" ಧ್ಯಾನಮಹಾಚಕ್ರದಲ್ಲಿ ಅಖಂಡ ಧ್ಯಾನ ದಿನಕ್ಕೆ 20 ಗಂಟೆಗಳು ಮಾಡಿದೆ "

 

ನಾನು ವಿಶಾಖಪಟ್ಟಣದಲ್ಲಿ ನಡೆದ ಧ್ಯಾನ ಮಹಾಚಕ್ರದಲ್ಲಿ ಅಖಂಡ ಧ್ಯಾನದಲ್ಲಿ ಪಾಲ್ಗೊಂಡು ಪ್ರತಿದಿವಸ 20 ಘಂಟೆಗಳಷ್ಟು ಧ್ಯಾನ ಮಾಡುತ್ತಿದ್ದೆ. ಆ ಹತ್ತು ದಿವಸಗಳಕಾಲ ನಾನು ಯಾವ ಘನ ಆಹಾರವನ್ನು ತೆಗೆದುಕೊಳ್ಳದೆ ಬರೀ ಮಜ್ಜಿಗೆ ಮತ್ತು ನೀರು ಮಾತ್ರ ತೆಗೆದುಕೊಳ್ಳುತ್ತಿದ್ದೆ. ಪ್ರತಿದಿವಸವೂ ಧ್ಯಾನದಲ್ಲಿ ನನಗೆ ಬಹಳ ಚೆನ್ನಾಗಿ ಅನುಭವಗಳು ಆಗುತ್ತಿತ್ತು. ನಾನು 3 ತಿಂಗಳ ಕಾಲ ನ್ಯೂಜಿಲೆಂಡ್‌ಗೆ ಹೋಗಿದ್ದೆ. ಅಲ್ಲಿ ಹವಾಗುಣದ (cold) ನಿಮಿತ್ತ ನನ್ನ ಎಡಗಡೆಯ ಕೈ ಬಹಳ ನೋವಾಗುತ್ತಿತ್ತು. ಕೈ ಆಡಿಸುವುದಕ್ಕೂ ತೊಂದರೆಯಾಗುತ್ತಿತ್ತು. ನನ್ನ ಮಗ, ಸೂಸೆ ಡಾಕ್ಟರ್ ಹತ್ತಿರ ತೋರಿಸಿದರು. ಅವರು ಮಾಂಸಖಂಡಗಳ ನೋವುಗಳು ವಾಸಿಯಾಗುವುದು ಕಷ್ಟ ಎಂದು ತಿಳಿಸಿದರು. ಆದರೆ, ನಾನು ಡಾಕ್ಟರ್ ಬಳಿಗೆ ಹೋಗದೆ ಬರೀ ಧ್ಯಾನವನ್ನು ಮಾತ್ರ ಮಾಡುತ್ತಿದ್ದೆ. ಅಖಂಡ ಧ್ಯಾನ ಮಾಡಿದ ಮರು ದಿವಸವೇ ನನ್ನ ಎಡ ಭುಜದ ಮೇಲೆ ಯಾರೋ ಕೈ ಇಟ್ಟಂತೆ ಆಯಿತು. ಆ ಅನುಭವ ಆದನಂತರ ನನ್ನ ನೋವು ಮಾಯವಾಗಿ, ಕೈಗಳಲ್ಲಿನ ಆ ಬಾಧೆಗಳೆಲ್ಲಾ ಕಡಿಮೆಯಾಯಿತು. ಪ್ರತಿದಿವಸವೂ ಕಣ್ಣು ಮುಚ್ಚಿ ಧ್ಯಾನಮಾಡುವಾಗ ಬಹಳ ಬೆಳಕು ಕಾಣಿಸುತ್ತಿತ್ತು. ಆ ಬೆಳಕಿನ ಕಾಂತಿ ಎಷ್ಟು ಚೆನ್ನಾಗಿರುತ್ತಿತ್ತು ಎಂದರೆ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ನಾನು ಇಲ್ಲಿ ಕಣ್ಣು ಮುಚ್ಚಿದ್ದರೆ, ಆ ಬೆಳಕಿನಲ್ಲಿ ನನ್ನ ಎರಡು ಕಣ್ಣುಗಳು ತೆರೆದು ನೋಡುತ್ತಿದ್ದೆ. ಒಂದು ಬಾರಿ ಬಹಳ ಹೂವಿನ ವಾಸನೆ ಬರುತ್ತಿತ್ತು ಅದು ಇಲ್ಲಿ ನಾವುಗಳು ಬೆಳೆಯುತ್ತಿರುವ ಮಲ್ಲಿಗೆ, ಸಂಪಿಗೆ ಹೂವುಗಳ ವಾಸನೆ ಅಲ್ಲ. ಅವೇ ಬೇರೆ ರೀತಿ ಇರುತ್ತಿತ್ತು. ಈ ರೀತಿ ಪ್ರತಿ ದಿವಸವೂ ಒಂದೊಂದು ರೀತಿಯ ಅನುಭವ ಮತ್ತು 10 ದಿವಸಗಳು, ಉಪವಾಸ ಮಾಡಿದರೂ ಸಹ ನನ್ನ ದೇಹಕ್ಕೆ ಸುಸ್ತು ಏನೂ ಇಲ್ಲದೆ ಆರೋಗ್ಯ ಮತ್ತಷ್ಟು ಹೆಚ್ಚಾಯಿತು. ಶಕ್ತಿಯು ಸಹ ಹೆಚ್ಚು ಉಂಟಾಯಿತು.

 

ತುಳಸೀ.K.ಮೂರ್ತಿ
ಬೆಂಗಳೂರು

Go to top