" ಒಂದು ತಿಂಗಳ ಧ್ಯಾನದಲ್ಲಿ ಇಷ್ಟು ಶಕ್ತಿ ಇದೆ ಎಂಬ ಸತ್ಯ ತಿಳಿಯಿತು " 

 

 

ನಾನು ಏಪ್ರಿಲ್ 2004 ರಿಂದ ಧ್ಯಾನ ಮಾಡುತ್ತಿದ್ದೇನೆ. ನನಗೆ ಯಾರಾದರೂ ಏನಾದರೂ ಅಂದರೆ ತಕ್ಷಣ ತಡೆದುಕೊಳ್ಳಲಾರದಷ್ಟು ಸಿಟ್ಟು, ಕೋಪ ಜೊತೆಗೆ ತಲೆನೋವು ಬರುತ್ತಿತ್ತು. ನನಗೆ ಗೊತ್ತಿಲ್ಲದ ರೀತಿಯೆ ಸಕ್ಕರೆ ಕಾಯಿಲೆ ಇದೆ ಎಂದು ಡಾಕ್ಟರ್ ತಿಳಿಸಿದಾಗ ಇನ್ನು ನಾನು ಜೀವನ ಪೂರ್ತಿ ಮಾತ್ರೆಯನ್ನು ಸೇವಿಸಿಯೆ ಬದುಕಬೇಕಲ್ಲ ಎಂಬ ಮಾನಸಿಕ ಚಿಂತೆ ಕಾಡಲು ಶುರುವಾಯಿತು. ಅದೇ ಹೊತ್ತಿಗೆ ಶ್ರೀಯುತ ಕೊಟ್ರಯ್ಯನವರು ಕುವೆಂಪುರಂಗ ಮಂದಿರದಲ್ಲಿ ಏಪ್ರಿಲ್ 4 ರಂದು ‘ಕರ್ನಾಟಕ ಧ್ಯಾನ ಯಜ್ಞ’ದಲ್ಲಿ ಪಾಲ್ಗೊಳ್ಳಲು ತಿಳಿಸಿದರು. ಧ್ಯಾನ ಯಜ್ಞ ಎಂದರೆ ಏನು ? ಎಂದು ಅರಿಯದ ನಾವು ಅದರಲ್ಲಿ ಪಾಲ್ಗೊಂಡಾಗ ಗುರುಗಳಾದ ಪತ್ರೀಜಿ, ಶ್ರೀಮತಿ ಮನೋರಮಾ, ಶ್ರೀಯುತ ಕೃಷ್ಣಮೂರ್ತಿಯವರು ನಡೆಸಿದ ಆನಾಪಾನಸತಿ ಧ್ಯಾನ ಶಿಬಿರದಿಂದ ಪ್ರಭಾವಿತಳಾಗಿ ದಿನಾಲೂ ಒಂದು ಗಂಟೆಕಾಲ ಧ್ಯಾನ ಮಾಡಲು ಶುರುಮಾಡಿದೆ.

 

2004 ಏಪ್ರಿಲ್ ರಂದು ಡಾಕ್ಟರನ್ನು ಕಂಡಾಗ ನಿನಗೆ ಸಕ್ಕರೆ ಕಾಯಿಲೆನೇ ಇಲ್ಲಮ್ಮ ಮಾತ್ರೆಯೆಲ್ಲವನ್ನು ನಿಲ್ಲಿಸಿರಿ ಅಂದಾಗ ಆದ ಸಂತೋಷ ಅಷ್ಟಿಷ್ಟಲ್ಲ ಮತ್ತು ಮನದಲ್ಲೇ ಆನಾಪಾನಸತಿ ಧ್ಯಾನವನ್ನು ಸ್ಮರಿಸಿದೆ. ಒಂದು ತಿಂಗಳ ಧ್ಯಾನದಲ್ಲಿ ಇಷ್ಟು ಶಕ್ತಿ ಇದೆ ಎಂಬ ಸತ್ಯ ತಿಳಿದು ಮೇ 4 ರ ಬುದ್ಧ ಪೂರ್ಣಿಮೆಯಂದು ಮತ್ತು ‘ಗುರು ಕಣ್ಣಿನ ಆಸ್ಪತ್ರೆ’ಯಲ್ಲಿ ಮೇ 17 ರಿಂದ 22 ರವರೆಗೆ ನಡೆದ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ, ಮಾನಸಿಕ ನೆಮ್ಮದಿ, ಸಂತೋಷವನ್ನು ಪಡೆದಿದ್ದೇನೆ. ಇದಕ್ಕೆ ಕಾರಣಕರ್ತರಾದ ಶ್ರೀಯುತ ಕೊಟ್ರಯ್ಯಸ್ವಾಮಿ, ಡಾ|| ಕೃಷ್ಣಮೂರ್ತಿ ಮತ್ತು ಜಿ.ಮನೋರಮಾರವರಿಗೂ ನನ್ನ ಅನಂತವಾದ ಧನ್ಯವಾದವನ್ನು ಅರ್ಪಿಸುತ್ತಾ ಎಲ್ಲರೂ ಕೂಡ ನನ್ನಂತೆ ‘ಆನಾಪಾನಸತಿ ಧ್ಯಾನ’ದ ಸದುಪಯೋಗವನ್ನು ಪಡೆಯಿರಿ.

 

S.B. ಉಮ
ಶಿವಮೊಗ್ಗ
ಫೋನ್ : 22854(08182) 

Go to top