" ಧ್ಯಾನದಿಂದ ಆತ್ಮಾನುಭವನನ್ನು ಪಡೆದಿದ್ದೇ "

 

 

ನನ್ನ ಹೆಸರು S.ಹೇಮಲತ. ನಾನು ಚಿಕ್ಕಬಳ್ಳಾಪುರದ ಶ್ರೀ ಗಾಯಿತ್ರಿ ಪಿರಮಿಡ್ ಉಚಿತ ಧ್ಯಾನಶಿಕ್ಷಣ ಕೇಂದ್ರದಲ್ಲಿ 6

ವರ್ಷಗಳಿಂದ ಧ್ಯಾನವನ್ನು ಮಾಡುತ್ತಿದ್ದೇನೆ. ನಾನು ಧ್ಯಾನಕ್ಕೆ ಬಂದಕಾರಣವೆಂದರೆ ನನಗೆ ಗರ್ಭಕೋಶದಲ್ಲಿ ಗಡ್ಡೆಗಳಾಗಿ ಡಾಕ್ಟರ್ ಗರ್ಭಕೋಶ ತೆಗೆಯಬೇಕು ಇಲ್ಲದಿದ್ದರೆ ಕ್ಯಾನ್ಸರ್ಗೆ ತಿರುಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ನನಗೆ ಆಪರೇಷನ್ ಮಾಡಿಸಲು ಇಷ್ಟವಿಲ್ಲದುದ್ದರಿಂದ ಸುಮ್ಮನಿದ್ದೆನು. ಆ ಸಮಯದಲ್ಲಿ ನನಗೆ ಧ್ಯಾನದ ಪರಿಚಯವಾಯಿತು. ಧ್ಯಾನವನ್ನು ಬಿಡದೇ ಮಾಡಿದುದ್ದಕ್ಕೆ ನನಗಿದ್ದ ತೊಂದರೆ ನಿವಾರಣೆಯಾಗಿ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ಸಹ ಸುಧಾರಿಸಿತು. ಧ್ಯಾನದಲ್ಲಿ ನನಗೆ ದಿವ್ಯಚಕ್ಷುವಿನ ಉತ್ತೇಜನವಾಯಿತು. ಧ್ಯಾನಕ್ಕೆ ಬಂದಮೇಲೆ ನನ್ನನ್ನು ನಾನು ಅರಿತುಕೊಂಡಿದ್ದೇನೆ.


ಒಂದು ಸಾರಿ ಪತ್ರೀಜಿಯವರು ನಮ್ಮ ಊರಿಗೆ ಬಂದಿದ್ದರು. ಆಗ ಧ್ಯಾನದಲ್ಲಿ ನನಗೊಂದು ಮೆಸೇಜ್ ಬಂದಿತು. ನೀನು ಈಗ ಹಳ್ಳಿಯ ಜನರಿಗೆ ಧ್ಯಾನವನ್ನು ಹೇಳಿಕೊಡಬೇಕು ಎಂದು ಬಂತು. ನಾನು ಈ ಮೆಸೇಜ್ನ್ನು ಪತ್ರಿ ಸಾರ್ಗೆ ಹೇಳಿದಕ್ಕೆ ಸಾರ್ ಒಳ್ಳೆಯ ಕೆಲಸ ಬೇಗ ಮಾಡು ಎಂದರು.
ನಾನು ಹಳ್ಳಿಯಕಡೆಗೆ ಹೋಗಿ ಧ್ಯಾನವನ್ನು ಹೇಳಿಕೊಡೋಣ ಎಂದು ಹೋದರೆ, ಜನರೆಲ್ಲಾ ಸ್ವಲ್ಪವೂ ಸ್ಪಂದಿಸಲಿಲ್ಲ, ಹಾಗೇ ಸ್ವಲ್ಪ ದಿನಗಳಾದ ಮೇಲೆ ನನ್ನ ಪತಿಯವರ ಕೆನರಾ ಬ್ಯಾಂಕ್ನಲ್ಲಿ ಸ್ವಉದ್ಯೋಗ ಮಾಡಲು ಲೋನ್ ತೆಗೆದುಕೊಳ್ಳಲು ಹಳ್ಳಿಗಳಿಂದ, ಪಕ್ಕದ ಊರುಗಳಿಂದ ಸ್ವಸಹಾಯ ಸಂಘದ ಮಹಿಳೆಯರು ಒಂದು ಒಂದು ವಾರ ಅಲ್ಲೇ ವಾಸ್ತವ್ಯವಿರುತ್ತಿದ್ದರು. ಅವರಿಗೆ ತರಬೇತಿ ನೀಡುವ ಕೆಲಸ ಸಿಕ್ಕಿತು. ಕೆನರಾ ಬ್ಯಾಂಕ್ನಲ್ಲಿ ಹಳ್ಳಿಯವರಿಗೆ ತರಬೇತಿ ಕೊಟ್ಟು ಅವರಿಗೆ ಲೋನ್ ಕೊಡುತ್ತಿದ್ದರು. ಆಗ ಅಲ್ಲಿನ ನಿರ್ದೇಶಕರಾದ ಹೊನ್ನಪ್ಪ ಸಾರ್ರವರಿಗೆ ನಾವು ಧ್ಯಾನವನ್ನು ಕಲಿಸುತ್ತೇವೆಯೆಂದು ಮನವಿ ಮಾಡಿಕೊಂಡಿದಕ್ಕೆ, ಅವರು ನಮಗೆ ಅನುಮತಿ ನೀಡಿದರು.
ಸುಮಾರು ಒಂದೂವರೆ ಗಂಟೆಯ ಕಾಲಾವಕಾಶ ನೀಡುತ್ತಾರೆ. ಪ್ರತಿದಿನವೂ ಧ್ಯಾನ, ಸತ್ಸಂಗವಿರುತ್ತದೆ. ವಾರಕ್ಕೊಮ್ಮೆ ಬ್ಯಾಚ್ ಬದಲಾಗುತ್ತದೆ ಪ್ರತಿ ಬ್ಯಾಚ್ನಲ್ಲೂ 50 ರಿಂದ 80 ಜನರಿರುತ್ತಾರೆ. ಹೀಗೆ ನನ್ನ ಧ್ಯಾನ ಪ್ರಚಾರ ಸಾಗುತ್ತಿದೆ. ನನ್ನ ಉಸಿರು ಇರುವವರೆಗೂ ನಾನು ಧ್ಯಾನವನ್ನು ಬಿಡುವುದಿಲ್ಲ. ಇಂತಹ ಧ್ಯಾನವನ್ನು ನಮಗೆ ಕಲಿಸಿಕೊಟ್ಟಂತಹ ನಮ್ಮ ಬ್ರಹ್ಮರ್ಷಿ ಪತ್ರೀಜಿಯವರಿಗೆ ಅನಂತ ಕೋಟಿ ನಮಸ್ಕಾರಗಳು.

 

 

S.ಹೇಮಲತ

ಚಿಕ್ಕಬಳ್ಳಾಪುರ

+91 9686554459

Go to top