" ಧ್ಯಾನದ ಮೂಲಕ ಆರೋಗ್ಯವಾಗಿದ್ದೇನೆ "

 

 

 

ನನ್ನ ಹೆಸರು ಸುಶೀಲ. ನನಗೆ ಮೂವತ್ತಾರು ವರ್ಷ. ನಾನು 18/2/2008ರಲ್ಲಿ ನಾಯ್ಡು ಸರ್ ಮೂಲಕ ಧ್ಯಾನಕ್ಕೆ ಬಂದಿದ್ದು. ಧ್ಯಾನಕ್ಕೆ ಬರುವುದಕ್ಕೆ ಮುಂಚೆ ಪೂಜೆ ಪುನಸ್ಕಾರಗಳು ಬಹಳವಾಗಿ ನಂಬಿ ಮಾಡುತ್ತಿದ್ದೆ. ಆದರೂ ನನಗೆ ಮನಶ್ಶಾಂತಿ ಇರಲಿಲ್ಲ ಮತ್ತು ಅನಾರೋಗ್ಯದಿಂದ ತುಂಬ ಹಿಂಸೆಯಾಗುತ್ತಿತ್ತು. ನಾನು 75 ಕೆ.ಜಿ ತೂಕವಿದ್ದೆ. ಧ್ಯಾನಕ್ಕೆ ಬಂದ ಮೇಲೆ ಒಂದು ದಿನಕ್ಕೆ 10 ರಿಂದ 12 ಗಂಟೆಕಾಲ ಧ್ಯಾನ ಸಾಧನೆ ಮಾಡಿ, ನನ್ನ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಈಗ 75 ರಿಂದ 60 ಕೆ.ಜಿ.ಗೆ ಬಂದಿದ್ದೇನೆ. ಮತ್ತೆ ನನಗೆ ಗರ್ಭಕೋಶ, ಹಾರ್ಟ್, ಶುಗರ್, ಬಿ.ಪಿ. ತೊಂದರೆಗಳಿತ್ತು. ದಿನಕ್ಕೆ 5 ರಿಂದ 7 ಮಾತ್ರೆಗಳು ನುಂಗುತ್ತಿದ್ದೆ, ಒಂದು ತಿಂಗಳಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಖರ್ಚುಮಾಡುತ್ತಿದ್ದೆ. ಈ ಧ್ಯಾನ ಸಾಧನೆ ಹೆಚ್ಚಾಗಿ ಮಾಡಿದ್ದರಿಂದ ಈ ಕಾಯಿಲೆಗಳನ್ನು ಆಸ್ಟ್ರಲ್ ಮಾಸ್ಟರ್‌ಗಳು ಆಸ್ಟ್ರಲ್ ಆಪರೇಷನ್ ಮೂಲಕ ಸರಿಮಾಡಿದರು. ಈಗ ಸುಮಾರು ಐದು ವರ್ಷಗಳಿಂದ ನನಗೆ ಅನಾರೋಗ್ಯ ಸಮಸ್ಯೆ ಯಾವುದು ಇಲ್ಲ ತುಂಬಾ ಆರೋಗ್ಯವಾಗಿ ಇದ್ದೇನೆ.

ಈ ಪಿರಮಿಡ್ ಶಕ್ತಿಯಿಂದ ನಾನು ಅಂದುಕೊಂಡಿರುವ ಕೆಲಸಗಳೆಲ್ಲಾ ಸಾಧಿಸುತ್ತಿದ್ದೇನೆ ಮತ್ತು ನನ್ನ ಅನೇಕ ಜನ್ಮಗಳನ್ನು ನೋಡಿಕೊಂಡಿದ್ದೇನೆ. ನನ್ನ ಕುಟುಂಬ ಧ್ಯಾನ ಕುಟುಂಬವಾಗಿದೆ. ಈಗ ನಾನು ನಮ್ಮ ಮನೆಯಲ್ಲಿ ಶ್ರೀ ವಿಶ್ವಶಕ್ತಿ ಪಿರಮಿಡ್ ಧ್ಯಾನ ಕೇಂದ್ರವನ್ನು ಪ್ರಾರಂಭಮಾಡಿದ್ದೇನೆ. ಪ್ರತಿಯೊಬ್ಬರೂ ಶಾಕಾಹಾರಿಗಳಾಗಿ ಇರಬೇಕು ಮತ್ತು ಈ ಪಿರಮಿಡ್ ಧ್ಯಾನಶಕ್ತಿಯನ್ನು ಉಪಯೋಗಿಸಿಕೊಂಡು ಆನಂದವಾಗಿ ಇರಬೇಕೆಂದು ಕೋರಿಕೋಳ್ಳುತ್ತಿದ್ದೇನೆ. ಪ್ರತಿಯೊಂದು ಕುಟುಂಬ ಧ್ಯಾನ ಕುಟುಂಬವಾಗಿರಬೇಕೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.

 

ಈ ಧ್ಯಾನ ಜ್ಞಾನವನ್ನು ತಿಳಿಸಿಕೊಟ್ಟ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ಶತಕೋಟಿ ವಂದನೆಗಳು.

 

 

ಸುಶೀಲ
 +91 97438 03515

Go to top