" ಇಡೀ ರಾತ್ರಿ ಧ್ಯಾನ ಮಾಡಿ ಹಗಲೆಲ್ಲಾ ಧ್ಯಾನ ಪ್ರಚಾರ ಮಾಡುತ್ತಿದ್ದೇನೆ " 

 

 

ನನ್ನ ಹೆಸರು ಸುವರ್ಣ. ನಾನು ಕಳೆದ ಹತ್ತು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಹುಟ್ಟಿದ್ದು ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ. ನಾನು ಧ್ಯಾನ ಮಾಡುವಾಗ ಅನೇಕ ದಿವ್ಯಾನುಭವಗಳಾಗಿವೆ. ನಿಜವಾಗಿಯೂ ಇದು ನನ್ನ ಪೂರ್ವಜನ್ಮದ ಸುಕೃತ. ಹಾಗೂ ಕಳೆದ ಆರು ತಿಂಗಳಿಂದ ನಾಯ್ಡುಸಾರ್ ಹೇಳಿದ ಮೇಲೆ ಇಡೀ ರಾತ್ರಿ ಧ್ಯಾನಮಾಡಿ ಹಗಲೆಲ್ಲಾ ಧ್ಯಾನ ಪ್ರಚಾರ ಮಾಡುತ್ತಿದ್ದೇನೆ. ನನ್ನ ಆತ್ಮಶಕ್ತಿ ಎಷ್ಟು ಹೆಚ್ಚಿದೆ ಎಂದರೆ ಪ್ರತಿಯೊಂದು ಕೆಲಸವನ್ನು ಯಾರ ಮೇಲೂ ಅವಲಂಬಿಸದೆ ನಾನೇ ಮಾಡಿಕೊಳ್ಳುತ್ತಿದ್ದೇನೆ.

 

ಕಳೆದ ಐದು ವರ್ಷದ ಹಿಂದೆ ನನ್ನ ಮಗ 11 ವರ್ಷವಿದ್ದಾಗ 3ನೇ ಅಂತಸ್ತಿನ ಮೇಲಿಂದ ಬಿದ್ದರೂ ಸಣ್ಣ ಗಾಯದಿಂದ ಬಚಾವಾಗಿದ್ದಾನೆ. ಇದೆಲ್ಲವೂ ಆಸ್ಟ್ರಲ್‌ಮಾಸ್ಟರ್ಸ್ ಸಹಾಯ. ಅಂದಿನಿಂದ ಧ್ಯಾನವನ್ನು ಇನ್ನೂ ಹೆಚ್ಚಿಸಿ ಪ್ರಚಾರ ಮಾಡಲು ಶುರು ಮಾಡಿದ್ದೇನೆ. ಪ್ರತಿಯೊಬ್ಬರೂ ಧ್ಯಾನಮಾಡಿ ಜೀವನದಲ್ಲಿ ಆನಂದವನ್ನು ಹೊಂದಬೇಕೆನ್ನುವುದೇ ನನ್ನ ಸಂದೇಶ.

 

ಸುವರ್ಣ
ಚಿಂತಾಮಣಿ

Go to top