" ಧ್ಯಾನದಿಂದ ನನ್ನ ಆರೋಗ್ಯ ವೃದ್ಧಿ ಆಯಿತು "

 

ನನ್ನ ಹೆಸರು T.ನಾಗಭೂಷ್ಣಪ್ಪ ರಾಯಚೂರ್. G.ಸಿಂಧನೂರ್ ತಾ "ಧಡೇಸೂಗುರ್ ಶ್ರೀ ಕಾಮಧೇನು ಪಿರಮಿಡ್ ಧ್ಯಾನ ಕೇಂದ್ರದ" ಧ್ಯಾನಿಯಾದ ನಾನು ನನ್ನ ಧ್ಯಾನ ಅನುಭವವನ್ನು ಹಂಚಿಕೊಳ್ಳಲು ಬಹಳ ಹೆಮ್ಮೆಪಡುತ್ತೇನೆ.

 

ಧ್ಯಾನಕ್ಕೆ ಬರುವ ಮೊದಲು ಬಹಳ ಆನಾರೋಗ್ಯ ಬಹಳ ಭಯದಿಂದ ಬಳಲುತಿದ್ದೆನು, ಮಾಸ್ಟರ್‌ಗಳಾದ G.B.ಗುಂಡಳ್ಳಿವಕೀಲರು ಹಾಗೂ H.J.ಹನುಮೇಶಯ್ಯ ಮಾಸ್ಟರ್‌ಗಳಿಂದ ಧ್ಯಾನವನ್ನು ಕಲಿತೆನು. ಪ್ರಾರಂಭದಲ್ಲೆ 45 ನಿಮಿಷಗಳ ಕಾಲ ಧ್ಯಾನ ಮಾಡಬೇಕೆಂದರೆ, ಪಡಬಾರದ ನೋವನ್ನು ಹಿಂಸೆಯನ್ನು ಅನುಭವಿಸಿದೆನು. ಹೀಗೆ 41ದಿನಗಳು ಮುಗಿಯುವುದರೊಳಗೆ ನನ್ನ ದೇಹದಲ್ಲಿ ಹಲವು ಬದಲಾವಣೆಗಳು ಅಗಾಧವಾದ ಧ್ಯಾನ ಮಾಡುವ ಚೈತನ್ಯ ಶಕ್ತಿ ಹಾಗೂ ನನ್ನಲ್ಲಿ ಇರುತಕ್ಕಂತಹ ನೋವುಗಳೆಲ್ಲ ಶೂನ್ಯವಾಗಿಹೋದವು. ಇನ್ನುಹೆಚ್ಚು ಸಾಧನೆ ಮಾಡುವ ಶಕ್ತಿ ನನಗೆ ಒದಗಿ ಬಂದಿತು. ಅದರಂತೆ, ಒಂದು ದಿನಕ್ಕೆ ಮೂರುಗಂಟೆಗಳ ಕಾಲ ಧ್ಯಾನ ಮಾಡುತ್ತಾ ಹೋದೆನು. ಅಗಾಧವಾದ ಅನುಭವಗಳು ವಿವಿಧ ಮಾಸ್ಟರ್‌ಗಳ ಪರಿಚಯವಾಯಿತು. ಇನ್ನೊಂದು ವಿಶೇಷ ಅನುಭವವೆಂದರೆ, ಪ್ರತಿ ನವರಾತ್ರಿಯಲ್ಲಿ ಮೊದಲನೆಯ ವರ್ಷದಲ್ಲಿ ರಾತ್ರಿ 10 ಗಂಟೆ ಇಂದ ಬೆಳಗಿನ ಜಾವ 6 ಗಂಟೆವರೆಗೂ 9 ದಿನಗಳ ಸತತ ಒಂದೇ ಸಿಟ್ಟಿಂಗ್‌ನಲ್ಲಿ ಧ್ಯಾನ ಮಾಡಿದ್ದೇನೆ.

 

ಎರಡನೇ ವರ್ಷದಲ್ಲಿ 21 ದಿನಗಳವರೆಗೆ, ಮೂರನೇ ವರ್ಷದಲ್ಲಿ 41ದಿನಗಳವರೆಗೆ ಹಾಗು ಶ್ರೀ ಕ್ರಿಷ್ಣ ಪಿರಮಿಡ್ ಧ್ಯಾನ ಕೇಂದ್ರ ಪ್ರಾರಂಭೋವತ್ಸವದಲ್ಲಿ 65ಗಂಟೆ ಸತತ ಧ್ಯಾನ ಮಾಡಿದೆನು. ಆ ದಿನ ಇನ್ನೊಂದು ವಿಶೇಷವೆಂದರೆ, ನಮ್ಮ ಮೇಡಂನವರಾದ ಶ್ರೀ ಸ್ವರ್ಣಮಾಲ ಪತ್ರೀಜಿಯವರು ಬಂದು ok ಮಾಡಿದ ನಂತರ, ನನಗೆ ಆದ ಆನಂದ ಹೇಳತೀರದು.

 

ಈ ವರ್ಷದ ನವರಾತ್ರಿಯಲ್ಲಿ ಇನ್ನೊ ಹೆಚ್ಚು ಧ್ಯಾನ ಮಾಡುವ ಸಂಕಲ್ಪ ಶಕ್ತಿ ನನ್ನಲ್ಲಿ ಒದಗಿ ಬಂತು. ಆ ಸಂಕಲ್ಪ ಶಕ್ತಿಯಂತೆ, ದಿನಾಂಕ 21/9/2009 ರಂದು ಸಾಯಂಕಾಲ 6 ಗಂಟೆಗೆ ಎಲ್ಲಾ ಪಿರಮಿಡ್ ಮಾಸ್ಟರಗಳ ಸಮಕ್ಷಮದಲ್ಲಿ ಧ್ಯಾನಕ್ಕೆ ಕುಳಿತೆನು. ಸತತ 4 ದಿನಗಳ ಕಾಲ ಅಂದರೆ, 96 ಗಂಟೆಗಳ ಅಖಂಡ ಧ್ಯಾನ ದಿನಾಂಕ 25/9/2009 ಶುಕ್ರವಾರ ಸಾಯಂಕಾಲ 6 ಗಂಟೆಗೆ ನಮ್ಮ ಎಲ್ಲಾ ಪಿರಮಿಡ್ ಮಾಸ್ಟರ್‌ಗಳು ಬಂದು ok ಮಾಡಿದರು. ಅದರಲ್ಲಿ ಆದ ಅದ್ಭುತ ಅನುಭವಗಳು ಹೇಳತೀರದು. ಈ ಅಖಂಡ ಧ್ಯಾನವು ನಮ್ಮ ಗ್ರಾಮದಲ್ಲಿ ನಡೆಯಿತು. ಈಗ ನನ್ನ ಜೀವನವನ್ನು ಕೇವಲ ಧ್ಯಾನ ಪ್ರಚಾರಕ್ಕೆ ಅಂಕಿತಗೊಳಿಸಿದ್ದೇನೆ.

 

ಇಂತಹ ಅದ್ಭುತ ಶಕ್ತಿ ಇರುವಂತಹ ಈ ಅನಾಪಾನಸತಿ ಧ್ಯಾನವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಧನ್ಯರಾಗಬೇಕು ಹಾಗೂ ಈ ಮಹಾ ಶಕ್ತಿಯನ್ನು ನಮಗೆ ಪರಿಚಯಿಸಿದ ಬ್ರಹ್ಮರ್ಷಿ ಪತ್ರೀಜಿಯವರಿಗೆ ಕೋಟಿ ಹೃದಯ ಪೂರ್ವಕ ನಮನಗಳು.

 

T. ನಾಗಭೂಷಪ್ಪ
ರಾಯಚೂರು

Go to top