" ಪಿರಮಿಡ್ ಧ್ಯಾನದ ಮಲ್ಲಣ್ಣ ಗುಳೇದ ಕುಟುಂಬದ ಅನುಭವ "

 

 

ನಾನು ಶ್ರೀಮತಿ ವಿಜಯಲಕ್ಷಿ ಗುಳೇದ, ಗುಲಬರ್ಗಾ. ಕಳೆದ 8 ತಿಂಗಳಗಳಿಂದ ಧ್ಯಾನದಲ್ಲಿ ಇದ್ದೇವೆ. ದಿನಾಲು ಮುಂಜಾನೆ ಹಾಗೂ ಸಾಯಂಕಾಲ ಎಲ್ಲರೂ ಕೂಡಿಕೊಂಡು ಧ್ಯಾನ ಮಾಡುತ್ತಿದ್ದೇವೆ. ನಮಗೆ ಈ ಧ್ಯಾನ ಶ್ರೀ ವಿಜಯಕುಮಾರ್ ಮತ್ತು ಅವರ ಶ್ರೀಮತಿ ಭುವನೇಶ್ವರಿಯವರಿಂದ ಸಿಕ್ಕ ಅತ್ಯದ್ಭುತ ಕೊಡುಗೆ. ಒಂದು ದಿವಸ ನಮ್ಮ ತಂದೆಯವರು ವಾಯು ವಿಹಾರಕ್ಕೆಂದು ಹೋದಾಗ, ಗುಲಬರ್ಗಾದ ಶಕ್ತಿನಗರದ ಬಡಾವಣೆಯಲ್ಲಿ ಒಂದು ಮನೆಯ ಎದುರುಗಡೆ ಪಿರಮಿಡ್ ಧ್ಯಾನದ ಬಗ್ಗೆ ಫಲಕವನ್ನು ನೋಡಿ, ತಕ್ಷಣ ಕುತೂಹಲದಿಂದ ಒಂದು ದಿವಸ ಶ್ರೀ ಚಿಮಕೋಡ್‌ರವರ ಮನೆಗೆ ಹೋಗಿ ವಿಚಾರಿಸಿ ಧ್ಯಾನಕ್ಕೆ ಕುಳಿತುಕೊಂಡರು, ಅಂದು, ನಮ್ಮ ತಂದೆಯವರಿಗೆ ಸಂತೋಷ ಹಾಗೂ ಆನಂದದ ಅನುಭವವಾಗಿ, ಮಾರನೆಯ ದಿವಸ ತಮ್ಮ ಜೊತೆಗೆ ನಮ್ಮ ತಾಯಿಯನ್ನು ಕೂಡ ಕರೆದುಕೊಂಡು ಹೋಗಿ ಧ್ಯಾನ ಮಾಡಿದ್ದಾರೆ.

 

ನಮ್ಮ ತಾಯಿಯವರಿಗೆ ಧ್ಯಾನ ಮಾಡುವಾಗ ಮೊದಲನೇ ದಿವಸ ಶ್ರೀ ಗಣೇಶನನ್ನು ಕಂಡರು. ಒಂದು ದಿವಸ ಕೂಡ ತಪ್ಪಿಸದೆ, ನನ್ನ ತಂದೆ ತಾಯಿಯವರು ಮಂಡಲ ಧ್ಯಾನದಲ್ಲಿ ಭಾಗವಹಿಸಿದರು. ತರುವಾಯ, ನಮ್ಮ ಮನೆಯಲ್ಲಿ ಸಾಪ್ತಾಹಿಕ ಧ್ಯಾನದ ಕಾರ್ಯಕ್ರಮವನ್ನು ಹಾಕಿಕೊಂಡೆವು. ಧ್ಯಾನಕ್ಕೆ ಬರುವುದಕ್ಕಿಂತ ಮುಂಚೆ, ನಮ್ಮ ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ಇರಲಿಲ್ಲ. ಹಲವಾರು ವರ್ಷಗಳಿಂದ ನಮ್ಮ ಅಣ್ಣನವರು ತಂದೆಯ ಸಂಗಡ ಮಾತಾಡುತ್ತಿರಲಿಲ್ಲ. ಕಾರಣ ಮನೆಯಲ್ಲಿ ಅಶಾಂತಿ ಇತ್ತು.

 

ಈ ಧ್ಯಾನದಿಂದ, ನನ್ನ ಅಣ್ಣನವರು ತಂದೆಯವರ ಸಂಗಡ ಮಾತಾಡಲಿಕ್ಕೆ ಪ್ರಾರಂಭಿಸಿ, ಮನೆಯಲ್ಲಿ ಒಂದು ರೀತಿ ಸೌಹಾರ್ದತೆ ಹೆಚ್ಚಿತು. ತಂದೆ, ಮಗ ಗೆಳೆಯರಂತೆ ಆದರು. ಪುನಃ ಕುಟುಂಬದಲ್ಲಿ ಸಂತೋಷ ಹಾಗೂ ಪ್ರೀತಿ ಹೆಚ್ಚಾಗಿದೆ. ನನಗೆ ಒಂದು ದಿವಸ ಧ್ಯಾನದಲ್ಲಿ ಕನಕದಾಸರ ಕಂಡ ಅನುಭವಾಗಿದೆ ಮತ್ತು ಅಂದಿನಿಂದ ನನ್ನಗೆ ಶಕ್ತಿ, ಉತ್ಸಾಹ ಹೆಚ್ಚಾಗಿದೆ ಎಂದೆನಿಸುತ್ತಾ ಇದೆ. ಇದೇ ಸಮಯದಲ್ಲಿ ನನ್ನ ಅತ್ತಿಗೆ ಎರಡು ತಿಂಗಳ ಗರ್ಭಣಿ. ಅವರು ದಿನಾಲು ಹೆರಿಗೆ ಆಗುವವರೆಗೆ ತಪ್ಪದೆ ದಿನಾಲು ಧ್ಯಾನ ಮಾಡುತ್ತಾ ಇದ್ದರು. ಪರಿಣಾಯವಾಗಿ ನನ್ನ ಅತ್ತಿಗೆಗೆ ಬಹಳ ಸುಲಭವಾಗಿ ಹೆರಿಗೆಯಾಗಿ ಸುಂದರ ಹಾಗೂ ಆರೋಗ್ಯವಂತ ಗಂಡು ಮಗುವನ್ನು ಈ ಲೋಕಕ್ಕೆ ಕೊಟ್ಟಿದ್ದಾರೆ.

 

ಒಟ್ಟಾರೆ, ಈ ಧ್ಯಾನದದಿಂದ ನಮ್ಮ ಮನೆಯಲ್ಲಿ ಸುಖ, ಶಾಂತಿ, ಹಾಗೂ ಆನಂದವು ಸದಾ ತುಂಬಿಕೊಂಡಿದೆ. ನಮ್ಮ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಂತೋಷಕ್ಕೆ ಕಾರಕರಾದ ಶ್ರೀ ವಿಜಯಕುಮಾರ್ ಚಿಮ್ಮಕೋಡ್ ಹಾಗೂ ಅವರ ಪತ್ನಿಯವರಿಗೆ ನಾವೆಲ್ಲರೂ ಸದಾ ಚಿರಋಣಿಗಳಾಗಿದ್ದೇವೆ.

 

ಶ್ರೀಮತಿ ವಿಜಯಲಕ್ಷಿ ಗುಳೇದ
ಗುಲಬರ್ಗಾ

Go to top