" ಧ್ಯಾನ ಅನುಭವಗಳು "

 

 

 

ನಾನು ಟಿ.ಎಂ.ಶೋಭಾ, ಮೂರು ವರ್ಷಗಳಿಂದ ದಿನ ತಪ್ಪದೇ ಧ್ಯಾನ ಮಾಡುತ್ತಿದ್ದೇನೆ. ಧ್ಯಾನ ಪ್ರಾರಂಭಿಸುವ ಮೊದಲು ನನ್ನ ಆರೋಗ್ಯದಲ್ಲಿ ತುಂಬಾ ಏರುಪೇರಾಗಿತ್ತು, ಮೊದಲು ಧ್ಯಾನವನ್ನು ಕೆಲಸದಂತೆ ಪ್ರಾರಂಭಿಸಿದೆ. ಏನೂ ಅರ್ಥವಾಗುತ್ತಿರಲಿಲ್ಲ. ಆದರೆ, ನಿಧಾನವಾಗಿ ನನ್ನ ಶರೀರ ಶುಭ್ರವಾಗುತ್ತಿರುವುದನ್ನು ಅನುಭವದ ಮೂಲಕ ತಿಳಿಯಿತು. ಹಾಗಾಗಿ, ನಾನು ಧ್ಯಾನದ ಸಮಯವನ್ನು ಹೆಚ್ಚಿಸಿಕೊಳ್ಳುತ್ತಾ ಬಂದೆ ಹಾಗೂ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಾ, ಸೀನಿಯರ್ ಮಾಸ್ಟರ್‌ಗಳ ತರಗತಿಗಳನ್ನು ಕೇಳುವ ಅವಕಾಶ ಪ್ರಾಪ್ತಿಯಾಯಿತು. ಕೆಲವೇ ದಿನಗಳಲ್ಲಿ ನನ್ನಲ್ಲಿ ತುಂಬಾ ಬದಲಾವಣೆಗಳನ್ನು ಕಂಡೆ. ಈಗ ನನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನನ್ನಲ್ಲಿ ಸೃಜನಾತ್ಮಕತೆ, ಧೈರ್ಯ ಹಾಗೂ ವಿನಯ ಬೆಳೆದಿದೆ. ಈಗ ಎಲ್ಲರನ್ನೂ ಪ್ರೀತಿಯ ಭಾವನೆಯಿಂದ ನೋಡುತ್ತಿದ್ದೇನೆ. ಮನಸ್ಸಿನಲ್ಲಿ ಸಮತೋಲನವನ್ನು ಕಂಡುಕೊಳ್ಳುತ್ತಿದ್ದೇನೆ. ಕೋಪ ಬಂದರೆ, ಬೇಗ ಅದರಿಂದ ಹೊರಗೆ ಬರುವವಳಾಗಿದ್ದೇನೆ. ಇದೆಲ್ಲಕ್ಕೂ ಕಾರಣ ನಾನು ಧ್ಯಾನವನ್ನು ಮಾಡುತ್ತಿರುವುದರಿಂದ. ನನ್ನ ಕಾಲುನೋವು ಬಹಳಷ್ಟು ಕಡಿಮೆಯಾಗಿದೆ, ನಾನು 41 ದಿನ ಮಂಡಲ ಧ್ಯಾನವನ್ನು ಮಾಡಿ ಬಹಳ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಆದಕಾರಣ ಎಲ್ಲರಿಗೂ ಹೆಚ್ಚು ಹೆಚ್ಚು ಧ್ಯಾನ ಮಾಡಿರಿ ಎನ್ನುವುದು ನನ್ನ ಸವಿನಯ ಪ್ರಾರ್ಥನೆ. ಇಷ್ಟು ಸುಲಭವಾದ ಧ್ಯಾನವನ್ನು ಪರಿಚಯಿಸಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು.

 

 

ಟಿ.ಎಂ. ಶೋಭಾದೇವಿ

ಹಗರಿಬೊಮ್ಮನಹಳ್ಳಿ

+91 94835 20303

Go to top