" ನನಗೀಗ ತಟಸ್ಥ ಭಾವನೆ ಉಂಟಾಗಿದೆ "

 

ನನ್ನ ಹೆಸರು ವಿನುತ ಸತ್ಯನಾರಾಯಣ. ನಾನು ಈ ಧ್ಯಾನಕ್ಕೆ ಬಂದು 13 ತಿಂಗಳು ಕಳೆದಿವೆ. ಈ ಧ್ಯಾನಕ್ಕೆ ಬರುವ ಮುಂಚೆ ನಮ್ಮೂರಿನ ತಾಯಿ ವಾಸವಾಂಬೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಶ್ರೀವಾಸವೀ ಮಹಿಳಾ ಸಂಘದ ಮೂಲಕ ಸೇವೆ ಮಾಡುತ್ತಿದ್ದೆ. ಅವರು ನನಗೆ ಯಾವುದಾದರು ಆಧ್ಯಾತ್ಮಿಕ ದಾರಿ ಬೇಕೆಂದು ಯಾವಾಗಲು ತವಕಿಸುತ್ತಿದ್ದೆ. ಕಾರಣ ಯಾವ ದಾರಿಯಲ್ಲಿ ಹೋಗುವುದು. ಎಲ್ಲಾ ಆಧ್ಯಾತ್ಮಿಕ ವಿಧಾನಗಳ ಅಭ್ಯಾಸ ನನಗೆ ಸುಲಭವಾಗಿ ಕಾಣಿಸುತ್ತಿರಲಿಲ್ಲ. ಆಗ ನನಗೆ ಸಿಕ್ಕಿತು ಸರಳ, ಸುಲಭವಾದ ಈ "ಆನಾಪಾನಸತಿ" ಧ್ಯಾನ ಅಥವ ಪಿರಿಮಿಡ್ ಧ್ಯಾನ. ಯಾವುದೇ ಮಂತ್ರ, ಜಪ ಇಲ್ಲದೆ ಇರುವುದು ನನನ್ನು ತುಂಬಾ ಆಕರ್ಷಿಸಿತು. ಹಿಂದಿನ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಂಡಲ ಧ್ಯಾನದಲ್ಲಿ ಭಾಗವಹಿಸಿದೆ. ಮಂಡಲ ಧ್ಯಾನ ಮುಗಿಯುವುದರೊಳಗೆ ನಮ್ಮ ಕುಟುಂಬದಲ್ಲಿ ಆರ್ಥಿಕ ಬದಲಾವಣೆಯಾಯಿತು. ಇದರಿಂದ, ನನಗೆ ತುಂಬಾ ಸಂತೋಷವಾಯಿತು. ಭೀಮೇಶ್ ರೆಡ್ಡಿಯವರ "ಸುಮಧುರವೀ ಜೀವನ" ಶಿಬಿರದಲ್ಲಿ ಪಾಲ್ಗೊಂಡ ಮೇಲಂತೂ ಧ್ಯಾನದ ಮಹತ್ವ ವೈಜ್ಞಾನಿಕವಾಗಿಯೂ ಸತ್ಯವೆಂದು ತಿಳಿಸಿಕೊಟ್ಟಾಗ, ಧ್ಯಾನ ಮಾಡಲು ಮತ್ತಷ್ಟು ಒಲವು ಮೂಡಿತು. ನನ್ನ ಮನಸ್ಸು ಈಗ ಸ್ಥಿರವಾಗಿ ಯೋಚಿಸುವುದನ್ನು ಆರಂಭಿಸಿದೆ. ನನ್ನ ಜೀವನದಲ್ಲಿ ಯುವುದೇ ಏರುಪೇರು ಬಂದರೂ ತಟಸ್ಥ ಭಾವದಿಂದ ಅನುಭವಿಸುತ್ತಿದ್ದೇನೆ. ಈಗ ನನ್ನ ಕುಟುಂಬ ಧ್ಯಾನ ಕುಟುಂಬವಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ನಾನು ಧ್ಯಾನಕ್ಕೆ ಬಂದನಂತರ, ನನ್ನ ಕುಟುಂಬ ಚಳ್ಳಕೆರೆಯಿಂದ ಮೈಸೂರಿಗೆ ವರ್ಗವಾಯಿತು. ಊರು ಬದಲಾದರೂ ನನ್ನಲ್ಲಿ ತಟಸ್ಥ ಭಾವನೆ ಬಂದಿರುವುದರಿಂದ ಸಮವಾಗಿದ್ದೇನೆ. ಈ ಧ್ಯಾನ ಕಾರ್ಯಕ್ರಮಗಳಲ್ಲಿ group meditation ನನಗೆ ತುಂಬಾ ಪ್ರಿಯವಾದದ್ದು. ಧ್ಯಾನದಲ್ಲಿ ಮುಂದೆ ಧ್ಯಾನದ ಅನುಭವ ಹೆಚ್ಚು ಆಗುತ್ತದೆಂದು ಭರವಸೆ ಇದೆ ಎಂದು ಹೇಳುತ್ತಾ, ಈ ಧ್ಯಾನವನ್ನು ಇಷ್ಟು ಸುಲಭವಾಗಿ ಪರಿಚಯಿಸಿರುವ ಶ್ರೀ ಪತ್ರೀಜಿಯವರಿಗೆ ವಂದನೆಗಳನ್ನು ಅರ್ಪಿಸುತ್ತಿದ್ದೇವೆ.

 

ವಿನುತ ಸತ್ಯನಾರಾಯಣ
ಮೈಸೂರು

Go to top