" ವಿಶಾಖಪಟ್ಟಣದಲ್ಲಿ ನಡೆದ ಧ್ಯಾನಮಹಾಚಕ್ರ ದೇವಲೋಕದಂತೆ ಕಂಡುಬಂತು "

 

ನಾನು ಧ್ಯಾನ ಶುರುಮಾಡಿ 5ವರ್ಷ ಆಯಿತು. ಧ್ಯಾನದಿಂದ ನನ್ನಲ್ಲಿ ತುಂಬಾ ಬದಲಾವಣೆ ಆಗಿದೆ. ಧ್ಯಾನದ ಶಕ್ತಿಯಿಂದ ನನಗೆ ಮುಂದಾಗುವ ಅನುಭವಗಳು ಗೊತ್ತಾಗುತ್ತವೆ. ವಿಶಾಖಪಟ್ಟಣದಲ್ಲಿ ನಡೆದ ಧ್ಯಾನ ಮಹಾಚಕ್ರ ಅದ್ಭುತ, ದೇವಲೋಕದಂತೆ ಕಂಡುಬಂತು. ಪ್ರತಿದಿನ ಬೆಳಗ್ಗೆ ಪತ್ರೀಜಿಯವರ ಸಂದೇಶಗಳು ತುಂಬಾ ಅದ್ಭುತ. ಆ ಬೋಧನೆಗಳನ್ನು ಕೇಳುವುದು ನಮ್ಮ ಅದೃಷ್ಟ. ಪತ್ರೀಜಿಯವರು ನನಗೆ ಸಾಕ್ಷಾತ್ ಬುದ್ಧನ ತರಹ ಕಾಣಿಸಿದರು. ಪುನಃ ಧ್ಯಾನಮಹಾಚಕ್ರ ಯಾವಾಗ ನಡೆಯುತ್ತೆ ಎಂದು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ಈ ಜನ್ಮದಲ್ಲಿ ಪತ್ರೀಜಿಯವರ ಸನ್ನಿಧಿಯಲ್ಲಿ ಕೂತು ಧ್ಯಾನ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ನನ್ನ ಆತ್ಮಾಭಿವಂದನೆಗಳು.

 

ವರಲಕ್ಷಿ ತುರಾಯಿ
ದಾವಣಗೆರೆ

Go to top