" ವಿಶಾಖಪಟ್ಟಣದ ಧ್ಯಾನಮಹಾಚಕ್ರವು ಇಲ್ಲಿಯವರೆಗೂ ನೋಡಿರದಷ್ಟು ಅದ್ಭುತ "

 

ಡಿಸೆಂಬರ್ 25 ರಂದು ಬೆಳಗ್ಗೆ ಧ್ಯಾನ ಮಾಡುತ್ತಿರುವಾಗ ಆಸ್ಟ್ರಲ್ ಪಿರಮಿಡ್ಸ್ ಎಲ್ಲ ಭೂಮಿಯ ಮೇಲೆ ಬರುತ್ತಾ ಇದ್ದವು. ಆಕಾಶದಿಂದ ದೊಡ್ಡದಾದ ಗ್ರಾತದಲ್ಲಿ ಬಂದು, ಭೂಮಿಯ ಹತ್ತಿರ ಬಂದಂತೆಲ್ಲ ಅವು ಚಿಕ್ಕದಾಗಿ ಮಾಯವಾಗುತ್ತಿದ್ದವು. ಅವುಗಳಲ್ಲಿ ಬಿಳಿ ಮತ್ತು ಹೆಚ್ಚಾಗಿ ಗೋಲ್ಡನ್ yellow ಮತ್ತು aqua blue ಬಣ್ಣದಲ್ಲಿ ಇದ್ದವು. ಅಲ್ಲದೆ ಪ್ರತಿಯೊಂದು ಪಿರಮಿಡ್ ಸಹ ತುಂಬಾ ಪ್ರಕಾಶಮಾನವಾಗಿ, transparant ಆಗಿ ಕಾಣುತ್ತಿತ್ತು. ಪ್ರತಿಯೊಂದು ಪಿರಮಿಡ್‌ನಲ್ಲಿ ಸಹ ಒಂದೊಂದು ಪುಸ್ತಕ ಇತ್ತು. ಆ ಪುಸ್ತಕ ಸಹ ಹೊಳಪಿನಿಂದ ಕೂಡಿತು. ಆಗ ನನಗನಿಸಿದ ಅನುಭವ; ಎಲ್ಲಾ ಮಾಸ್ಟರ‍್ಸ್‌ಗಳ ಜ್ಞಾನದ ಭಂಡಾರವೇ ಆ ಪುಸ್ತಕಗಳಲ್ಲಿ ಅಡಗಿದೆ ಎಂದೆನಿಸಿತು. ಈ ಸ್ಥಿತಿಯಲ್ಲಿ ನಾನು ಸುಮಾರು 15ನಿಮಿಷಗಳವರೆಗೆ ಹಾಗೆಯೇ ನೋಡುತ್ತಾ ಇದ್ದೆ. ಒಂದೊಂದು ಕ್ಷಣ ಅವುಗಳನ್ನು ನೋಡಲೂ ಆಗುತ್ತಿರಲಿಲ್ಲ. ಅಷ್ಟೊಂದು ಹೊಳಪು ಎನರ್ಜಿ ಆಗಿ ಹೊರಗಡೆ ಬರುತ್ತಾ ಇತ್ತು. ಬಹಳ ಆನಂದಮಯವಾದ ಕ್ಷಣ. ಹಾಗೆಯೇ ನೋಡುತ್ತಾ ಇದ್ದೆ. ತಲೆ ಎತ್ತಿ ನೋಡಿದಷ್ಟು ವರ್ಣನಾತೀತವಾದ ಆನಂದ. ಆ ಕ್ಷಣ ಅನುಭವಿಸಬೇಕು ಅಷ್ಟೇ.

 

ಡಿಸೆಂಬರ್ 28 ರಂದು ಬೆಳಗ್ಗೆ ಧ್ಯಾನ ಮಾಡುತ್ತಿರುವಾಗ ಆದ ಅನುಭವ: ಒಂದು ದೊಡ್ಡ ಕೋಟೆ ತರಹ ಇತ್ತು. ಅಲ್ಲಿ ದೊಡ್ಡದಾದ ಮಹಾದ್ವಾರದಿಂದ ಚಿಕ್ಕ ಚಿಕ್ಕ ಹುಡುಗುರು ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನು ಇದು? ಇಷ್ಟೆಲ್ಲಾ ಮಕ್ಕಳು ಎಲ್ಲಿಂದ ಬರುತ್ತಿದ್ದಾರೆ ಎಂದುಕೊಂಡು ಹಾಗೇ ದ್ವಾರದ ಒಳಗಡೆ ನೋಡುತ್ತಿದ್ದೇನೆ. ತುಂಬಾ ಆಶ್ಚರ್ಯವಾಯಿತು. ಎಲ್ಲಾ great masters ಮಕ್ಕಳಾಗಿ ಭೂಮಿಯ ಮೇಲೆ ಬರುತ್ತಿದ್ದಾರೆ. ಅವರ ಪ್ರತಿಯೊಬ್ಬರ ಕೈಯಲ್ಲೂ ಸಹ ನಾನು ಮುಂಚೆ ನೋಡಿದ ಪುಸ್ತಕಗಳಿವೆ. ಅದೇ ಹೊಳಪು. ಆ ಮಾಸ್ಟರ‍್ಸ್‌ಗಳೆಲ್ಲಾ ಗುಂಪು ಗುಂಪಾಗಿ ಬಂದು ಇನ್ನೇನು ಮಹಾದ್ವಾರದ ಹತ್ತಿರ ಬರುತ್ತಿದ್ದ ಹಾಗೆಯೇ ಮಕ್ಕಳಾಗಿ ಮಾರ್ಪಾಡಾಗಿ ಭೂಮಿಯ ಕಡೆ ಬರುತ್ತಿದ್ದಾರೆ. ಅವರಲ್ಲಿ ನನಗೆ ಸ್ಪಷ್ಟವಾಗಿ ಕಂಡಿದ್ದು ಮಹಾವಾತಾರ್ ಬಾಬಾಜಿ. ಅವರು ಬರುತ್ತಾ ಬರುತ್ತಾ ಚಿಕ್ಕ ಮಗುವಾಗಿ ಹೆಣ್ಣು ಮಗುವಾಗಿ ಕಂಡರು. ಹಾಗೆಯೇ, ವೀರಬ್ರಹ್ಮೇಂದ್ರ ಸ್ವಾಮಿ, ತಿಂತಣಿಯ ಮೌನೇಶ್ವರರು, ವಿಶ್ವೇಶ್ವರಯ್ಯ, ಬಸವೇಶ್ವರರು ಇನ್ನೂ ಕೆಲವರು ನಾವು ಶಂಬಲದಿಂದ ಬರುತ್ತಿದ್ದೇವೆ ಎಂದು ಹೇಳುತ್ತಾ ನಮಗೆ ದಾರಿ ಬಿಡಿ ಎಂದು ಅವಸರ ಅವಸರವಾಗಿ ಭೂಮಿಯ ಕಡೆ ಬರುವ ಅವರ ಆತುರ ನೋಡಿ ನಾನು ಸ್ಥಂಬಿತಳಾದೆ. ಮೈಯ್ಯೆಲ್ಲಾ ರೋಮಾಂಚನವಾಯಿತು.

 

ಸುಮಂಗಳ
ಸಿರುಗುಪ್ಪ
ಫೋನ್  : +91 9739116805

Go to top