" ಹೆಣ್ಣೊಂದು ಧ್ಯಾನ ಕಲಿತರೆ ಸುಖ ಕುಟುಂಬ "

 

ಧ್ಯಾನದಲ್ಲಿ ಅಡಗಿರುವ ಅದ್ಭುತವಾದ ಶಕ್ತಿಯ ಪರಿಚಯವನ್ನು ನಮಗೆಲ್ಲ ತಿಳಿಸಿದ ಬ್ರಹ್ಮರ್ಷಿ ಪತ್ರೀಜಿಯವರಿಗೆ, ದಾವಣಗೆರೆ ನಗರಕ್ಕೆ ಧ್ಯಾನವನ್ನು ಪರಿಚಯಿಸಿದ ಶ್ರೀ ಮಾಗನೂರು ಸೋಮಶೇಖರ ಗೌಡರು ಮತ್ತು ಅವರ ಕುಟುಂಬ ವರ್ಗಕ್ಕೂ, ಧ್ಯಾನವನ್ನು ಸವಿವರವಾಗಿ ಕಲಿಸಿರುವ ಶ್ರೀಯುತ ಪ್ರಕಾಶ್‌ರವರಿಗೂ ಧನ್ಯವಾದಗಳು.

 

ನಮ್ಮ ಕಾಲೇಜಿನಲ್ಲಿ ಧ್ಯಾನದ ಬಗ್ಗೆ ಸಿಬ್ಬಂದಿ ವರ್ಗದ ಅನಿಸಿಕೆಗಳನ್ನು ಕೇಳಿ ಆಶ್ಚರ್ಯವಾಯಿತು. ನಾನೂ ಸಹ ನಮ್ಮೂರಿನಲ್ಲಿ ನಡೆದ ಉಚಿತ ಧ್ಯಾನ ಶಿಬಿರದಲ್ಲಿ ಭಾಗವಹಿಸಿದೆ. ಧ್ಯಾನದ ಅನುಭವಗಳನ್ನು ಎಷ್ಟು ಹೇಳಿದರೂ ಸಾಲದು, ಧ್ಯಾನ ಮಾಡಿದರೆ ಮಾತ್ರ ಗೊತ್ತಾಗುತ್ತದೆ. ಧ್ಯಾನದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಸಮಸ್ತ ಸಮಸ್ಯೆಗಳಿಗೆ ಧ್ಯಾನವು ರಾಮಬಾಣವಾಗಿದೆ.

 

ಧ್ಯಾನದಿಂದ ನನಗಾದ ಅನುಭವಗಳೆಂದರೆ ಪಾದಗಳ ನೋವು, ಆಪರೇಷನ್ ಆದ ಜಾಗದಲ್ಲಿ ಚುಚ್ಚಿದ ರೀತಿಯ ನೋವು, ಗ್ಯಾಸ್ಟ್ರಬಲ್ ಇದ್ದವು. ಈ ಧ್ಯಾನ ಆರಂಭಿಸಿದಂದಿನಿಂದ ಸಂಪೂರ್ಣವಾಗಿ ಗುಣಮುಖಗಳಾಗಿದ್ದೇನೆ. ಧ್ಯಾನ ಜಗತ್ತಿಗೆ ಬಂದ ಮೇಲೆ ಶಾಂತಿ, ಸಂತೋಷ, ಮೌನ ಎಂದರೇನೆಂದು ತಿಳಿದುಕೊಂಡಿದ್ದೇನೆ. ಕಾಲೇಜಿನಲ್ಲಿ ಕೆಲಸ ಮಾಡುವಾಗ ತುಂಬಾ ಸುಸ್ತು, ಆಸಕ್ತಿಯಿರುತ್ತಿರಲಿಲ್ಲ. ಈಗ ಎಷ್ಟೇ ಕೆಲಸಮಾಡಿದರು ಆಸಕ್ತಿ, ಶ್ರದ್ಧೆ ಹೆಚ್ಚಾಗಿದೆ. ಸಿಟ್ಟು ಕಡಿಮೆಯಾಗಿದೆ, ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಕಡಿಮೆಯಾಗಿದೆ. ಧ್ಯಾನ ಮಾಡುವುದರಿಂದ ಮಾನಸಿಕವಾಗಿ, ಭೌತಿಕವಾಗಿ ಆರೋಗ್ಯವಾಗಿದ್ದೇನೆ. ಧ್ಯಾನಕ್ಕೆ ಕುಳಿತಾಗ ಎಲ್ಲೋ ಸುತ್ತಾಡಿದ ಅನುಭವ, ಸನ್ಯಾಸಿ ರೂಪದ ವ್ಯಕ್ತಿ ಒಬ್ಬರು ಬಂದು ನಮಗೆ ಆಶೀರ್ವದಿಸಿದ ಅನುಭವ, ಕೊಳಲುನೂದುವ ಪುಟ್ಟಗೋಪಾಲ ಬಂದು ಹೋದಂತಹ ಅನುಭವ ನನಗಾಗಿದೆ. ಸಹನೆ, ತಾಳ್ಮೆ ಕಳೆದು ಕೊಂಡಿರುವ ನಮಗೆ ಧ್ಯಾನದಿಂದ ಸಾಧನೆಯ ಮಾರ್ಗದಲ್ಲಿ ನಡೆಯಬೇಕಾಗಿದೆ. ಹೆಚ್ಚು ಧ್ಯಾನ ಮಾಡೋಣ, ಜ್ಞಾನವಂತರಾಗೋಣ ಮುಕ್ತಿ ಪಡೆಯೋಣ.

 

ವಿನೋದ
ಬಾಪೂಜಿ ಪಾಲಿಟೆಕ್ನಿಕ್ ಕಾಲೇಜ್ ಸಿಬ್ಬಂದಿ
ಆನೆಕೊಂಡ

Go to top