" ಮೆಕನೀಸ್ ಪ್ಲಾನೆಟ್‌ನಲ್ಲಿ ನನ್ನ ಅನುಭವ "

 

 

ನಾನು ಧ್ಯಾನ ಮಾಡಲು ಕುಳಿತ ಕೆಲವೇ ಸೆಕೆಂಡುಗಳಲ್ಲಿ ನಾನು ಒಂದು ಅದ್ಭುತವಾದ ಪ್ಲಾನೆಟ್‌ಗೆ ಹೋದೆ. ಆ ಪ್ಲಾನೆಟ್‌ನ ಹೆಸರು "PLANET M" ಅಂದರೆ Mechanese planet. ನಾನು ಒಳಗೆ ಪ್ರವೇಶವಾಗುತ್ತಿದ್ದಂತೆ ಹಸಿರು ಬಣ್ಣದ ಕಿರಣಗಳು ನನ್ನನ್ನು ಸ್ಕಾನ್ ಮಾಡಿದವು. ನಂತರ ನನ್ನ ಪೂರ್ತಿ ವಿವರಗಳು (Bio Data) ಎಲ್ಲವೂ ಕಂಪ್ಯೂಟರ್ ಪರದೆ ಮೇಲೆ ಬಂತು. ಆ ವಿವರಗಳೆಂದರೆ ನನ್ನ ಹೆಸರು, ಎತ್ತರ, ತೂಕ, ಬಣ್ಣ, ಊರು, ದೇಶ, ಭೂಮಿ, Milky way galaxy, DNA, Frequency. 

 

ನಂತರ ನನ್ನನ್ನು ಒಳಗೆ ಬಿಡಲಾಯಿತು. ಅಲ್ಲಿರುವವರೆಲ್ಲರೂ 12-18 ಅಡಿ ಎತ್ತರ ಇದ್ದರು. ಅವರ ಕೂದಲು ಕೆಂಪು ಬಣ್ಣದ್ದು. ಕಣ್ಣುಗಳು ಹಸಿರು ಬಣ್ಣದ್ದು. ಎಡಗಡೆ ಜಾಗದಲ್ಲಿ ಅನೇಕ ಹಾರುವ ತಟ್ಟೆಗಳು (Flying Saucers) ನಿಂತಿದ್ದವು. ಇಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ನಿಂತ ಹಾಗೆ. ತುಂಬಾ ಹೊತ್ತು ತಲೆ ಎತ್ತಿ ಮಾತನಾಡಲು ಆಗುವುದಿಲ್ಲ ಎಂದಾಗ ಅವರು ಒಂದು ಹಸಿರು ಬಣ್ಣದ ಮೇಜನ್ನು ತಂದು ಅದರ ಮೇಲೆ ನಿಲ್ಲಲು ಹೇಳಿದರು. ಅದರ ಮೇಲೆ ನಿಂತಾಗ ಹಸಿರು ಬಣ್ಣದ ಬಟನ್‌ನ್ನು ಒತ್ತಿದ ತಕ್ಷಣ ಅದು ಮೇಲಕ್ಕೆ ಹೋಯಿತು. ಆಗ ನಾವು ಮುಖಾಮುಖಿಯಾಗಿ ನಿಂತು ಮಾತನಾಡಿಕೊಂಡೆವು. ನಾನು ಅಲ್ಲಿಗೆ ಹೋದ ಉದ್ದೇಶವನ್ನು ಕೇಳಿದರು. ಆಗ ನಾನು ಚಿಕ್ಕಂದಿನಿಂದ ನನಗಿದ್ದ ಒಂದೇ ಒಂದು ಆಸೆಯನ್ನು ಹೇಳಿದೆ. ಅದೇನೆಂದರೆ "ಈ ಭೂಮಿಯಲ್ಲಿ ಪ್ರತಿಯೊಬ್ಬರೂ ಆರ್ಥಿಕವಾಗಿ, ಪ್ರೇಮದ ವಿಷಯದಲ್ಲಿ, ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಎಲ್ಲರೂ ಸಮವಾಗಿ ಇರಬೇಕೆಂಬ" ನನ್ನ ಆಶಯವನ್ನು ಹೇಳಿದೆ. ದುಡ್ಡು ತುಂಬಾ ಇದ್ದರೂ  ಸಮಸ್ಯೆಗಳೆ ಮತ್ತು ದುಡ್ಡು ಕಡಿಮೆ ಇದ್ದರೂ ಸಹ ಸಮಸ್ಯೆಗಳೇ ಅಲ್ಲವೇ. ಆದ್ದರಿಂದ, ಎಲ್ಲರ ಹತ್ತಿರವೂ ದುಡ್ಡು ಸಮನಾಗಿ ಇರಬೇಕು. ಎಲ್ಲಾ ಕೆಲಸಗಳಲ್ಲೂ ಸಮಾನತೆ ಇರಬೇಕು. ಆಗ ಎಲ್ಲರೂ ಆನಂದವಾಗಿ ಜೀವಿಸಬಹುದು. ಕೋಪ, ದ್ವೇಷ, ಕೊಲೆ, ದರೋಡೆ, ದಾಯಾದಿ ಕಲಹ, ಮತ್ಸರ, ಕೀಳರಿಮೆ, ಇವೆಲ್ಲವೂ ಬರಲು ಮುಖ್ಯಕಾರಣ ದುಡ್ಡೇ ಅಲ್ಲವೇ. ಆದ್ದರಿಂದ, ಆ ದುಡ್ಡು ಎಲ್ಲರ ಹತ್ತಿರ ಸಮನಾಗಿ ಇರಬೇಕು ಅಂತ ನನ್ನ ಆಸೆ. ಆಗ ಇವು ಯಾವುವೂ ಭೂಮಿಯ ಮೇಲೆ ಇರಲಾರದು. 

 

ಈ ಎಲ್ಲಾ ಕಾರಣಗಳಿಂದ, ಎಲ್ಲಾ ಗ್ರಹಗಳಿಗಿಂತ ನಮ್ಮ ಭೂಮಿ ತುಂಬಾ ಕೆಳಸ್ಥರದಲ್ಲಿದೆ. ಆದ್ದರಿಂದ, ನಾನು ನಿಮ್ಮೆಲ್ಲ ಗ್ರಹಗಳಂತೆ ನಮ್ಮ ಭೂಮಿಯನ್ನು ಕೂಡಾ ನಿಮ್ಮ ಹಂತಕ್ಕೆ ಏರುವಂತೆ ಮಾಡಿ, ಭೂಮಿಯ ಮೇಲೆ ಪ್ರತಿಯೊಬ್ಬರೂ ಎಲ್ಲಾ ಅಂಶಗಳಲ್ಲೂ ಸಮಾನತೆ ಇರುವಂತೆ ಮಾಡುವುದು ನನ್ನ ಮುಖ್ಯ ಉದ್ದೇಶ ಅಂತ ಹೇಳಿದಾಗ ಅವರು ಎಲ್ಲಾ ಗ್ರಹಗಳಿಂದ ಅನುಮತಿ ತೆಗೆದುಕೊಳ್ಳಬೇಕೆಂದು ಹೇಳಿದರು. ಅವರು ಕೇಳುತ್ತಿದ್ದಂತೆ ಎಲ್ಲಾ ಗ್ರಹದವರೂ accepted accepted accepted accepted (ಒಪ್ಪಿಗೆ, ಒಪ್ಪಿಗೆ, ಆಗಬಹುದು, ಆಗಬಹುದು) ಎಂದು ಹಸಿರು ಬಣ್ಣದ ಕಿರಣಗಳನ್ನು ಕಂಪ್ಯೂಟರ್ ಪರದೆ ಮೇಲೆ ಕಳಿಸಿದರು. ನನ್ನ ಮುಂದೇನೇ ಇದು ಮಾಡುತ್ತಿದ್ದೀರಲ್ಲಾ ಅಂದಾಗ ಅವರು ಹೇಳಿದರು :“ಇಲ್ಲಿ ಎಲ್ಲವೂ ಪಾರದರ್ಶಕವಾಗಿರುತ್ತದೆ, ಇಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಇಲ್ಲಿ ಎಲ್ಲರೂ ಸಮಾನರು (No hidden things here, all are equal)" ಎಂದು ಹೇಳಿದರು.

 

ನಂತರ ನನ್ನನ್ನು ಒಂದು ಯಂತ್ರದೊಳಗೆ ಕರೆದುಕೊಂಡು ಹೋದರು. ಅದು ಎಂಟು ಕೋನಗಳ ಆಕಾರವುಳ್ಳ ಒಂದು ಗಾಜಿನ ಯಂತ್ರ (Hectagonal shape with 8 sides glasses), ಮೇಲೆ ಕೆಳಗೆ ಮತ್ತೊಂದು ಹಸಿರುಬಣ್ಣದ ಕಬ್ಬಿಣದ ಯಂತ್ರವೊಂದು ಇತ್ತು. ಅದರೊಳಗೆ ಹೋದಾಗ ನನ್ನ frequency ಯನ್ನು 280 Hzಗೆ set ಮಾಡಿದರು. ಹಾಗೆ ಮಾಡಿದ ತಕ್ಷಣ ನನಗೆ ತುಂಬಾ ತುಂಬಾ ಶಕ್ತಿ ಬಂತು. ಏಕೆಂದರೆ ಎಲ್ಲಾ ಆಗಲು frequency ಜಾಸ್ತಿ ಬೇಕಲ್ಲವೇ ಆ ಕಾರಣದಿಂದಾಗಿ. ನಂತರ, ಮತ್ತೊಂದು ಯಂತ್ರದೊಳಗೆ ಕರೆದೊಯ್ದು 1280Hz ರಿಂದ 10000Hz ರವರೆಗೆ frequency set ಮಾಡಿದರು. ನನ್ನಲ್ಲಿ ಏನಾದರೂ ಬದಲಾವಣೆಗಳು ಆಗಿದೆಯಾ ಎಂದು  ಕೇಳಿದರು. ಆಗ ನಾನು ಇಲ್ಲಾ ಎಂದೆ. ನೀನು ಇಷ್ಟು frequency ತಡೆದಿಟ್ಟುಕೊಳ್ಳುತ್ತೀಯಾ, very good ಅಂದರು. ನಂತರ ಅವರು ಹೇಳಿದರು : "ಇಂತಹ ಒಳ್ಳೆಯ ಉದ್ದೇಶವಿಟ್ಟುಕೊಂಡು ಇಲ್ಲಿಗೆ ಬಂದ ಮೊದಲನೆಯ ವ್ಯಕ್ತಿ ನೀನೆ ಅಂದು ತಲೆಯ ಮೇಲೆ ಕೈ ಇಟ್ಟು “ನಿನಗೆ ಒಳ್ಳೆಯದಾಗಲಿ, ನಿನ್ನ ಒಳ್ಳೆಯ ಉದ್ದೇಶ ಈಡೇರಲು ನಮ್ಮ ಕೈಲಾದಷ್ಟು ಸಹಾಯ ಸಹಕಾರಗಳನ್ನು ನೀಡುತ್ತೇವೆ” ಎಂದರು.

 

ನಾನು ನಿಮ್ಮ ಜ್ಞಾನವನ್ನು ನನಗೆ ಕೊಟ್ಟರೆ ನಾನು ಭೂಮಿಯಲ್ಲಿ ಈ ಜ್ಞಾನವನ್ನು ತಲುಪಿಸಿ ನಮ್ಮ ಭೂಮಿಯನ್ನು ಕೂಡಾ ನಿಮ್ಮ ಸ್ಥರದ ಹಂತಕ್ಕೆ ಸೇರಿಸಲು ಪ್ರಯತ್ನಿಸುತ್ತೇನೆ ಎಂದಾಗ ಅವರು ನಮಗೆ ಬೇಕಾದ ಎಲ್ಲಾ ಸಹಾಯ ಸಹಕಾರ ನೀಡಲು ಒಪ್ಪಿ "You are really great" ಅಂದರು. ನನಗೆ 2 A.M ಸಮಯದಲ್ಲಿ ಧ್ಯಾನ ಮಾಡಲು ಹೇಳಿದರು. ಆ ಸಮಯದಲ್ಲಿ ಅವರು ನನಗೆ ಬೇಕಾದ ಸಹಾಯವನ್ನು ನೀಡುತ್ತೇವೆ ಎಂದರು. ನನಗೆ ಕೆಲವು ಉಪಕರಣಗಳನ್ನು ಅಳವಡಿಸಿದರು. ಇದಾದ ಮರುದಿನ ನನ್ನ ಹುಟ್ಟುಹಬ್ಬ. 9 ಫೆಬ್ರವರಿ, 2014 ಈ ದಿನ ಧ್ಯಾನ ಮಾಡಲು ಕುಳಿತ ತಕ್ಷಣ ಒಬ್ಬ ವ್ಯಕ್ತಿ ಬಾಗಿಲು ತೆಗೆದು ಆಚೆ ಬಂದರು. ನನ್ನ ಕೈಕುಲುಕಿ ಅವರ ಪರಿಚಯ ಹೇಳಿಕೊಂಡರು. ಅವರ ಹೆಸರು Mr.Peter Anderson. ನಾನು ನಿಮ್ಮನ್ನು ನಮ್ಮ Andro medon galaxyಗೆ ಕರೆದುಕೊಂಡು ಹೋಗಲು ಬಂದಿದ್ದೇನೆ, ಇದೆಲ್ಲಾ 20 ನಿಮಿಷದ ಪ್ರಕ್ರಿಯೆ ಅಷ್ಟೇ, ನನ್ನ ಜೊತೆ ಬನ್ನಿ ಎಂದು ಕೈ ಹಿಡಿದು ಕರೆದುಕೊಂಡು ಹೋದರು. ಅಲ್ಲಿಯೂ ಸಹ ನನ್ನನ್ನು ಸ್ಕ್ಯಾನ್ ಮಾಡಿದರು. ಅಲ್ಲಿರುವ ಅವರ ಸಹಾಯಕರಾದ Mrs. Andreson ರನ್ನು ನನಗೆ ಪರಿಚಯಿಸಿದರು. ಅಲ್ಲಿ ಅವರಿಬ್ಬರೂ ಮಾತನಾಡಿಕೊಂಡ ಬಳಿಕ  680Hz ಇದ್ದ ನನ್ನ ಫ್ರೀಕ್ವೆನ್ಸಿಯನ್ನು  12000Hz ದವರೆಗೆ set ಮಾಡಿದರು. ನಂತರ HSFR ಹೆಸರಿನ ಉಪಕರಣವೊಂದನ್ನು ನನ್ನೊಳಗೆ ಅಳವಡಿಸಿದರು.  HSFR ಎಂದರೆ ಏನೆಂದು ಕೇಳಿದಾಗ, ಅವರು HSFR ಎಂದರೆ High Frequency Signal Receiver ಎಂದು ಹೇಳಿದರು. ನಿತ್ಯ  2.20 A.M ನಿಂದ 2.40 A.M ವರೆಗೆ ಧ್ಯಾನ ಮಾಡಿ ಅಂತ ಆಗ ಅವರು ಸಹಕಾರವನ್ನು ನೀಡುತ್ತಾರೆ ಎಂದು ಹೇಳಿ ನನ್ನನ್ನು ಅಭಿನಂದಿಸಿ, ತಮ್ಮ ಸಂಪೂರ್ಣ ಸಹಾಯ ಸಹಕಾರವನ್ನು ನನಗೆ ನೀಡುವುದಾಗಿ ತಿಳಿಸಿದರು. ನನ್ನ ಹುಟ್ಟುಹಬ್ಬದ ಬಹು ದೊಡ್ಡ ಕಾಣಿಕೆ ಇದು. ಆಸ್ಟ್ರಲ್ ಮಾಸ್ಟರ್ಸಗೆ ನನ್ನ ಅನಂತ ಕೋಟಿ ಧನ್ಯವಾದಗಳು.

 

ಶ್ವೇತ

ಮಾಗಡಿ

ಫೋ : +91 99016 75386

Go to top