" ಧ್ಯಾನದಿಂದ ಎಡಗಾಲಿನ ಎಲುಬು ಸರಿಯಾಯಿತು "

 

 

 

ನನ್ನ ಹೆಸರು ಹನುಮಂತ, ಮಡಿವಾಳದ ನಿವಾಸಿ, 2008ರಲ್ಲಿ ಧ್ಯಾನಲೋಕಕ್ಕೆ ಪ್ರವೇಶಮಾಡಿದೆ. ನಾನು ಮೊದಲಿಗೆ ಧ್ಯಾನದ ಕುರಿತಾಗಿ ಕೇಳಿದ್ದೆ. ಆದರೆ, ಅದರ ಬಗ್ಗೆ ಅನುಭವ ಇರಲಿಲ್ಲ. ನಂತರ ನಮ್ಮ ಗುರುಗಳ ಮಾರ್ಗದರ್ಶನದಂತೆ ಧ್ಯಾನ ಮಾಡುತ್ತಾ ಹೋದೆ. ದಿನದಿಂದ ದಿನಕ್ಕೆ ನನ್ನ ಆರೋಗ್ಯದಲ್ಲಿ ಬದಲಾವಣೆಯಾಯಿತು. ಈ ನಿಯಮಿತ ಧ್ಯಾನದ ಫಲವಾಗಿ B.A. ಕೋರ್ಸ್‌ನಲ್ಲಿ 78% ಪ್ರತಿಶತ ಅಂಕಗಳೊಂದಿಗೆ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾದೆ. ಡಿಗ್ರಿ ಮುಗಿದ ನಂತರ ನಾನು S.K.S ಮೈಕ್ರೊಫೈನಾನ್ಸ್‌ನಲ್ಲಿ ಸೇವೆಗೆ ಸೇರಿದೆ. ಒಮ್ಮೆ ಬೈಕ್‌ನಲ್ಲಿ ಬರುವಾಗ ಬೈಕ್ ಜಾರಿ ಕಾಲಿಗೆ ಪೆಟ್ಟಾಗಿ ನನ್ನ ಎಡಗಾಲಿನ ಎಲುಬು ಸರಿದುಹೋಯಿತು ಆಗ ನಾನು 2 ತಿಂಗಳ ರಜೆ ತೆಗೆದುಕೊಂಡು ಊರಿಗೆ ಬಂದೆನು.

 

ಆಗ ರಾಮಚಂದ್ರರವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಧ್ಯಾನಮಾಡತೊಡಗಿದೆ. ಒಂದು ಹುಣ್ಣಿಮೆಯ ದಿನ 2 ಗಂಟೆ ಧ್ಯಾನ ಮಾಡಲು ನಿಶ್ಚಯಿಸಿ ಕುಳಿತಿದ್ದೆವು. ಆದರೆ, ಧ್ಯಾನ ಮುಗಿದಾಗ 3 ತಾಸು ಪೂರ್ಣವಾಗಿತ್ತು. ಆ ವೇಳೆಯಲ್ಲಿ ನನ್ನ ಎಡಗಾಲನ್ನು ಯಾರೋ ಪೂರ್ತಿಯಾಗಿ ಜೋಡಿಸಿದ ಅನುಭವವಾಯಿತು. ಎಚ್ಚರವಾದ ನಂತರ ನೋಡಿದರೆ ನನ್ನ ಎಡಗಾಲಿನ ಎಲುಬು ಮೊದಲಿನಂತೆ ಸರಿಯಾಗಿತ್ತು. ಖುಷಿಯಿಂದ ಕುಣಿದಾಡಿ ಡಾಕ್ಟರ್ ಹತ್ತಿರ ಹೋಗಿ "ನಾನು ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೋಗುವುದಿಲ್ಲ" ಎಂದಾಗ ಡಾಕ್ಟರ್ "ನೀನು ಹೋಗದಿದ್ದರೆ ನಿನ್ನ ಕಾಲು ಕತ್ತರಿಸುತ್ತಾರೆ" ಎಂದರು. ನಾನು "ನೋಡಿ ಪರೀಕ್ಷಿಸಿ" ಎಂದಾಗ ಡಾಕ್ಟರ್ ಅದು ಎಡಗಾಲೋ ಅಥವಾ ಬಲಗಾಲೋ ಎಂದು ತಬ್ಬಿಬ್ಬಾಗಿ ಕೇಳಿದರು. ಆಗ ನಾನು ಧ್ಯಾನದ ಬಗ್ಗೆ ಹೇಳಿದೆನು. ಅಂದಿನಿಂದ ಇಂದಿನವರೆಗೂ 5 ವರ್ಷದಲ್ಲಿ ಯಾವುದೇ ರೀತಿಯ ಔಷಧಿಯ ಸಹಾಯವಿಲ್ಲದೇ ನಾನು ಆರಾಮವಾಗಿದ್ದೇನೆ. ಧ್ಯಾನವು ಕಲ್ಲುಸಕ್ಕರೆಯಂತೆ ಯಾವ ಕಡೆ ಸವಿದರೂ ಸಿಹಿಯೇ. ಈ ಯುಗದಲ್ಲಿ ಧ್ಯಾನವನ್ನು ಜಗತ್ತಿಗೆ ಅತಿ ಸರಳವಾಗಿ ತಿಳಿಸಿದ ಕಲಿಯುಗದ ಭಗೀರಥ ಶ್ರೀ ಬ್ರಹ್ಮರ್ಷಿ ಪತ್ರೀಜಿ ಸರ್ ಅವರಿಗೆ ಅನಂತಾನಂತ ಧನ್ಯವಾದಗಳು. ಧ್ಯಾನಲೋಕದ ರೂಪಾರವರಿಗೆ, ಶಿರಹಟ್ಟಿಯ ಶ್ರೀಕೃಷ್ಣ ಪಿರಮಿಡ್ ಧ್ಯಾನ ಕೇಂದ್ರದ ಸಂಸ್ಥಾಪಕರಾದ ರಾಮಚಂದ್ರ ಹೊಸವಾಡ ಸರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

 

 

 

ಹನುಮಂತ, ಯ.ಮಡಿವಾಳ

ಶಿರಹಟ್ಟಿ

ಫೋ: +91 99458 95036

Go to top