" ಧ್ಯಾನದಿಂದ ಸಂಕಲ್ಪಶಕ್ತಿ "

 

 

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ‘ಶ್ರೀ ರತ್ನ ಪಿರಮಿಡ್ ಧ್ಯಾನ ಕೇಂದ್ರ’ದಲ್ಲಿ ನಾನು ಪ್ರತಿ ಸೋಮವಾರ ಧ್ಯಾನದ ತರಗತಿಗಳನ್ನು ನಡೆಸುತ್ತೇನೆ. ಒಮ್ಮೆ ಹಲವು ಧ್ಯಾನಿಗಳೊಂದಿಗೆ ತರಗತಿ ನಡೆಸುವಾಗ “ನೀವು ಮಂಡಲ ಧ್ಯಾನವನ್ನು ಮಾಡಬೇಕು” ಎಂದು ನನಗೆ ಒಂದು ಸಂದೇಶ ಬಂತು. ಅದರಂತೆ ನಾವು ಮಂಡಲ ಧ್ಯಾನವನ್ನು ಪ್ರಾರಂಭಿಸಿ 48 ದಿವಸಗಳ ಕಾಲ ಮಾಡಿದೆವು. ಹೀಗೆ ನಾವು ಧ್ಯಾನ ಮಾಡುತ್ತಿದ್ದಾಗ ನಮ್ಮ ಜೊತೆಯಲ್ಲಿ ಋಷಿಮುನಿಗಳು, ದೇವತೆಗಳ ಮತ್ತು ಅನೇಕ ಧ್ಯಾನಿಗಳು ಕಾಣಿಸುತ್ತಿದ್ದರು. 

 

41ನೇ ದಿವಸ ಧ್ಯಾನ ಮಾಡುವಾಗ ನನಗೆ ಜೀಸಸ್ ಕ್ರೈಸ್ಟ್ ಕಾಣಿಸಿಕೊಂಡು “ನೀವು ತುಂಬಾ ಶ್ರದ್ಧಾಭಕ್ತಿಯಿಂದ ಧ್ಯಾನ ಮಾಡುವುದನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಇದನ್ನು ನಿಮಗೆ ತಿಳಿಸಲು ಬಂದಿದ್ದೇನೆ” ಎಂದು ಹೇಳಿದರು. ಎರಡನೆಯದಾಗಿ, ಬ್ರಹ್ಮರ್ಷಿ ಪತ್ರೀಜಿಯವರು ಕಾಣಿಸಿಕೊಂಡು "ತುಂಬಾ ಶ್ರದ್ಧಾ ಭಕ್ತಿಯಿಂದ ಧ್ಯಾನ ಮಾಡುತ್ತಿದ್ದೀರಿ, ತುಂಬಾ ಸಂತೋಷವಾಯಿತು ಕೀಪ್ ಇಟ್ ಅಪ್" ಎಂದು ಹೇಳಿದರು. ಮೂರನೆಯದಾಗಿ, ಶ್ರೀಕೃಷ್ಣ ಕಾಣಿಸಿಕೊಂಡು “ನೀವು ಎಲ್ಲಾ ಯೋಗಿಗಳಾಗಿದ್ದೀರಿ, ತುಂಬಾ ಸಂತೋಷವಾಯಿತು” ಎಂದು ತಿಳಿಸಿದರು. ನಾನು ಪ್ರತಿದಿನ ಧ್ಯಾನಮಾಡುವಾಗ ಶ್ರೀಕೃಷ್ಣ ಮತ್ತು ಆಂಜನೇಯರ ಬಾಲಲೀಲೆಗಳನ್ನು ನೋಡುತ್ತಿದ್ದೆ. ಇದರಿಂದ ನನಗೆ ಆದ ಪರಮಾನಂದ ಹೇಳತೀರದು. 48ನೇ ದಿವಸ ಸ್ವರ್ಣಮಾಲಾ ಪತ್ರೀಜಿಯವರು ನಮ್ಮ ಧ್ಯಾನ ಕೇಂದ್ರಕ್ಕೆ ಬಂದಿದ್ದರು. ಅವರು ನನ್ನ ಅನುಭವಗಳನ್ನು ಕೇಳಿ, ಹೇಳಿದ ಮಾತು ಏನೆಂದರೆ, “ಆಸ್ಟ್ರಲ್ ಮಾಸ್ಟರ್ಸ್ ನಿನ್ನ ಮೂಲಕ ಪ್ರಚಾರವಾಗಲಿ ಎಂದು ನಿನಗೆ ಸಂದೇಶವನ್ನು ತಿಳಿಸಿರುತ್ತಾರೆ” ಎಂದು ಹೇಳಿ ಈ ನಿನ್ನ ಸಂದೇಶದ ಅನುಭವಗಳನ್ನು ‘ಧ್ಯಾನ ಕಸ್ತೂರಿ’ ಮಾಸಪತ್ರಿಕೆಗೆ ಬರೆಯಲು ತಿಳಿಸಿರುತ್ತಾರೆ. ಇದರಿಂದ  ಧ್ಯಾನದಿಂದ ಜ್ಞಾನ, ಬುದ್ಧಿಶಕ್ತಿ, ಮನಶ್ಶಾಂತಿ, ಒಳ್ಳೆಯ ಸ್ನೇಹಿತರ ಸಾಂಗತ್ಯ, ಆರೋಗ್ಯ, ಸಂತೋಷ ಎಲ್ಲವನ್ನು ಪಡೆಯಬಹುದು. ಧ್ಯಾನ ಪ್ರಚಾರವೇ ನಮ್ಮ ಮುಖ್ಯ ಗುರಿ ಎಂಬುದನ್ನು ನಾವು ತಿಳಿದುಕೊಂಡಂತಾಗಿದೆ.

 

 

G.R.ಪರ್ವತವರ್ಧಿನಿ

ಶ್ರೀ ರತ್ನ ಪಿರಮಿಡ್ ಧ್ಯಾನ ಕೇಂದ್ರ

ಬೆಂಗಳೂರು

Go to top