' ಧ್ಯಾನ ವಿಜ್ಞಾನ ' ಪುಸ್ತಕ ನನ್ನ ಜೀವನವನ್ನೇ ಬದಲಾಯಿಸಿತು

 

 

ನನ್ನ ಹೆಸರು ನರಸಿಂಹಯ್ಯ, 51 ವರ್ಷ. ನನಗೆ ಬಾಲ್ಯದಿಂದಲೂ ಆಧ್ಯಾತ್ಮಿಕತೆ ಅಂದರೆ ಅಚ್ಚುಮೆಚ್ಚು, ನಾನು ಒಬ್ಬ ಯೋಗಿಯಾಗಬೇಕೆಂಬ ಆಸೆ ಇತ್ತು. ನಾನು ಭೇಟಿಯಾದ ಸಾಧು ಸತ್ಪುರುಷರಲ್ಲಿ ’ಸಾಧು’ ಅಂದರೆ ಏನು, ’ಯೋಗಿ’ ಅಂದರೆ ಏನು ಎಂದು ವಿಚಾರಿಸುತ್ತಿದ್ದೆ. ನನ್ನ ಈ ಹುಡುಕಾಟ ಬಹಳ ವರ್ಷಗಳು ಮುಂದುವರೆಯಿತು. ಯಾವುದೇ ರೀತಿಯ ಉಪಯೋಗಗಳು, ಉತ್ತರಗಳು ಸಿಗಲಿಲ್ಲ. ಕೆಲವು ವರ್ಷಗಳ ನಂತರ ಕಾಳಹಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ ’ಧ್ಯಾನ ವಿಜ್ಞಾನ’ ಪುಸ್ತಕ ಅಲ್ಲಿನ ಅಂಗಡಿಯಲ್ಲಿ ಲಭಿಸಿತು. ಆ ಪುಸ್ತಕವನ್ನು ಅಧ್ಯಯನ ಮಾಡಿದ ನಂತರ ನನಗೆ ಸಿಗಬೇಕಾದ ಧ್ಯಾನದ ವಿಚಾರಧಾರೆಗಳು ಲಭಿಸಿದವು. ಆ ಪುಸ್ತಕವನ್ನೇ ಗುರುವೆಂದು ನಂಬಿ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ. ನಂತರ ಪಿರಮಿಡ್ ಪುಸ್ತಕಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದೆ. ದಿನದಲ್ಲಿ ಸುಮಾರು 3 ರಿಂದ 4 ಗಂಟೆಗಳ ಕಾಲ ಧ್ಯಾನ ಮತ್ತು ಹುಣ್ಣಿಮೆಯಲ್ಲಿ ಪಿರಮಿಡ್‌ಗೆ ಹೋಗಿ ಧ್ಯಾನ ಮಾಡಲು ಪ್ರಾರಂಭಿಸಿದೆ. ಗುರುಗಳಾದ ಪತ್ರೀಜಿಯವರನ್ನು ಭೇಟಿಯಾದೆ. 

 

ನನಗೆ ಮಧುಮೇಹ ಕಾಯಿಲೆ ಇತ್ತು. ಧ್ಯಾನದಿಂದ ಮಧುಮೇಹ ಕಾಯಿಲೆ ದಿನದಿಂದ ದಿನಕ್ಕೆ ಕಡಿಮೆಯಾಗಿ ಮಧುಮೇಹ ಕಾಯಿಲೆ ಇಲ್ಲದಂತಾಯಿತು. ಹೀಗೆ ಧ್ಯಾನದಲ್ಲಿ ಏನೋ ಮಹತ್ವವಿದೆ ಎಂದು ತಿಳಿದು ಎಲ್ಲರಿಗೂ ಧ್ಯಾನಮಾಡಿಸಲು ಪ್ರಾರಂಭಿಸಿದೆ. ಹೀಗೆ ನನ್ನ ಧ್ಯಾನ ಪ್ರಚಾರದ ಪಯಣ ಪ್ರಾರಂಭವಾಯಿತು. ನನ್ನ ಪತ್ನಿಯಾದ ನಂಜಮ್ಮನವರಿಗೆ ಕಾಲು ನೋವಿನ ಸಮಸ್ಯೆ ಇತ್ತು. ಧ್ಯಾನದ ಮೂಲಕ ಮೊಣಕಾಲು ನೋವು ಪರಿಹಾರವಾಯಿತು. ಇದರಿಂದ ಅವರೂ ಸಹ ಧ್ಯಾನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. 

 

ಧ್ಯಾನದಲ್ಲಿ ಪತ್ರೀಜಿಯವರು, ಶ್ರೀಕೃಷ್ಣ, ಈಶ್ವರ ಕಾಣಿಸುತ್ತಿದ್ದರು. ಬೆಟ್ಟ, ಗುಡ್ಡಗಳು, ಅರಣ್ಯ, ದೇವಸ್ಥಾನಗಳನ್ನು ಕಂಡಿದ್ದೇನೆ. ಒಂದು ಲೋಕದಲ್ಲಿ 500 ರಿಂದ 1000 ಗೋಪುರಗಳನ್ನು ಕಂಡಿದ್ದೇನೆ. ಧ್ಯಾನದಲ್ಲಿ ಯಾವುದೋ ಒಂದು ಶಕ್ತಿ ಪ್ರವೇಶಿಸುವ ಹಾಗೆ ಆಗುತ್ತದೆ. ಸಂಪಿಗೆ ಮತ್ತು ಮಲ್ಲಿಗೆ ಹೂವಿನ ಸುವಾಸನೆ ಬಂದಂತೆ ಆಗುತ್ತದೆ. ಯಾವುದೋ ಲೋಕದಲ್ಲಿ ದೇವತೆಗಳನ್ನು, ಸಾಧು-ಸತ್ಪುರುಷರನ್ನು ನೋಡಿದಂತೆ ಆಗುತ್ತದೆ. ನಾನಾ ತರಹದ ಶಬ್ದಗಳು ಕೇಳಿಸುತ್ತದೆ. ಮೈಯಲ್ಲಿ ನೀರು ಹರಿದಂತಾಗುತ್ತದೆ. ಊಟ, ನಿದ್ದೆ ಕಡಿಮೆಯಾಗಿದೆ. ಧ್ಯಾನದಿಂದ ಮನಸ್ಸು ಆನಂದವಾಗಿರುತ್ತದೆ. ನಾನು ಎಂದೂ ಕೇಳದ ಅದ್ಭುತ ಮಾತುಗಳು ನನ್ನ ಬಾಯಲ್ಲಿ ಬರುತ್ತದೆ. ಧ್ಯಾನದಿಂದ ಮುಂದೆ ಏನಾಗುತ್ತದೆ ಎಂದು ತಿಳಿದುಬರಲು ಪ್ರಾರಂಭವಾಯಿತು. ಈ ಶಕ್ತಿಯಿಂದ ನನ್ನ ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಬಹಳಷ್ಟು ಉಪಯೋಗವಾಯಿತು. 

 

ಶ್ರೀನಿವಾಸಪುರದಲ್ಲಿ ಧ್ಯಾನ ಕಲಿಸುವ ಭಾಗ್ಯ ದೊರೆಯಿತು. ಧ್ಯಾನದಲ್ಲಿ ಇಂತಹ ಅದ್ಭುತವಾದ ಶಕ್ತಿಯಿದೆ ಎಂದು ತಿಳಿದು ಅಲ್ಲಿನ ಜನರು 5 ಎಕರೆ ಭೂಮಿಯನ್ನು ಕೊಡುತ್ತೇವೆ ಪಿರಮಿಡ್‌ನ್ನು ನಿರ್ಮಿಸಿ ಎಂದು ಆಶ್ವಾಸನೆ ನೀಡಿದ್ದಾರೆ. ಈ ನನ್ನ ಧ್ಯಾನ ಪ್ರಚಾರದ ಪಯಣದಲ್ಲಿ ಆತ್ಮೀಯರಾದ ರಾಮಸ್ವಾಮಿಯವರ ಪರಿಚಯವಾಯಿತು. ಧ್ಯಾನದ ಅದ್ಭುತವಾದ ವಿಚಾರಗಳನ್ನು ತಿಳಿದು ಲೋಕಕಲ್ಯಾಣಕ್ಕಾಗಿ ಅವರ ಜಮೀನಿನಲ್ಲಿ ಪಿರಮಿಡ್‌ನ್ನು ನಿರ್ಮಿಸಿಕೊಡುತ್ತೇನೆ ಎಲ್ಲರಿಗೂ ಧ್ಯಾನವನ್ನು ಮಾಡಿಸಿ ಎಂದು ತಿಳಿಸಿದರು. ರಾಮಸ್ವಾಮಿಯವರು ಮತ್ತು ಅವರ ಮನೆಯವರು ಧ್ಯಾನ ಮಾಡುತ್ತಾ, ಧ್ಯಾನ ಪ್ರಚಾರ ಮಾಡುತ್ತಿದ್ದಾರೆ. ಲೋಕೇಶ್ ಎನ್ನುವವರು ಸಹ ಧ್ಯಾನದ ಮಹತ್ವವನ್ನು ತಿಳಿದು ಅವರ ಆತ್ಮೀಯರೆಲ್ಲ ಸೇರಿ ಮಾಲೂರಿನಲ್ಲಿ ಪಿರಮಿಡ್ ಕಟ್ಟಿಸಿಕೊಡಲು ಒಪ್ಪಿದ್ದಾರೆ. ರೆಡ್ಡಿ ಎಂಬುವವರು ಧ್ಯಾನದ ಮಹತ್ವವನ್ನು ತಿಳಿದು ಪಟ್ಟೆಪಲ್ಲಿಯಲ್ಲಿ ಪಿರಮಿಡ್ ನಿರ್ಮಿಸಲು ಜಾಗವನ್ನು ನೀಡುತ್ತೇವೆ ಎಂದು ತಿಳಿಸಿದರು.

         

ಧ್ಯಾನದಿಂದ ಮನಸ್ಸು ಯಾವಾಗಲೂ ಆನಂದವಾಗಿರುತ್ತದೆ. ಸಕಲ ಜೀವಿಗಳನ್ನು ಸಮಾನವಾಗಿ ಕಾಣುವಂತಾಗಿದೆ. ಕತ್ತಲೆಯಿಂದ ಬೆಳಕಿಗೆ ತಂದಿರುವ ನಮ್ಮ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತಿದ್ದೇನೆ.

 

 

ನರಸಿಂಹಯ್ಯ

ಸೊಣ್ಣಪ್ಪನಟ್ಟಿ

ಮಾಲೂರು ತಾಲ್ಲೂ

Go to top