" ನಿಶ್ಚಬ್ಧತೆಯಲ್ಲಿ ನನ್ನನ್ನು ನಾನು ಆಲಿಸುತ್ತಿದ್ದೇನೆ "

 

 

ನನ್ನ ಹೆಸರು ಸುಷ್ಮಾ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳಿದ ಎರಡು ವರ್ಷಗಳಿಂದ ಧ್ಯಾನಾಭ್ಯಾಸ ಮಾಡುತ್ತಿದ್ದೇನೆ. ಈಜಿಪ್ಟ್ ಪ್ರವಾಸ ನನಗೊಂದು ಅತ್ಯುನ್ನತ ಅನುಭವ.

 

ಗೀಜ ಪಿರಮಿಡ್‌ನಲ್ಲಿ ಧ್ಯಾನ ಮಾಡಿದಾಗ ಮಾತ್ರ ಮನಸ್ಸು ಶಾಂತವಾಗಿತ್ತು. ದೇಹ ಭಾರವಾಗಿತ್ತು. ಅದಾದ ನಂತರದ ಅನುಭವಗಳು ಮತ್ತು ಮನಸ್ಸಿನ ಸ್ಥಿತಿ ಅಮೋಘ. ಅಂದಿನಿಂದ ನಿಶ್ಚಬ್ಧತೆಯಲ್ಲಿ ನನ್ನನ್ನು ನಾನು ಆಲಿಸುತ್ತಿದ್ದೇನೆ. ಹಿಂತಿರುಗಿ ಬಂದ ಮೇಲೆ ಮನೆಯ ವಾತಾವರಣ ಕೂಡ ಬದಲಾಗಿದೆ, ಎಲ್ಲರು ಸಂತೋಷದಿಂದಿದ್ದೇವೆ. ನನ್ನ 3 ವರ್ಷದ ಮಗಳು 2 ದಿನಕ್ಕೂ ಹೆಚ್ಚುಕಾಲ ನನ್ನನ್ನು ಬಿಡದವಳು 11 ದಿನಗಳಲ್ಲಿ ಒಮ್ಮೆ ಕೂಡ ನನ್ನ ಕುರಿತು ಕೇಳಿಲ್ಲ ಮತ್ತು ತುಂಬ ಸಂತೋಷದಿಂದಿದ್ದಳು. ನಮ್ಮ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿ ರವರಿಗೆ ನನ್ನ ನಮಸ್ಕಾರಗಳು.

 

ಸುಷ್ಮಾ
ಬೆಂಗಳೂರು

Go to top