" ಧ್ಯಾನದಿಂದ ನನ್ನ ಬೆನ್ನು ನೋವು ಕಡಿಮೆಯಾಗಿದೆ " 

 

ನಾನು ಕಳೆದ ನಾಲ್ಕು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಇದರಿಂದ ನನಗೆ ಅನೇಕ ಲಾಭವಾಗಿದೆ. ಧ್ಯಾನದಿಂದ ನಾನು ಮಾನಸಿಕ ನೆಮ್ಮದಿ, ಶಾಂತಿಯನ್ನು ಕಂಡುಕೊಂಡಿದ್ದೇನೆ. ಇದರಿಂದ ನನಗೆ ಬೆನ್ನುನೋವು ಕಡಿಮೆಯಾಗಿದೆ.

 

ಪ್ರತಿದಿನ ಧ್ಯಾನಮಾಡುವುದರಿಂದ ನಮ್ಮ ಎಲ್ಲಾ ಕೆಲಸ ಕಾರ್ಯಗಳೂ ಯಾವ ತೊಂದರೆ ಇಲ್ಲದೆ ಸುಸೂತ್ರವಾಗಿ ನೆರವೇರುತ್ತಿವೆ. ನಾವು ಇಡೀದಿನ ಉತ್ಸಾಹದಿಂದ ಮತ್ತು ಉಲ್ಲಾಸಭರಿತವಾಗಿ ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ. 

 

ಧ್ಯಾನ ಮಾಡುವುದರಿಂದ ನಾವು ನಮ್ಮ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತೇವೆ. ಇದರಿಂದ ನಮಗೆ ಇತರರ ಮೇಲೆ ಕೋಪ, ಅಸೂಯೆ, ಮತ್ತು ದ್ವೇಷಭಾವನೆ ಉಂಟಾಗುವುದಿಲ್ಲ. 

 

T. ವೀರಣ್ಣ
ದಾವಣಗೆರೆ

Go to top