" ಎಲ್ಲರಿಗೂ ಮೂರನೆಯ ಕಣ್ಣು ಇದೆ, ಮೇಡಂ... "

 

 

" ಸಿದ್ಧಿ ಸಮಾಧಿ ಯೋಗ ", " ಸಮಾಧಿ ಮೆಡಿಟೇಷನ್‌ ", " ಸೋಹಂ ಮೆಡಿಟೇಷನ್‌ ", " ಕುಂಡಲಿನೀ ಮೆಡಿಟೇಷನ್‌ ", " ಓಷೋ ಡೈನಮಿಕ್‌ ", " ಅಷ್ಟಾಂಗ ಯೋಗ "," ಬ್ರಹ್ಮಕುಮಾರೀಸ್ ", " ಕ್ರಿಯಾ ಯೋಗ "," ವಿಪಸ್ಸನ " ಅನೇಕಾನೇಕ ಆಧ್ಯಾತ್ಮಿಕ ಸಂಸ್ಥೆಗಳಿಗೆ ಭೇಟಿನೀಡಿದೆ. ಅವನ್ನು ನೋಡಿದೆ.... ಎಷ್ಟು ಪರಿತಪಿಸಿದೆನೋ ... ಆದರೂ, ಏನೋ ಬೇಕು... ಅದು ಏನೋ ಗೊತ್ತಿಲ್ಲ.

 

ಒಂದೊಂದು ಕಡೆಗೂ ಹೋಗಿ ತಿಂಗಳಗಟ್ಟಳೆ, ವಷಗಟ್ಟಳೆ (ಅನೇಕ ತಿಂಗಳುಗಳು, ವರ್ಷಗಳು) ಆ ಪದ್ಧತಿಗಳೆಲ್ಲಾ ಅಭ್ಯಾಸಮಾಡಿದ ನಂತರ, ಪಾಲಿಸಿದ ನಂತರ, " ಅದು ಯಾವುದೋ ಬೇರೆ ಇದೆ...ಇದು ಮಾತ್ರ ಅಲ್ಲವೇ ಅಲ್ಲ "ಎನ್ನಿಸುತ್ತಿತ್ತು.

 

ಹೀಗೆ, ಒಂದು ಗೂಡಿನಿಂದ ಇನ್ನೊಂದು ಗೂಡಿಗೆ ನನ್ನ ಸತ್ಯಾನ್ವೇಷಣೆಯ ಪ್ರಕ್ರಿಯೆ ಮುಂದುವರೆದಿದೆ.

 

ವಿವೇಕಾನಂದರು ಎಂದರೆ ನನಗೆ ತುಂಬಾ ಇಷ್ಟ. . .ಅವರು ಕೂಡ ಹೀಗೆಯೇ ಓಡಾಡಿದ್ದರಲ್ಲವೇ.

 

" ನಾನ್ಯಾರು?" " ಎಲ್ಲಿಂದ ಬಂದಿದ್ದೇನೆ? ", " ಏನು ಮಾಡುತ್ತಿದ್ದೇನೆ? "," ಪ್ರಾಣಿಗಳಿಗೂ-ನಮಗೂ ಇರುವ ವ್ಯತ್ಯಾಸವೇನು? ", " ನಾವು ಪ್ರಾಣಿಗಳಿಗಿಂತಾ ಭಿನ್ನವಾಗಿ ಏನು ಮಾಡಬೇಕು? ", " ಮೂರನೆಯ ನೇತ್ರ ಅಂದರೆ ಏನು? ", " ನನ್ನೊಳಗೆ ನಾನು ನೋಡಿಕೊಳ್ಳುವುದು ಹೇಗೆ? ", " ಸೂಕ್ಷ ಶರೀರಯಾನ ನಿಜವಾಗಲೂ ಇದೆಯಾ? "

 

ಎಲ್ಲೂ ಉತ್ತರಗಳು ಸಿಗದ ಈ ಪ್ರಶ್ನೆಗಳಿಂದ ‘ಲಲಿತಕಲಾ ತೋರಣ’ ದಲ್ಲಿ ನಡೆದ ಪತ್ರೀಜಿ ಕಾರ್ಯಕ್ರಮಕ್ಕೆ ಹೋಗಿದ್ದೇನೆ.

 

ಅವರನು ಭೇಟಿಯಾಗಲಿಲ್ಲ, ಮಾತನಾಡಲಿಲ್ಲ. ಆದರೆ, ಆ ದಿನದ ಕಾರ್ಯಕ್ರಮದಲ್ಲಿ ಪತ್ರೀಜಿ ನೀಡಿದ ಸಂದೇಶವು ಒಟ್ಟಾರೆ ನನ್ನ ಪ್ರಶ್ನೆಗಳಿಗೆ ಉತ್ತರಗಳೇ. " ಕೇವಲ ನನ್ನೊಬ್ಬಳಿಗೆ ಮಾತ್ರವೆ... ಆ ಉಪನ್ಯಾಸ ಹೇಳುತ್ತಿದ್ದಾರಾ? " ಎಂದು ನನಗೆ ಅನ್ನಿಸಿತು. ಇನ್ನೂ ಕೇಳಲು ಯಾವ ಪ್ರಶ್ನೆಗಳೂ ಉಳಿಯಲಿಲ್ಲ. ತುಂಬಾ ಸ್ಪಷ್ಟತೆ ಸಿಕ್ಕಿತು. ಸಂತೃಪ್ತಿ ಉಕ್ಕಿಹರಿಯಿತು.

 

" ಮೂರನೆಯ ಕಣ್ಣು ಇರುವವನು ಶಿವನೊಬ್ಬನೇ ಅಲ್ಲ... ಎಲ್ಲರಿಗೂ ಮೂರನೆಯ ಕಣ್ಣು ಇದೆ... ಮೇಡಮ್ " ಎರಡನೆಯ ಬಾರಿ ಪತ್ರೀಜಿಯವರನ್ನು ನೋಡಿದಾಗ ಅವರು ನುಡಿದ ಈ ಮಾತು... ಎಷ್ಟು ಜನ್ಮಗಳು ತಾಳಿದರೂ ಮರೆತುಹೋಗಲಾರದಷ್ಟು ನನ್ನ ಎದೆಯಲ್ಲಿ ನಾಟಿಬಿಟ್ಟಿದೆ. ಕಾರಣ ಗೊತ್ತಿದೆಯಾ? ಆ ದಿನ " ಪತ್ರೀಜಿಯವರನ್ನು ಕೇಳಿ ’ಮೂರನೆಯ ಕಣ್ಣು’ ಕುರಿತು ತಿಳಿದುಕೊಳ್ಳಬೇಕು " ಎಂದೆನಿಸಿತು ನನಗೆ... ಕೇಳದೆಯೇ ಸಿಕ್ಕಿತ್ತು ಉತ್ತರ.

 

" ನಾನು ಶ್ರೇಷ್ಠ " , " ಗುರುವೇ ದೈವ ", " ನನ್ನತ್ತ ಶರಣು ಬನ್ನಿ ", " ಎಲ್ಲಾ ನಾನೇ ನೋಡಿಕೊಳ್ಳುತ್ತೇನೆ ", ಎಂಬುವ ಮಾತು ಇಲ್ಲಿಲ್ಲ. ದಟೀಸ್ ಪತ್ರೀಜಿ.

 

" ನಿನ್ನ ದೀಪವನ್ನು ನೀನೇ ಬೆಳಗಿಸಿಕೋ ", " ನಿನಗಾಗಿ ನಾನು ಏನೂ ಮಾಡುವುದಿಲ್ಲ " ಮನೆಯಲ್ಲಿ ಬಹಳಷ್ಟು ಸಮಸ್ಯೆ ಬಂದಿತ್ತು.. ಹೇಳಿಕೊಳ್ಳಲೆಂದು ಹೋದರೆ... ಯಾರಿಗೋ ಈ ಮಾತುಗಳನ್ನು ಅವರು ಹೇಳುತ್ತಿದ್ದರು... ಯಾರಿಗೆ ಈ ಉತ್ತರ??

 

ಇತರೆ ಆಶ್ರಮಗಳಲ್ಲಿ ಆಚಾರಗಳು...ಕಟ್ಟುಪಾಡುಗಳಿರುತ್ತವೆ. ಆದರೆ, ಇಲ್ಲಿ... " ಧ್ಯಾನ ಮಾಡು " ಅಷ್ಟೇ. " ಉಂಡ ನಂತರವಾದರೂ ಧ್ಯಾನ ಮಾಡು, ಉಣ್ಣುವುದಕ್ಕಿಂತಾ ಮುಂಚೆಯಾದರೂ ಸರಿ ಧ್ಯಾನ ಮಾಡು, ಎಲ್ಲಾದರೂ ಮಾಡು, ಯಾವಾಗಲಾದರೂ ಮಾಡು ", ನಿಬಂಧನೆಗಳು ಎಂಬುವುದಿಲ್ಲವೇ ಇಲ್ಲ. " ಶ್ವಾಸದ ಮೇಲೆ ಗಮನ " ಇದೊಂದೇ.. ಇದಕ್ಕಿಂತಾ ಸುಲಭವಾದ ದಾರಿ ಇದಕ್ಕೂ ಮುಂಚೆ ಯಾರೂ ತೋರಿಸಲಿಲ್ಲ, ದಟೀಸ್ ಪತ್ರೀಜಿ.

 

ನಮ್ಮ ಯಜಮಾನರು ಗೋಪಾಲರೆಡ್ಡಿಯವರು... ಇದುವರೆಗೂ ನಾನು ನಂಬಿರುವ ಅನೇಕ ಪದ್ಧತಿಗಳನ್ನು ಅವರಿಂದ ಮಾಡಿಸಬೇಕೆಂದು ಶತಪ್ರಯತ್ನಗಳನ್ನು ಮಾಡಿದೆ. ಆದರೆ, ಅವರು ಒಂದು ಪದ್ಧತಿಯನ್ನು ಸಹ ಪ್ರಯತ್ನಿಸಲಿಲ್ಲ. ಆದರೆ... ಪತ್ರೀಜಿ ಮಾರ್ಗವನ್ನು ಕುರಿತು ಹೇಳಿದ... ತಕ್ಷಣ ಈ ಮಾರ್ಗಕ್ಕೆ ಬಂದರು,ಯಾಕಂತೀರ?? ದಟೀಸ್ ಪತ್ರೀಜಿ.

 

ಕಿರಿಯ ಮಗ ಮಧುಕರ್ ರೆಡ್ಡಿ... ಓದಿನ ಮೇಲೆ ಗಮನವೇ ಇಲ್ಲದ ಹುಡುಗ... ಪತ್ರೀಜಿ ಮಾರ್ಗಕ್ಕೆ ಬರುವ ಹಾಗೆ ಅವನನ್ನು ಬದಲಾಯಿಸಿದೆ. ದುಬಾಯ್‌ನಲ್ಲಿ ತನ್ನ ಸ್ವಂತ ಮೀಡಿಯಾ ಕನ್ಸೆಲ್ಟೆನ್ಸಿ ಇಟ್ಟು 210 ಭಾಷೆಗಳಲ್ಲಿ ವ್ಯಾಪಾರ ಕಾರ್ಯಕಲಾಪಗಳನ್ನು ಮಾಡಬಲ್ಲವನಾಗಿದ್ದಾನೆ. ಅವನು ಸಹ ಪತ್ರೀಜಿ ಮಾರ್ಗವೇ ಅಂತಿಮ ಮಾರ್ಗವೆಂದು ಪೂರ್ಣವಾಗಿ ನಂಬಿದ್ದಾನೆ.

 

ಪ್ರತ್ಯೇಕವಾಗಿ ’ಮಿರಾಕಲ್ಸ್’ ಎಂಬುವುದು ಯಾವುದನ್ನೂ ಮಾಡದೆ, ನಡೆದ ಪ್ರತಿಯೊಂದೂ ’ಮಿರಾಕಲ್ಲೇ’ ಅನಿಸುವ ಹಾಗೆ ಮಾಡುವುದೇ ಅಲ್ಟಿಮೆಟ್ ಗುರುವಿನ ಲಕ್ಷಣ.... ಅಂಡ್ ... ದಟೀಸ್ ಪತ್ರೀಜಿ....

 


ಸುಂದರಿ ಗೋಪಾಲರೆಡ್ಡಿ
ಹೈದರಾಬಾದ್

ಫೋನ್ : 040-27532066

Go to top