" ನನ್ನ ಧ್ಯಾನಾನುಭವ ಮತ್ತು ಸೇವೆ "

 

ನನ್ನ ಹೆಸರು ಸುನಿತ. ನಾನು ರಾಮನಗರದ ವಾಸಿಯಾದ P.V.ಮಂಜುನಾಥ ಅವರ ಪತ್ನಿ. ನನಗೆ ಇಬ್ಬರು ಗಂಡು ಮಕ್ಕಳು. ಅವರು ಧ್ಯಾನವನ್ನು ಮಾಡುತ್ತಿದ್ದಾರೆ. ನಾನು 2006ರಲ್ಲಿ ಪ್ರೇಮ್‌ನಾಥ್ ಸಾರ್ ಅವರ ಮೂಲಕ ಧ್ಯಾನ ಪ್ರಪಂಚಕ್ಕೆ ಪ್ರವೇಶ ಮಾಡಿದೆ. ಮೊದಲ sitting ನಲ್ಲಿ ಬುದ್ಧ ಭಗವಾನರು ಬೋಧಿವೃಕ್ಷದ ಕೆಳಗೆ ಕುಳಿತು ನನಗೆ ಏನೋ ಬೋಧನೆಯನ್ನು ಮಾಡಿ energy ಯನ್ನು ಕೊಡುತ್ತಿದ್ದ ದೃಶ್ಯವನ್ನು ಕಂಡೆನು. ನಂತರ, ನನ್ನ ಹಿಂದಿನ ಜನ್ಮವನ್ನು ಕೂಡ ನೋಡಿದೆ. ಇದೆಲ್ಲ ನಂಬಲು ಸಾಧ್ಯವಾಗಲಿಲ್ಲ. ಆದರೆ, ಪ್ರೇಮ್‌ನಾಥ್ ಸಾರ್ ಅವರು ವಿವರವಾಗಿ ಅರ್ಥಮಾಡಿಸಿದರು. ಹೀಗೆ ಪ್ರತಿ sitting ನಲ್ಲಿ ಅನೇಕ ಅದ್ಭುತಗಳನ್ನು ಕಂಡೆನು. ಮೊದಲ ಬಾರಿ ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಅವರನ್ನು ಗೌರಿಬಿದನೂರಿನಲ್ಲಿ ನೋಡಿದೆ. ಆಗ ನನಗೆ ಆದ ಆನಂದ ಹೇಳಲು ಮಾತುಗಳು ಸಾಲದು. ಎಲ್ಲರಿಗೂ ಧ್ಯಾನವನ್ನು ಕಲಿಸಲು ಪ್ರಾರಂಭ ಮಾಡಿದೆ. ಆಗ ನಮ್ಮ ಯಜಮಾನರು ಒಪ್ಪಲಿಲ್ಲ. ಸ್ವಲ್ಪ ದಿನಗಳ ಕಾಲ ಧ್ಯಾನ ಮಾಡಿ, ಮತ್ತೆ ಕೇಳಿದೆ ಆಗ ಅವರು ಒಪ್ಪಿಗೆ ನೀಡಿದರು. ಅವರ ಸಹಾಯ ಮತ್ತು ಸಹಕಾರಗಳಿಂದ ಎಲ್ಲವನ್ನು ಮಾಡುತ್ತಿದ್ದೇನೆ. ಧ್ಯಾನ ಕಲಿಸಲು ಸೀನಿಯರ್ ಮಾಸ್ಟರ‍್ಸ್ ಅನ್ನು ಕರೆಸಿದ್ದೇವೆ. PYMA ತರಗತಿಗಳನ್ನು ಕೂಡ ಪೈಮಾ ಮಾಸ್ಟರ‍್ಸ್ ಬಂದು ನಡೆಸಿಕೊಟ್ಟರು. ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರು 17 ನವೆಂಬರ್ 2008 ರಂದು ನಮ್ಮ ಊರಿಗೆ ಬಂದಿದ್ದರು. ಅದು ದೊಡ್ಡ ಹಬ್ಬದ ಸಂಭ್ರಮವೆನಿಸಿತು. ಇನ್ನು ನನ್ನ ವಿಷಯಕ್ಕೆ ಬಂದರೆ, ನಾಲ್ಕು ಜನರ ಮುಂದೆ ನಿಂತು ಮಾತನಾಡುವ ಧೈರ್ಯ ನನಗೆ ಇರಲಿಲ್ಲ. ಆದರೆ, ಈಗ ನೂರು ಜನರು ಇದ್ದರೂ ಧೈರ್ಯವಾಗಿ ಮಾತನಾಡುತ್ತೇನೆ. ನನಗೆ ಬೆನ್ನುನೋವು (ಸ್ಲಿಪ್-ಡಿಸ್ಕ್) ಇತ್ತು. ಈಗ ತುಂಬ ಗುಣವಾಗಿದೆ. "ನವ ಚೈತನ್ಯ ಸ್ಪಿರಿಚ್ಯುವಲ್ ಕೇರ್ ಸೆಂಟರ್‌" ಕೇಂದ್ರವನ್ನು ಮಾಡಿಕೊಂಡಿದ್ದೇವೆ. ಧ್ಯಾನ ಪ್ರಚಾರದಲ್ಲಿ Team-work ತುಂಬ ಚೆನ್ನಾಗಿ ನಡೆಯುತ್ತಾ ಇದೆ. 41 ಗಂಟೆಗಳ ಅಖಂಡ ಧ್ಯಾನವನ್ನು ಗುರುಪೌರ್ಣಮಿಯಂದು ಮಾಡಿದೆವು. ನಂತರ, ಕಾರ್ತಿಕ ಪೌರ್ಣಮಿಯಂದು 41 ಗಂಟೆ ಅಖಂಡ ಧ್ಯಾನವನ್ನು ಮಾಡಿದೆವು. ಅಖಂಡ ಧ್ಯಾನದಲ್ಲಿ ಕುಳಿತ್ತಿದ್ದಾಗ ನನಗೆ ಮಂಡಲ ಧ್ಯಾನ ಮಾಡಬೇಕು ಎನ್ನುವ ಸಂಕಲ್ಪ ಬಂತು. ಅದೇ ರೀತಿ ಮಾರನೆಯ ದಿನದಿಂದ ಪ್ರಾರಂಭ ಮಾಡಿದೆವು. ಪ್ರತಿ ದಿನ 5 ಗಂಟೆಗಳ ಕಾಲ ಬೆಳಿಗ್ಗೆ 11 ರಿಂದ 4 ರವರೆಗೆ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಧ್ಯಾನ ಮಾಡಿದೆವು. ಧ್ಯಾನದಲ್ಲಿ ಕುಳಿತು ಪತ್ರೀಜಿ ಅವರಿಗೆ message ಅನ್ನು ಕೇಳಿದಾಗ, ರಾಮನಗರದಲ್ಲಿ ಮಾಂಸಾಹಾರ ಹೆಚ್ಚಾಗಿ ಇರುವುದರಿಂದ, ಎಲ್ಲಾ ಕಡೆ energy ಹರಡಬೇಕು ಎಂದು ಹೇಳಿದರು. ಇದರಿಂದ ನನಗೆ ಬಹಳ ಸಂತೊಷವಾಯಿತು.

 

ಧ್ಯಾನ ಮಾಡಿ, ಧ್ಯಾನ ಮಾಡಿಸಿ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರ ಆಶಯವಾದ ಧ್ಯಾನ ಜಗತ್ತಿನ ಪಯಣದಲ್ಲಿ ಎಲ್ಲರೂ ಭಾಗಿಯಾಗೋಣ. ಜೈ ಧ್ಯಾನ ಜಗತ್ 2012.

 

ಸುನಿತ
ರಾಮನಗರ್

Go to top