" ಧ್ಯಾನ ಜೀವನ್ಮುಕ್ತಿಗೆ ದಾರಿ ತೋರಿಸಿತು "

 

 

ನನ್ನ ಹೆಸರು N.M. ಲಕ್ಷ್ಮಣ್, ಮಾಲೂರು ತಾಲ್ಲೂಕಿನ ನಾಗೊಂಡಹಳ್ಳಿ ಗ್ರಾಮದ ನಿವಾಸಿ. ಒಮ್ಮೆ ನಾನು, ನನ್ನ ಶ್ರೀಮತಿ ರೇಣುಕರವರು ರೈಲಿನಲ್ಲಿ ಬೆಂಗಳೂರಿನ ಕಡೆಗೆ ಹೊರಟಾಗ ಅದೇ ಬೋಗಿಯಲ್ಲಿ ನಮಗೆ ನರಸಿಂಹಯ್ಯ ಗುರೂಜಿಯವರು ಕಾಣಿಸಿದರು. ಅವರು ಧ್ಯಾನ ಎಂದರೆ ಏನು, ಧ್ಯಾನ ಮಾಡುವ ರೀತಿ, ಅದರಿಂದ ಪ್ರಯೋಜನವೇನು, ಧ್ಯಾನದಿಂದ ಲಾಭವೇನು ಎಂಬುದರ ಕುರಿತು ತಿಳಿಸಿಕೊಟ್ಟರು. ’‘ಧ್ಯಾನ ಸರ್ವರೋಗನಿವಾರಣಿ, ಧ್ಯಾನದಿಂದ ಕರ್ಮಗಳು ಕಳೆಯುತ್ತವೆ, ಚಿಂತೆ ಜಂಜಾಟಗಳು ಇರುವುದಿಲ್ಲ, ಜೀವನದಲ್ಲಿ ಶಾಂತಿ ಸೌಹರ್ದತೆ, ಭಕ್ತಿ ಶ್ರದ್ಧೆಗಳಿಂದ ಕೂಡಿದ ಜೀವನ ಆನಂದಮಯವಾಗಿರುತ್ತದೆ. ಆದ್ದರಿಂದ, ಇಂದಿನಿಂದ ಧ್ಯಾನ ಮಾಡುವುದನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು. ಅವರ ಮಾತುಗಳು ನನ್ನ ಮನಸ್ಸಿನ ಮೇಲೆ ಪ್ರಭಾವಬೀರಿ ಅಂದಿನಿಂದ ಧ್ಯಾನ ಮಾಡುವುದನ್ನು ಅಭ್ಯಾಸಮಾಡಿಕೊಂಡೆ. ನನಗೆ ಸೈನೆಸ್ ತೊಂದರೆ ಹಾಗೂ ಉಸಿರಾಟದ ತೊಂದರೆ ಇತ್ತು. ಎಲ್ಲವೂ ಕಡಿಮೆಯಾಯಿತು.

 

ಮತ್ತೆ ಗುರೂಜಿಯವರನ್ನು ಭೇಟಿಯಾಗಿ ಧ್ಯಾನ ಪ್ರವಚನ ಕೇಳಿ ಪಿರಮಿಡ್‌ನಲ್ಲಿ ರಾತ್ರಿ ಎಲ್ಲ ಧ್ಯಾನ ಮಾಡಿದೆವು. ಅಂದಿನಿಂದ ನನಗೆ ಧ್ಯಾನದ ಬಗ್ಗೆ ಅಭಿರುಚಿ ಹೆಚ್ಚಾಯಿತು. ನಾನು ಪೌರಾಣಿಕ ನಾಟಕದ ನಿರ್ದೇಶಕ. ನಾನು ನಾಟಕ ಕಲಿಸುವ ಕಡೆಯೆಲ್ಲ ನೀವು ಧ್ಯಾನ ಮಾಡಿ, ಧ್ಯಾನದಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಎಲ್ಲರಿಗೂ ಹೇಳುತ್ತೇನೆ. ಅದರಲ್ಲಿ  ನಮ್ಮ ಆತ್ಮೀಯರಾದ B. ರಾಮಸ್ವಾಮಿಯವರು ಧ್ಯಾನದ ಬಗ್ಗೆ ವಿಶೇಷ ಕಾಳಜಿವಹಿಸಿ ಪ್ರತಿದಿನ ಅವರು ತಮ್ಮ ಮೊಬೈಲ್‌ನಿಂದ ಧ್ಯಾನದ ಬಗ್ಗೆ SMS ಮೂಲಕ ಎಲ್ಲಾ ಆತ್ಮೀಯರಿಗೆ ಸಂದೇಶ ಕಳುಹಿಸುತ್ತಾರೆ. ನಮ್ಮ ಮಾವ ಕೃಷ್ಣಪ್ಪ ಹೊಟ್ಟೆನೋವಿನಿಂದ 20 ವರ್ಷದಿಂದ ಬಳಲುತ್ತಿದ್ದರು. ಪ್ರತಿದಿನ ಎರಡು ಘಂಟೆಗಳ ಕಾಲ ಧ್ಯಾನ ಮಾಡಿ ನೋವಿನಿಂದ ಮುಕ್ತಿ ಪಡೆದರು. ಇಂತಹ ಧ್ಯಾನ ಮಹಿಮೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಬ್ರಹ್ಮರ್ಷಿ ಪತ್ರೀಜಿಯವರು ಕೋಟ್ಯಾಂತರ ಪಿರಮಿಡ್ ಮಾಸ್ಟರ್ಸ್ಗಳ ಹೃದಯದಲ್ಲಿ ನೆಲೆಗೊಂಡು ಧ್ಯಾನ ಜೀವನದ ಹಾದಿಯನ್ನು ತೋರಿದ, ನಮ್ಮ ಜೀವನ್ಮುಕ್ತಿಗೆ ದಾರಿತೋರಿದ ಪೂಜ್ಯ ನರಸಿಂಹಯ್ಯರವರಿಗೆ ನಮಸ್ಕರಿಸುತ್ತೇನೆ.

 

 

N.M. ಲಕ್ಷ್ಮಣ
ನಾಗೊಂಡಹಳ್ಳಿ

+91 90082 63090

Go to top