" 2014 ಕಡ್ತಾಲ್ ಧ್ಯಾನ ಮಹಾಚಕ್ರದ ಅನುಭವಗಳು "

 

 

ನನ್ನ ಹೆಸರು ಲೋಕೇಶ್. ಧ್ಯಾನ ಮಹಾಚಕ್ರದಲ್ಲಿ ಹಲವಾರು ಧ್ಯಾನಾನುಭವಗಳು ಆದವು. 22ರಂದು ಬೆಳಿಗ್ಗೆ 5 ಗಂಟೆಗೆ ಧ್ಯಾನಕ್ಕೆ ಕುಳಿತಾಗ ಬಂದ ಸಂದೇಶವು ಹೀಗಿದೆ : ಕಡ್ತಾಲ್‌ನ ಮಹೇಶ್ವರ ಪಿರಮಿಡ್‌ನಲ್ಲಿರುವ ಕ್ರಿಸ್ಟಲ್‌ನ ತುದಿಗೆ ಈಶ್ವರನಿಂದ ಮತ್ತು ಸೂರ್ಯಭಗವಾನ್‌ರಿಂದ ಎನರ್ಜಿ ಸಂಪರ್ಕವಾಯಿತು ಮತ್ತು ಪ್ರಕೃತಿ ಲೋಕಕ್ಕೆ ಕನೆಕ್ಟ್ ಆಗಿ ಆಸ್ಟ್ರಲ್ ಪಿರಮಿಡ್‌ನಲ್ಲಿ ಕುಳಿತು ಆಸ್ಟ್ರಲ್ ಟ್ರಾವೆಲ್ ಮಾಡಿದೆ. ದೂರದೂರ ಹೋದಂತೆಲ್ಲಾ ಈಶ್ವರ ಧ್ಯಾನದಲ್ಲಿ ಕುಳಿತಿದ್ದು ಕಾಣಿಸಿತು. ಅವರಿಗೆ ಓಂ ಆಕಾರದಲ್ಲ್ಲಿ ಎನರ್ಜಿ ಬರುತ್ತಿತ್ತು.

 

23 ಬೆಳಗಿನ ಜಾವದ ಸಂಗೀತ ಧ್ಯಾನದಲ್ಲಿ ಬ್ರಹ್ಮದೇವನಿಂದ ಎನರ್ಜಿ ಕನೆಕ್ಟ್ ಆಯಿತು. ಧ್ಯಾನದ ನಂತರ ಪತ್ರಿಸಾರ್ ನೀಡಿದ ಸಂದೇಶ ಏನೆಂದರೆ ನಾವು ಈಶ್ವರರಲ್ಲ ಬ್ರಹ್ಮದೇವರು. ಈಶ್ವರನಿಗೆ ದೇವಾಲಯ ಇರುತ್ತದೆ. ಬ್ರಹ್ಮದೇವನಿಗೆ ದೇವಾಲಯ ಇರುವುದಿಲ್ಲ. ಧ್ಯಾನಿಗಳಾದ ನಾವೆಲ್ಲಾ ಬ್ರಹ್ಮರೇ ಎಂದು ಹೇಳಿದರು. ಹಾಗೆಯೇ, ಆ ದಿನ ಬೆಳಗಿನ ಧ್ಯಾನದಲ್ಲಿ ಐನ್‌ಸ್ಟೀನ್ ಮಾಸ್ಟರ್‌ರವರಿಂದ ಎಲಕ್ಟ್ರೋ ಮ್ಯಾಗನೆಟಿಕ್ ಎನರ್ಜಿ ಆಹ್ವಾನ ಮಾಡಿದೆ. ತತ್ತ್ವಜ್ಞಾನ ಲೋಕದಿಂದ ನನ್ನ ಸೂಕ್ಷ್ಮಶರೀರ ಬಿಡುಗಡೆಯಾಗಿ ನೇಪಾಳದ ಬೆಟ್ಟಗಳ ಬಳಿ ಹೋಗಿ ಅಲ್ಲಿ ಎರಡು ಬೆಟ್ಟಗಳ ನಡುವೆ ಧ್ಯಾನ ಮಾಡುತ್ತಿರುವಾಗ ಎಲೆಕ್ಟ್ರೋ ಮ್ಯಾಗನೆಟಿಕ್ ಎನರ್ಜಿ ಕನೆಕ್ಟ್ ಆಯಿತು. ಆ ಎನರ್ಜಿಯಲ್ಲಿ ಗೌತಮಬುದ್ಧರು ಕಾಣಿಸಿದರು. ಅವರು ಧ್ಯಾನಕ್ಕಾಗಿ ಸ್ಥಳವನ್ನು ಸ್ವಚ್ಛಗೊಳಿಸುತ್ತಿದ್ದರು. ಅಲ್ಲಿ ಒಂದು ದೊಡ್ಡ ಕಲ್ಲಿನ ಗುಂಡು ಇತ್ತು. ಅದನ್ನು ಪಕ್ಕಕ್ಕೆ ಎಳೆದಾಗ ಅದರ ಕೆಳಗೆ ಒಂದು ಬಿಳಿ ಬಣ್ಣದ ಕಮಲ ಇತ್ತು. ಇದು ಏನು ಎಂದು ಪ್ರಶ್ನಿಸಿದಾಗ ಅದು ಬ್ರಹ್ಮಕಮಲ ಎಂದು ಹೇಳಿದರು. ಆ ಹೂವಿನ ಎನರ್ಜಿಯನ್ನು ಆಹ್ವಾನಿಸಿದಾಗ ಅತ್ಯಂತ ಹೆಚ್ಚಿನ ಎನರ್ಜಿ ಸಿಕ್ಕಿತು. ಬೆಳಿಗ್ಗೆ ನನಗೆ ಬಂದ ಸಂದೇಶ ಮತ್ತು ಪತ್ರಿಸಾರ್ ನೀಡಿದ ಸಂದೇಶ ಒಂದೇ ಆಗಿತ್ತು. 

 

24ರಂದು ಬೆಳಗಿನ ಜಾವದ ಸಂಗೀತ ಧ್ಯಾನಕ್ಕೆ ಕುಳಿತ್ತಿದ್ದಾಗ ನಮ್ಮ ಚಿಕ್ಕಪ್ಪನವರ ಆತ್ಮ ಕಾಣಿಸಿತು. ಅವರು ಅಳುತ್ತಾ, ನಾನು ಎಂತಹ ಜ್ಞಾನಿ ಅಂತಹ ಜ್ಞಾನವನ್ನು ತಿಳಿದುಕೊಳ್ಳಲಿಲ್ಲ ಎಂದು ಹೇಳಿದರು. ಆಗ ಅವರ ಆತ್ಮಕ್ಕೆ 108 ಆಸ್ಟ್ರಲ್ ಪಿರಮಿಡ್ ಲೋಕದಲ್ಲಿ ಧ್ಯಾನ ಮಾಡಿ ಉನ್ನತ ಲೋಕಕ್ಕೆ ಹೋಗಿ ಅಲ್ಲಿ ಜ್ಞಾನವನ್ನು ಪಡೆದು ಜ್ಞಾನಿಯಾಗಿ ಜನ್ಮಪಡೆಯಬೇಕೆಂದು ಸಲಹೆ ಕೊಟ್ಟೆ. ಬೆಳಗಿನ ಜಾವದಲ್ಲಿ ಧ್ಯಾನಮಾಡಿದರೆ ಹೆಚ್ಚು ಚೈತನ್ಯವಿರುತ್ತದೆ ಎಂದು ಸಂದೇಶ ಬಂತು. ಏತಕ್ಕಾಗಿ ಎಂದು ಕೇಳಿದ್ದಕ್ಕೆ ರಾತ್ರಿ ವೇಳೆಯಲ್ಲಿ ಆಸ್ಟ್ರಲ್ ಮಾಸ್ಟರ್ಸ್ ಓಡಾಡಿರುತ್ತಾರೆ ಮತ್ತು ಸಾಧನೆಯಲ್ಲಿ ಇರುತ್ತಾರೆ ಯಾರು ಬೆಳಗಿನ ಜಾವದಲ್ಲಿ ಧ್ಯಾನವನ್ನು ಮಾಡುತ್ತಾರೋ ಅವರಿಗೆ ಆ ಎನರ್ಜಿ ಬರುತ್ತದೆ ಎಂದು ಹೇಳಿದರು. 

 

25ರಂದು ಧ್ಯಾನದಲ್ಲಿ ನಾನು ಸಂಕಲ್ಪವನ್ನು ಇಟ್ಟು ಪತ್ರಿಸರ್‌ರವರಿಂದ 50ನೆಯ ಲೋಕದ ಸಂದೇಶ ಸಿಗಬೇಕು ಎಂದುಕೊಂಡೆ. ಧ್ಯಾನ ಆದಮೇಲೆ 9.30ಕ್ಕೆ ನಾನು ಪಿರಮಿಡ್‌ನ ಒಳಗೆ ಹೋಗುತ್ತಿದ್ದಾಗ ಪತ್ರೀಸರ್‌ರವರು ಆ ವೇಳೆಯಲ್ಲಿ ನನ್ನ ಮುಂದೆ ಹೋದರು. ಸರ್ ಕಿಂಗ್ಸ್ ಛೇಂಬರ್‌ನಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡರು. ನಾನು ಕೆಳಗೆ ಕುಳಿತು ಸರ್‌ರವರಿಂದ ದಿವ್ಯವಾದ ಸಂದೇಶ ಬರಬೇಕೆಂದುಕೊಂಡೆ. ಹತ್ತು ನಿಮಿಷದಲ್ಲಿ ಮಾಯನ್ ಪಿರಮಿಡ್ ಕಾಣಿಸಿತು. ನಾನು ಪ್ರಶ್ನೆ ಹಾಕಿದಕ್ಕೆ ಅದು ನನಗೆ ಸಿಕ್ಕಿದ “50ನೇ ಲೋಕವೆಂದರೆ ಅದು ಮಾಯನ್‌ಲೋಕ” ಎಂದು ಉತ್ತರ ಬಂತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಂತಹ ಧ್ಯಾನವನ್ನು ತಿಳಿಸಿಕೊಟ್ಟರುವ ಗೌತಮಬುದ್ಧರಿಗೆ ಮತ್ತು ಪತ್ರಿಸರ್‌ರವರಿಗೆ ಅನಂತಾನಂತ ಧನ್ಯವಾದಗಳು.

 

 

S.ಲೋಕೇಶ್
ಚಿಕ್ಕಬಳ್ಳಾಪುರ

+91 99453 70070

Go to top