" ನನ್ನ ಆತ್ಮಕ್ಕೆ ಆನಂದವೋ ಆನಂದ "

 

 

ನನ್ನ ಹೆಸರು ಕೆ.ಸತ್ಯನಾರಾಯಣ. ನಾನು ಪ್ರತಿದಿನ ಧ್ಯಾನ ಮಾಡುತ್ತೇನೆ. ಕಡ್ತಾಲ್ ಪಿರಮಿಡ್‌ನಲ್ಲಿ ನಡೆದ 11 ದಿನಗಳ ಧ್ಯಾನ ಮಹಾಚಕ್ರ ಕಾರ್ಯಕ್ರಮದಿಂದ ನನ್ನ ಮತ್ತು ನನ್ನ ಪತ್ನಿಯ ಧ್ಯಾನದ ಪ್ರಯಾಣ ಪ್ರಾರಂಭವಾಯಿತು. ನನ್ನ ಮಿತ್ರರಾದ ಗೋವಿಂದರಾಜು ಅವರ ಸಹಾಯದಿಂದ ಕಡ್ತಾಲ್‌ಗೆ ಬಂದಿದ್ದು. ಅಂದಿನಿಂದ ಇಲ್ಲಿಯವರೆಗೂ ನೂರಾರು ಧ್ಯಾನ ತರಗತಿಗಳನ್ನು ಮಾಡಿದ್ದೇನೆ. ಈಗಲೂ ಮುಂದುವರಿಸುತ್ತಿದ್ದೇನೆ. ನಾನು ಬೇರೆ ಊರಿಗೆ ಪ್ರಯಾಣ ಮಾಡಿದಾಗಲೂ ಆ ಊರಿನಲ್ಲೂ ಧ್ಯಾನ ತರಗತಿಯನ್ನು ಮಾಡುತ್ತೇನೆ. ಒಬ್ಬರು ಸಿಕ್ಕಿದರೂ ಕೂಡಾ ಅವರಿಗೆ ಧ್ಯಾನ ಕಲಿಸುತ್ತೇನೆ. ಮುಖ್ಯವಾಗಿ ಶಾಲೆಗಳಿಗೆ ಭೇಟಿ ಕೊಡುತ್ತೇನೆ. ನನ್ನ ಆತ್ಮ ಮತ್ತು ಜೀವ ಧ್ಯಾನ ಪ್ರಚಾರಕ್ಕೆಂದೇ ಮೀಸಲಾಗಿದೆ. ಕಿಂಗ್ ಚೇಂಬರ್‌ನಲ್ಲಿ ಧ್ಯಾನ ಮಾಡಿದಾಗ ನನ್ನ ಪೂರ್ವಜನ್ಮದ ಹೆಸರು ಮೌಡ್ಗಲ್ಯ ಮುನಿ ಎಂದು ತಿಳಿದುಕೊಂಡೆ. ಧ್ಯಾನ ಪ್ರಚಾರದಲ್ಲಿ ನಾನು ಮುಖ್ಯವಾಗಿ ಎಲ್ಲರಿಗೂ ಆನಾಪಾನಸತಿ ಮಾಡಿಸಿ, ಆರೋಗ್ಯ ವಿದ್ಯೆ ಭವಿಷ್ಯಕ್ಕೆ ಅತಿಮುಖ್ಯ ಎಂದು ವಿವರಿಸುತ್ತೇನೆ. ಒಂದು ಕೋಟಿಗೂ ಜಾಸ್ತಿ ಅನುಭವ ಮತ್ತು ಲಾಭ ನಿಮಗಾಗಿ ಇದೆ ಎಂದು ಧೈರ್ಯವಾಗಿ ಹೇಳುತ್ತೇನೆ. ಧ್ಯಾನ ಪ್ರಚಾರದಿಂದಾಗಿ ನನ್ನ ಆತ್ಮಕ್ಕೂ ಆನಂದ, ಮನಸ್ಸಿಗೆ ಆನಂದವೋ ಆನಂದ. ನನ್ನ ಧ್ಯಾನದ ತರಗತಿಗಳು ಎಲ್ಲರಿಗಾಗಿ ಎಂದು ತಿಳಿಸಲು ಇಷ್ಟಪಡುತ್ತೇನೆ.

 

                                                                                                           

ಕೆ. ಸತ್ಯನಾರಾಯಣ
+91 99017 40661

Go to top