" 96 ಗಂಟೆಗಳ ವರೆಗೂ ಶ್ವಾಸಾಹಾರದಿಂದಿದ್ದ ಅಂತರ್ ಪ್ರಯಾಣಿಗ "

 

ಹಿಂದೊಮ್ಮೆ ಸುಮಾರು ವರ್ಷಗಳ ಹಿಂದೆ ಆಂಧ್ರಪ್ರದೇಶದ ವೀರ ಬ್ರಹ್ಮೇಂದ್ರ ಸ್ವಾಮಿಯವರು ಹೇಳಿದ ಮಾತು "ತಮ್ಮ ಶಿಷ್ಯನಾದ ಸಿದ್ದನು ಮುಂದೆ ಬಾಲಯೋಗಿ ಎಂಬ ಹೆಸರಿನಲ್ಲಿ ಜನ್ಮವೆತ್ತಿ ಅನ್ನ ನೀರು ಇಲ್ಲದೆ ಕೇವಲ ಶ್ವಾಸಾಹಾರದಿಂದ ಜೀವಿಸುವವನು ಎಂದು ಹೇಳಿದ್ದರು. "ಆದರೆ ಇಂದು ನಾವೆಲ್ಲಾ ಗರ್ವದಿಂದ ಮತ್ತು ಹೆಮ್ಮೆ ಪಡುವ ವಿಷಯವೇನೆಂದರೆ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರ ಜ್ಞಾನವನ್ನು ಪಡೆದು ಪಿರಮಿಡ್ ಸೊಸೈಟಿಯ ಪ್ರತಿಯೊಬ್ಬರೂ ಸಾಧನೆಯಿಂದ ಬಾಲಯೋಗಿಗಳಾಗಬಹುದು ಎನ್ನುವುದಕ್ಕೆ ಸಾಕ್ಷಿ - ಶ್ರೀ ಕೃಷ್ಣ ಪಿರಮಿಡ್ ಧ್ಯಾನ ಕೇಂದ್ರ ಸಿರಿಗುಪ್ಪ ಸದಸ್ಯರಾದ ಶ್ರೀನಾಗಭೂಷಣಪ್ಪರವರು. ಇವರು ಮೂರು ವರ್ಷಗಳಿಂದ ಪ್ರತಿ ದಸರಾ ಹಬ್ಬದ ಮುಂದೆ ಈ ಧ್ಯಾನ ಜಗತ್ತಿಗೆ ಏನಾದರೂ ಸಾಧಿಸಿ ತೋರಿಸುವ ಛಲ. ಅದೇ ಪ್ರಕಾರ ಈ ದಸರಾ ಹಬ್ಬದ ಪ್ರಯುಕ್ತವಾಗಿ, ಸೆಪ್ಟೆಂಬರ್ 21, 2009 ಸೋಮವಾರ ಸಂಜೆ 6 ಗಂಟೆಗೆ ಕುಳಿತವರು ಸೆಪ್ಟೆಂಬರ್ 25, 2009 ಶುಕ್ರವಾರ ಸಂಜೆ 6 ಗಂಟೆಯವರೆಗೂ ಯಾವುದೇ ಆಹಾರ ಫಲ, ನೀರಿಲ್ಲದೇ ಕೇವಲ ಶ್ವಾಸಾಹಾರದಿಂದಿದ್ದು ಅದ್ಭುತವಾಗಿ ನಾಲ್ಕು ದಿನಗಳ ಅಖಂಡ ಧ್ಯಾನವನ್ನು ಮುಗಿಸಿದರು. ಜೊತೆಗೆ ಅ 4 ದಿನಗಳಲ್ಲಿ ಸೂಕ್ಷ ಶರೀರ ಯಾನದ ಜೊತೆಗೆ ಅದ್ಭುತ ಆನಂದ ಪಡೆದು ಸೃಷ್ಟಿಯ ಎಲ್ಲಾ ಸೊಬಗನ್ನು ಆಸ್ವಾದಿಸಿದ್ದಾರೆ.

 

S.M. ಸುಮಂಗಳ
ಸಿರುಗುಪ್ಪ

Go to top