" ನಾನು ವಿಮುಕ್ತನಾಗಿದ್ದೇನೆ "

 

 

ನನ್ನ ಹೆಸರು ವರಲಕ್ಷ್ಮಿ. ನಮ್ಮ ಊರು ವಿಜಯವಾಡ. ವೈಜಾಗ್‌ನಲ್ಲಿ ನಡೆದ ಧ್ಯಾನ ಮಹಾಚಕ್ರದಲ್ಲಿ 8ನೆಯ ದಿನ ಮುಂಜಾನೆ ನಡೆದ ಧ್ಯಾನದಲ್ಲಿ ಬಂದ ಈ ಅನುಭವವನ್ನು ಪಿರಮಿಡ್ ಮಾಸ್ಟರ‍್ಸ್ ಜೊತೆ ಹಂಚಿಕೊಳ್ಳಬೇಕೆಂದು ಬಯಸುತ್ತಾ ಬರೆಯುತ್ತಿದ್ದೇನೆ. ಪತ್ರೀಜಿಯವರ ಕೊಳಲನಾದದಲ್ಲಿ ಧ್ಯಾನಿಗಳೆಲ್ಲಾ ಮೈಮರೆತು ಧ್ಯಾನದಲ್ಲಿ ಮುಳುಗಿದ್ದಾರೆ. ಸಮುದ್ರದ ಅಲೆಗಳನ್ನೇ ವಸ್ತ್ರವಾಗಿಸಿಕೊಂಡು ಗಂಭೀರವಾಗಿ ಮಾನವನ ರೂಪದಿಂದ ಕಾಂತಿಯಿಂದ ಮಿಂಚುತ್ತಾ ಧ್ಯಾನಿಗಳ ಮೇಲಿಂದ ಅವರನ್ನು ತಾಕದೇ ತುಂಬಾ ಸಂತೋಷದಿಂದ ಸಮುದ್ರನು ವೇದಿಕೆಯ ಮೇಲಿರುವ ಪತ್ರೀಜಿಯವರ ಹತ್ತಿರಕ್ಕೆ ತುಂಬಾ ಆರ್ತತೆಯಿಂದ ಬಂದು ಆಲಿಂಗಿಸಿಕೊಂಡಿದ್ದನು. 

 

"ಇದೇನಿದು? ಜನದ ನಡುವೆ ನೀನು ಬಂದಿದ್ದೀಯ ಹೀಗೆ ಬಂದರೇ ಯಜ್ಞಪ್ರಾಂಗಣ ತೊಂದರೆ ಆಗುವುದಿಲ್ಲವೇ? ಜನ ನಿಮ್ಮನ್ನು (ಮಳೆಯನ್ನೂ, ಚಳಿಯನ್ನೂ) ತಡೆದುಕೊಳ್ಳಬೇಡವೇ ಎಂದು ಕೇಳಿದೆ. ಅದಕ್ಕೆ ಸಮುದ್ರನು ಭೂಮಂಡಲದಲ್ಲಿ ಯಾರಿಗೂ ತಿಳಿಯದ ನೆನಪಿಲ್ಲದ ವಿಷಯವನ್ನು ಹೇಳಿದ್ದಾರೆ. 

 

ಇದುವರೆಗೂ ನಾನು ಕತ್ತಲೆ ಲೋಕ ವಾಸಿಗಳ ಆಧೀನದಲ್ಲಿದ್ದುಕೊಂಡು ಯಾವುದಕ್ಕೂ ಉಪಯೋಗವಿಲ್ಲದವನಾಗಿ ಉಳಿದು ಬಿಟ್ಟಿದ್ದೇನೆ. ಸೀತಾದೇವಿ ಶಕ್ತಿಯನ್ನು ರಾವಣಾಸುರನು ಏನು ಉಪಯೋಗಿಸಿಕೊಳ್ಳಬಲ್ಲವನಾಗಿದ್ದನು, ವಿನಾಶಕ್ಕೆ ವಿನಹ. ಅದೇ ಸೀತೆ ರಾಮನ ಹತ್ತಿರ ಇದ್ದರೆ ಲೋಕ ಕಲ್ಯಾಣವಾಯಿತು. ಅದೇ ಸೀತಾರಾಮ ಕಲ್ಯಾಣ.

 

ಇದೇ ಸಮುದ್ರನು ಪತ್ರೀಜಿಯವರ ಆಧೀನದಲ್ಲಿದ್ದರೇನೆ ಪ್ರಪಂಚ ವಿನಾಶ ತಪ್ಪುತ್ತದೆ. 2012 ಗೆ ಜಗತ್ ಕಲ್ಯಾಣ ನಡೆಯುತ್ತದೆ. ಈ ಧ್ಯಾನ ಮಹಾಚಕ್ರದಲ್ಲಿ ನಾನು ಆ ದುಷ್ಟರ ಕೈ ಇಂದ ವಿಮುಕ್ತನಾಗಿದ್ದೇನೆ. 

 

ಆ ದಿನ ನನಗೆ ಮಾತುಕೊಟ್ಟಿರುವೆ. ನಾನು ಬಂದರೆ ತಡೆದುಕೊಳ್ಳತ್ತೇನೆಂದು ಪತ್ರೀಜಿಯವರ ಜೊತೆ ಪಿರಮಿಡ್ ಮಾಸ್ಟರ‍್ಸ್ ಎಲ್ಲರೂ ನನ್ನ ಸಹಿಸಿಕೊಂಡು ನಾನು ನೀಡಿರುವ ತೊಂದರೆಯನ್ನು ಸಹಿಸಿಕೊಂಡು ಯಜ್ಞವನ್ನು ಪೂರ್ಣಗೊಳಿಸಿರುವಿರಿ. 

 

ನಾನು ಈ ಯಜ್ಞದಲ್ಲಿ ವಿಮುಕ್ತನಾಗಿದ್ದೇನೆ. ಆದ್ದರಿಂದ, ಎಲ್ಲರಿಗೂ ಕೃತಜ್ಞತೆಗಳು" ಎಂದು ಹೇಳಿದರು. ಈ ಅದ್ಭುತವಾದ ದೃಶ್ಯವನ್ನು ನೋಡಿದ ನನ್ನ ಜನ್ಮ ಧನ್ಯವಾಯಿತು. 

 

 

K.ವರಲಕ್ಷ್ಮಿ
ವಿಜಯವಾಡ

Go to top