" ಧ್ಯಾನದಿಂದ ಸುಲಭವಾಗಿ ಒಳ್ಳೆಯ ಅಂಕಗಳನ್ನು ಪಡೆಯಬಹುದು "

 

 

 

ನನ್ನ ಹೆಸರು ರವೀನ. ಈಗ ನಾನು I P.U.C (Science) ಓದುತ್ತಿದ್ದೇನೆ. ನನ್ನ ತಾಯಿ ಶೈಲಜ.

 

ನನಗೆ ಧ್ಯಾನವನ್ನು ಹೇಳಿಕೊಟ್ಟರು. ನನ್ನ ತಾಯಿ ಹನ್ನೆರಡು ವರ್ಷಗಳಿಂದ ಧ್ಯಾನವನ್ನು ಅಭ್ಯಸಿಸುತ್ತಿದ್ದಾರೆ. ನಾನು ಹತ್ತನೆ ತರಗತಿಯಲ್ಲಿರಬೇಕಾದರೆ ಏಕಾಗ್ರತೆ ಹಾಗು ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಧ್ಯಾನವನ್ನು ಕಲಿತೆ. ನನ್ನ ತಾಯಿ, ಧ್ಯಾನದಿಂದ ಅದ್ಭುತಗಳನ್ನು ನಾವು ಸೃಷ್ಟಿಸಬಹುದೆಂದು ಸದಾ ಹೇಳುತ್ತಿರುತ್ತಾರೆ. ಸುಲಭವಾಗಿ ಒಳ್ಳೆಯ ಅಂಕಗಳನ್ನು ಪಡೆಯಬಹುದು ಎಂದೂ, ಧ್ಯಾನದಿಂದ ‘smart work’ ಮಾಡಬಹುದು ಎಂದು ಹೇಳುತ್ತಿರುತ್ತಾರೆ. ಆದರೆ, ನಾನು 'Hard Work' is the key to success ಎಂದು ನಂಬಿದ್ದೆ. ನನ್ನ ಹತ್ತನೆ ತರಗತಿಯ ICSE ಕಂಪ್ಯೂಟರ್ ಹಾಗು ಕೆಮಿಸ್ಟ್ರಿ ಪರೀಕ್ಷೆಯಲ್ಲಾದ ಅನುಭವ ನಾನು ಎಂದಿಗೂ ಮರೆಯಲಾರೆ. ಅದು March 21st 2014, ಶುಕ್ರವಾರ 9:15a.m ಗೆ ಪರೀಕ್ಷೆಯ ಕೊಠಡಿಯನ್ನು ಪ್ರವೇಶಿಸಿದೆ. 9:15a.m ಯಿಂದ 9:35a.m ವರೆಗೂ ಧ್ಯಾನ ಮಾಡಿದೆ. ಪರೀಕ್ಷೆ ಕೊಠಡಿಯಲ್ಲಿ ಕಣ್ಣು ಮುಚ್ಚಿ ಧ್ಯಾನ ಮಾಡಬಾರದು, ಆದ್ದರಿಂದ ಕಣ್ಣನ್ನು ತೆರದೇ ಧ್ಯಾನ ಮಾಡಿದೆ. 9:45a.m ಗೆ ನನಗೆ ಪ್ರಶ್ನೆ ಪತ್ರಿಕೆಯನ್ನು ಕೊಟ್ಟರು. ಹದಿನೈದು ನಿಮಿಷಗಳ ಕಾಲ ಪ್ರಶ್ನೆಗಳನ್ನು ಓದಿದೆ. ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಾಯಿತು. ಆದರೆ, ಮೂರು equations ನನಗೆ ಬರಲೇ ಇಲ್ಲ. ಮೊದಲು ಗಾಬರಿಗೊಂಡೆ. ನಂತರ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದು. ಇನ್ನು ಅರ್ಥಗಂಟೆ ಉಳಿದಿತ್ತು. ಮತ್ತೆ ಧ್ಯಾನವನ್ನು ಮಾಡಿದೆ. ನನ್ನ ಪೆನ್ ಸುಮ್ಮನೆ ಪೇಪರ್ ಮೇಲೆ ಇಟ್ಟೆ, ಅಷ್ಟೇ. ನನಗೆ ತಿಳಿಯದೆಯೇ ಆ ಮೂರು equations ಗೆ ಸರಿಯಾದ ಉತ್ತರ ಬರೆದುಬಿಟ್ಟೆ. ಇಂಥ ಅನುಭವ ನನಗೆಂದೂ ಆಗಿರಲಿಲ್ಲ. ಆಗಲೆ ನನ್ನ ತಾಯಿ ಹೇಳುವುದು ನಿಜ ಎನಿಸಿತು.

 

ಕಂಪ್ಯೂಟರ್ ಪರೀಕ್ಷೆಯಲ್ಲಿ 20 ಅಂಕಗಳು, ಥಿಯರಿಗೆ ಮತ್ತು ಪ್ರೋಗ್ರಾಂಗೆ 60 ಅಂಕಗಳು ಇದ್ದವು. ನಾನು ಪರೀಕ್ಷೆಗೆ ಸರಿಯಾಗಿ ಓದಿಯೂ ಇರಲಿಲ್ಲ. ನಾನು ಪರೀಕ್ಷೆಗೆ ಮೊದಲು ಅರ್ಧಗಂಟೆ ಧ್ಯಾನ ಮಾಡಿದೆ. ಪರೀಕ್ಷೆಯನ್ನು ಬರೆದೆ. ಎಲ್ಲಾ ಕಂಪ್ಯೂಟರ್ ಪ್ರೋಗ್ರಾಂಗಳಲ್ಲೂ ನನಗೆ ಸಂಶಯಗಳಿದ್ದವು. ಕೆಮಿಸ್ಟ್ರಿ ಪರೀಕ್ಷೆಯ ಹಾಗೆಯೇ ಕಂಪ್ಯೂಟರ್ ಪರೀಕ್ಷೆಯಲ್ಲೂ ತೋಚಿದ ಉತ್ತರಗಳನ್ನು ಬರೆದೆ. ನಾನು 40 ಅಂಕಗಳು ಬರಬಹುದೆಂದು ಕೊಂಡೆ. ಆದರೆ ನನಗೆ 78 ಅಂಕಗಳು ಬಂದವು. ಇದಾದನಂತರ ನನಗೆ ಧ್ಯಾನದಲ್ಲಿ ಅಪಾರ ನಂಬಿಕೆ ಬಂದಿತು. ಈಗಲೂ ನನಗೆ ಸಮಯ ಸಿಕ್ಕಾಗಲೆಲ್ಲ ಧ್ಯಾನ ಮಾಡುತ್ತೇನೆ. ಧ್ಯಾನಶಕ್ತಿಯ ಬಗ್ಗೆ ಮಾತಿನಲ್ಲಿ ಹೇಳಲಾಗುವುದಿಲ್ಲ ಅದನ್ನು ಅನುಭವಿಸಿಯೇ ನೋಡಬೇಕು.

 

ರವೀನ

ಚಿಂತಾಮಣಿ

+91 9945730125

Go to top