆ. ಇದು ಮಾತ್ರ ಖಂಡಿತಾ ಸಾಧ್ಯ ಮತ್ತು ಸತ್ಯ. "ಈ ಎಲ್ಲಾ ಜ್ಞಾನ ನನಗೆ ದೊರಕಿದ್ದು ಪಿರಮಿಡ್‌ನಲ್ಲಿಯೇ. ನಾನು ಧ್ಯಾನಕ್ಕೆ ಕುಳಿತ ಕೆಲ ಸೆಕೆಂಡ್‌ಗಳಲ್ಲಿಯೇ empty mind ಆಗಿ ನಾನು ಹೇಗೆ ಕ್ಲಾಸ್ ಮಾಡುವುದು ಎಂದು message ಮೂಲಕ ತಿಳಿಯುತ್ತಿತ್ತು. ಇದಲ್ಲದೇ pre-vision,astral travel ಆಟೋರೈಟಿಂಗ್ ಹೀಗೆ ಪಿರಮಿಡ್‌ನಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಅದಲ್ಲದೇ ನನ್ನ ಜೀವನದಲ್ಲಿ ಮಕ್ಕಳಿಲ್ಲದ ಕೊರಗನ್ನು ದಿವ್ಯಚಕ್ಷುವಿನಿಂದ ತಿಳಿದುಕೊಂಡು ಈಗ ಬಹಳ ಆನಂದವಾಗಿದ್ದೇನೆ. ಹೀಗೆ ಹಲವಾರು ಪಿರಮಿಡ್ ಅನುಭವಗಳಲ್ಲಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

 

2009 ಸೆಪ್ಟೆಂಬರ್ 23 ರಂದು ನಾನು ಶ್ರೀ ಕಾಮಧೇನು ಪಿರಮಿಡ್ ಧ್ಯಾನ ಕೇಂದ್ರ ಧಡೇಸೂಗೂರುನಲ್ಲಿ 12 ಗಂಟೆಗಳ ಅಖಂಡ ಧ್ಯಾನ ಮಾಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ. ಬೆಳಿಗ್ಗೆ ಕುಳಿತ 2 ಗಂಟೆಯ ನಂತರ ನನಗೇ ಗೊತ್ತಿಲ್ಲದೆಯೇ ಬುಕ್ ಮತ್ತು ಪೆನ್ ಕೊಡಿ ಎಂದು ಸನ್ನೆ ಮಾಡುತ್ತಿದ್ದೇನೆ. ಇದನ್ನು ಮಹಾದೇವಮ್ಮನವರು ಅರ್ಥಮಾಡಿಕೊಂಡು ನನ್ನ ತೊಡೆಯ ಮೇಲೆ ಬುಕ್ - ಪೆನ್ ತಂದಿಟ್ಟಿದ್ದಾರೆ. ಕೆಲವು ನಿಮಿಷಗಳ ನಂತರ ನನಗಾದ ಅನುಭವ ದೃಶ್ಯ - ಅಕ್ಷರ ರೂಪದಲ್ಲಿ ಬರೀ ಎಂದು ಸಂದೇಶ ಕೇಳಿಸುತ್ತಿತ್ತು. ಹಾಗೇ ಬರೆದೆ. ನಂತರ ಸಂಜೆ 7 ಗಂಟೆಗೆ ನನ್ನ ಪತಿ ಬಂದು ಓಕೆ ಹೇಳಿದರೂ ಕಣ್ಣು ತೆರೆಯಲು ಆಗಲಿಲ್ಲ. ಸುಮಾರು 10 ನಿಮಿಷಗಳ ನಂತರ ಬಲವಂತವಾಗಿ ಕಣ್ಣು ತೆರೆದೆ. ನಂತರ, ಅವರು ನಾನು ಬುಕ್-ಪೆನ್ ಕೇಳಿದ್ದು ಏನೋ ಬರೆದಿರುವಿರಿ ಅಂತ ಹೇಳಿದ ನಂತರ, ಸರಿ ಅದೇನು ಬರೆದಿರುವೆ ಎಂದು ಓದಿದಾಗ ಆಶ್ಚರ್ಯವಾಯಿತು. ನಾನೇನಾ ಹೀಗೆ ಬರೆದಿದ್ದು ಎಂದು. ಆಗ ಅಂದು ರಾತ್ರಿಯೇ ಭೀಮೇಶ್ ಸರ್‌ಗೆ ಫೋನ್ ಮಾಡಿ ಹೇಳಿದಾಗ ಆಗ ಅವರು ಇದನ್ನೇ ಆಟೋರೈಟಿಂಗ್ ಎನ್ನುವುದು ಎಂದರು. ಅಲ್ಲಿ ನಾನು ಬರೆದ ವಿಷಯ:

 

"ಭೌತಿಕ ದೇಹವಾದ ಈ ನಾನು ಎಲ್ಲವನ್ನು ಮರೆತು ಶ್ವಾಸಾಧಾರದ ಜೊತೆ ಸಣ್ಣ ತಂತಿಯ ಹಾಗೆ ಪ್ರಯಾಣಿಸುತ್ತಾ ಕೆಲವು ಕ್ಷಣಗಳವರೆಗೆ ಹಾಗೇ ಇದ್ದು ನಂತರ ಅದನ್ನು ಮರೆತು ಎಲ್ಲೋ ಪ್ರಯಾಣಿಸುತ್ತಾ ನಂತರ ನಾನೆಲ್ಲಿ ಎಂದು ನನ್ನನ್ನು ನಾನು ನೋಡಿಕೊಂಡರೂ ನಾನು ಕಾಣುತ್ತಿಲ್ಲ ? ಆದರೂ ನಾನಿದ್ದೇನೆ. ಅಂತರಂಗದ ನಾನಿದ್ದೇನೆ. ಎಷ್ಟೊಂದು ಅದ್ಭುತ. ಹಾಗಾದರೆ ಆ ಕಂಡು ಕಾಣದ ಆ ನಾನು ಯಾರು? ರೂಪವೂ ಇಲ್ಲದ, ಶ್ವಾಸವೂ ಇಲ್ಲದ ಆ ನಾನು ಯಾರು ಗೊತ್ತೇ ?" ಅತೀವ ಆನಂದ ಲೋಕದಲ್ಲಿ ತೇಲಾಡುತ್ತಿರುವ, ಪಕ್ಷಿಯ ಹಾಗೇ ಹಾರಾಡುತ್ತಿರುವ "ಆ ನಾನೇ ಭಗವಂತ, ಆ ನಾನೇ ಬ್ರಹ್ಮಾಂಡ, ಆ ನಾನೇ ಆನಂದ".

 

ಹಾಗಾದರೆ " ಈ ನಾನು " ಯಾವಾಗಲೂ, ಎಲ್ಲಾ ಕಡೆಯೂ ಹೇಗೆ ಜೀವಿಸಬೇಕು ?

 

ಸಾಧನೆಯಿಂದ ಎಲ್ಲವೂ ಸಾಧ್ಯ. "ಈ ನಾನು" ಇಹಪರಗಳೆರಡರಲ್ಲಿಯೂ ಅಮಿತಾನಂದದಿಂದ ಜೀವನ ಸಾಗಿಸಿದಾಗ ಮಾತ್ರ ಸೃಷ್ಟಿಯೆಲ್ಲವೂ ನಗುವಂತೆ ಗೋಚರಿಸುತ್ತದೆ. ದೃಷ್ಟಿಯೂ ಸಹ ನನ್ನನ್ನು ನೋಡಿ ತಲೆದೂಗುತ್ತಾ ಇದೆ. ತಲೆದೂಗುತ್ತಲೇ ಇದೆ. ಎಷ್ಟೊಂದು ವಿಸ್ಮಯ. ಅಷ್ಟೇ ಆನಂದ. ಸಾಕು ಈ ಅಂಶಾತ್ಮ ಜೀವಿ ಪೂರ್ಣಾತ್ಮದ ಅನುಭವ ಪಡೆದಾಗ ಇದಕ್ಕಿಂತ ಇನ್ನೇನು ಬೇಕು ಹೇಳಿ.

 

ಆದಕಾರಣ ನನ್ನ ಈ ಜನ್ಮಕ್ಕೆ ನಾನು ಹೆಮ್ಮೆಪಡುತ್ತೇನೆ. ಅದಲ್ಲದೇ 2012 ಡಿಸೆಂಬರ್ 21 ಭೂಮಿ ಪರಿವರ್ತನೆಯ ಸಮಯ. ಸುವರ್ಣಯುಗ ಪ್ರಾರಂಭ. ಇಂತಹ ಮಹತ್ತರವಾದ ಬದಲಾವಣೆಗೆ ನಾವು ಸಾಕ್ಷಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹಾಗೇ ಹೇಳುವಾಗ ನನ್ನ ದೇಹ ರೋಮಾಂಚಗೊಳ್ಳುತ್ತದೆ. ಆ ಆನಂದವೇ ಬೇರೆ.

 

ಇಷ್ಟೊಂದು ಅದ್ಭುತವಾದ ಧ್ಯಾನ-ಜ್ಞಾನವನ್ನು ಕೊಡುಗೆಯಾಗಿ ಕೊಟ್ಟ ಆ ಮಹಾವ್ಯಕ್ತಿಗೆ-ಆ ಮಹಾಶಕ್ತಿಗೆ ನಾನು ಕೊಡುತ್ತಿರುವ ಗುರುದಕ್ಷಿಣೆಯೆಂದರೆ 2012 ಕ್ಕೆಲ್ಲಾ ಪತ್ರೀಜಿಯವರ ಮಹದಾಶಯವಾದ ಧ್ಯಾನ ಜಗತ್ ನಿರ್ಮಾಣದಲ್ಲಿ ನಾನು ಸಹ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಧ್ಯಾನ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದೇನೆ. ಪತ್ರೀಜಿಯವರು ಶ್ರೀಶೈಲದಲ್ಲಿ ನಡೆದ ಮಹಾಯಜ್ಞದಲ್ಲಿ ಹೇಳಿದ ವಾಕ್ಯದಂತೆ- ಅಂಶಾತ್ಮದಿಂದ-ಪೂರ್ಣಾತ್ಮದ ಕಡೆ, ಮಾನವನಿಂದ-ಮಾಧವತ್ವದ ಕಡೆ, ಪಶುತ್ವದಿಂದ-ಪಶುಪತಿ ಕಡೆ ಪ್ರಯಾಣಿಸುತ್ತಿದ್ದೇವೆ ಎನ್ನುವ ಅವರ ಘೋಷಣೆ ಅಕ್ಷರಶಃ ನಿಜ. ಒಂದು ಸಾರಿ ಧ್ಯಾನಿಗಳೆಲ್ಲರೂ ಈ ಧ್ಯಾನ-ಜ್ಞಾನ ತಿಳಿಯದ ಹಿಂದಿನ ದಿನಗಳನ್ನು ಗುರುತಿಸಿಕೊಳ್ಳಿ. ಆಗ ಹೇಗಿತ್ತು ನಮ್ಮ ಜೀವನ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಈ ಧ್ಯಾನ ಅಳವಡಿಸಿಕೊಂಡ ನಂತರ ಈಗಿನ present ಜೀವನ ಹೇಗಿದೆ ? ಅದ್ಭುತವಾದ ಬದಲಾವಣೆ. ಪಶುತ್ವದಿಂದ-ಪಶುಪತಿ ಕಡೆ ನಮ್ಮ ಪ್ರಯಾಣ ಖಂಡಿತಾ ಸಾಗುತ್ತಿದೆ. ಅಲ್ವಾ ?

 

ಹಾಗೆಂದ ಮೇಲೆ ಎಲ್ಲರೂ ಒಂದು ಸಾರಿ ನಮ್ಮ ಜನ್ಮಗಳಿಗೆ ನಾವೇ ಧನ್ಯವಾದಗಳು ಹೇಳಿಕೊಂಡು ಇಂತಹ ಅದ್ಭುತವಾದ, ಆನಂದದಾಯಕ ಜೀವನವನ್ನು ಸಾಗಿಸಲು ಏಕೈಕ ಪಿರಮಿಡ್ ಧ್ಯಾನ ಮಾರ್ಗವನ್ನು ಅತೀ ಸುಲಭವಾಗಿ, ಸರಳವಾಗಿ, ಸಹಜವಾದುದನ್ನು ಹೇಳಿಕೊಟ್ಟ, ಬೋಧಿಸಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ಹೃತ್ಪೂರ್ವಕವಾದ ಕೃತಜ್ಞತೆ ಸಲ್ಲಿಸಿ, ಎಲ್ಲರೂ ಧ್ಯಾನ ಮಾಡೋಣ ಮತ್ತು ಧ್ಯಾನ ಮಾಡಿಸೋಣ ಅಲ್ವಾ? ಖಂಡಿತಾ.

 

ಈ ಪಿರಮಿಡ್ ಅನುಭವಗಳನ್ನು ನನಗೆ ಬರೆಯುವಂತೆ ಪ್ರೇರೇಪಿಸಿದ ಕರ್ನೂಲ್ ಪಿರಮಿಡ್ ಸೊಸೈಟಿಯವರಿಗೆ ನನ್ನ ವಂದನೆಗಳು.

 

S.M. ಸುಮಂಗಳ
ಸಿರುಗುಪ್ಪ
ಮೊಬೈಲ್ : +91 9739116805

Go to top