" ವರ್ತಮಾನದಲ್ಲಿ ಆನಂದವಾಗಿ ಜೀವಿಸುತ್ತಿದ್ದೇನೆ "

 

 

ನನ್ನ ಹೆಸರು ವಿಮಲ. M.R. ನನಗೆ ಈಗ 52 ವರ್ಷ. ದಿಕ್ಕು ತೋಚದ ಸ್ಥಿತಿಯಲ್ಲಿ, ಕುಗ್ಗಿಹೋದ ಸಮಯದಲ್ಲಿ, ಯಾರದೂ ಸಹಾಯವಿರಲಿಲ್ಲ. ಆಗ ಒಂದು ದಿನ ಶಿರಡಿ ಸಾಯಿಬಾಬಾ ಎದುರಿನಲ್ಲಿ ಅತ್ತು, ನನ್ನ ದುಃಖವನ್ನು ಹೇಳಿಕೊಂಡು, ಆಧ್ಯಾತ್ಮಿಕವಾಗಿ ಉನ್ನತ ಸ್ಥಿತಿಗೆ ಸೇರಬೇಕು ಎಂದು ತಪಿಸಿದೆ.

 

ಇದೆಲ್ಲವೂ ನಡೆದ ಒಂದು ವಾರದೊಳಗೆ, ಪರಿಚಿತರೊಬ್ಬರ ಮೂಲಕ ಶ್ರೀಮತಿ ದಿವ್ಯಶ್ರೀರವರ (ಬೆಂಗಳೂರು) ದೂರವಾಣಿ ಸಂಖ್ಯೆ ದೊರಕಿತು. ನನ್ನ ಎಲ್ಲಾ ಸಮಸ್ಯೆಗಳನ್ನು ಅವರಿಗೆ ಹೇಳಿಕೊಂಡಾಗ, ಅವರು ನನಗೆ ಆನಾಪಾನಸತಿ ಧ್ಯಾನದ ಪರಿಚಯ ಮಾಡಿಸಿಕೊಟ್ಟರು.

 

ನಾನು ಆನಾಪಾನಸತಿ ಧ್ಯಾನವನ್ನು 3 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಈ ಧ್ಯಾನದಿಂದ ಶಾಂತಿ, ನೆಮ್ಮದಿ, ಆನಂದ, ವಿಶ್ವಾಸ, ಧೈರ್ಯ ದೊರಕಿದೆ. ಖಿನ್ನತೆಯಿಂದ ಹೊರಬಂದೆ.

 

ಧ್ಯಾನದಲ್ಲಿ ನನಗೆ ಅನೇಕ ಆಸ್ಟ್ರಲ್ ಮಾಸ್ಟರ್‌ಗಳ ಜೊತೆ ಸಂಪರ್ಕ ಸಿಕ್ಕಿತು. ನನ್ನ ಪ್ರಶ್ನೆಗಳಿಗೆ ಅವರಿಂದ ಉತ್ತರ ಸಿಗುತ್ತಿದೆ. ನನಗೆ ಸಂದೇಹಗಳು ಬಂದಾಗ, ಧ್ಯಾನದಲ್ಲಿ ಪತ್ರೀಸರ್ ಬಂದು ಸಂದೇಶಗಳನ್ನು ಕೊಡುತ್ತಿರುತ್ತಾರೆ.

 

ನನಗೆ ಗರ್ಭಕೋಶದ ತೊಂದರೆಯಿತ್ತು. ಧ್ಯಾನದಲ್ಲಿ ಪತ್ರೀಸರ್ ಅದನ್ನು ನಿವಾರಣೆ ಮಾಡಿದರು. ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುತ್ತಿದ್ದೇನೆ. ಕೋಪ ಕಡಿಮೆಯಾಗಿದೆ. ಪ್ರತೀ ವಿಷಯಕ್ಕೂ ಕೋಪ ಬರುತ್ತಿತ್ತು ಮತ್ತು ಎಲ್ಲವನ್ನೂ ನನ್ನೊಳಗೆ ಅಣಗಿಸಿಕೊಳ್ಳುತ್ತಿದ್ದೆ. ಆದರೆ, ಈಗ ಎಲ್ಲವನ್ನು ಸುಲಭವಾಗಿ ಸ್ವೀಕರಿಸುತ್ತಿದ್ದೇನೆ ಮತ್ತು ಎಲ್ಲರ ಜೊತೆ ಸ್ನೇಹದಿಂದ ಇದ್ದೇನೆ.

 

ಆತ್ಮಸ್ಥೈರ್ಯ, ಆತ್ಮವಿಶ್ವಾಸ ಎರಡೂ ಬೆಳೆದಿದೆ. ಈಗ ಜೀವನ ಸರಳವಾಗಿ ಸುಂದರವಾಗಿದೆ. ಪತ್ರಿಸರ್‌ರವರು ಹೇಳಿರುವ " you create your own reality ಎಂಬ ಸತ್ಯವು ನನ್ನ ಜೀವನದಲ್ಲಿ ತುಂಬಾ ಚೆನ್ನಾಗಿ ಮನದಟ್ಟಾಗಿದೆ.

 

ನಾನು ಎಲ್ಲಾ " Senior masters class " ಗಳಿಗೂ ಹೋಗುತ್ತೇನೆ. ಎಲ್ಲರಿಂದ ಜ್ಞಾನವನ್ನು ಪಡೆಯುತ್ತಿದ್ದೇನೆ, ಈ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯುತ್ತಾ ಹೋಗುತ್ತಿದ್ದೇನೆ. ಧ್ಯಾನ ಪ್ರಚಾರವನ್ನು ಮಾಡುತ್ತಿದ್ದೇನೆ. 

 

ಹಿಂದೆ ನನಗೆ ವ್ಯಾಮೋಹ ತುಂಬಾ ಇತ್ತು ಮತ್ತು ಬೇರೊಬ್ಬರ ಮೇಲೆ ಅವಲಂಬಿಯಾಗಿದ್ದೆ.  ಆದರೆ, ಈಗ ಬಿಡುಗಡೆಗೊಂಡು, ಸ್ವತಂತ್ರಗಳಾಗಿದ್ದೇನೆ. ನನ್ನ ಎಲ್ಲಾ ಕೆಲಸಗಳನ್ನು ನಾನೇ ಸುಲಭವಾಗಿ ಮಾಡಿಕೊಳ್ಳುತ್ತಿದ್ದೇನೆ. ನನಗೆ ಸೈಕಲ್ ಹಿಡಿಯಲು ಕೂಡಾ ಬರುತ್ತಿರಲಿಲ್ಲ. ಈಗ ಧೈರ್ಯದಿಂದ ದ್ವಿಚಕ್ರ ವಾಹನವನ್ನು ಸುಲಭವಾಗಿ ಓಡಿಸುತ್ತಿದ್ದೇನೆ. ಭವಿಷ್ಯತ್ತಿನ ಬಗ್ಗೆ ತುಂಬಾ ಭಯವಿತ್ತು. ಆದರೆ, ಈಗ ವರ್ತಮಾನದಲ್ಲಿ ಆನಂದವಾಗಿ ಜೀವಿಸುತ್ತಿದ್ದೇನೆ. 

 

ನನಗೆ ಈ ಧ್ಯಾನ ಪರಿಚಯ ಮಾಡಿಕೊಟ್ಟ ಸರಸ್ವತಕ್ಕ ಮತ್ತು ದಿವ್ಯಶ್ರೀರವರಿಗೆ ನನ್ನ ವಂದನೆಗಳು. ಮತ್ತು ಈ ಆನಾಪಾನಸತಿ ಧ್ಯಾನವನ್ನು ಎಲ್ಲರಿಗೂ ಪರಿಚಯಿಸಿದ ಬ್ರಹ್ಮರ್ಷಿ ಪತ್ರೀಜಿರವರಿಗೆ ನನ್ನ ಹೃದಯಪೂರ್ವಕ ಕೋಟಿ ಕೋಟಿ ವಂದನೆಗಳು.

 

ವಿಮಲ.M.R
ಚಿಂತಾಮಣಿ

Go to top