" ನನ್ನ ಶರೀರದಲ್ಲಿರುವ ಗೋಲ್ಡನ್ ಕಲರ್ ಸೆಲ್ಸ್ ಕ್ರಿಸ್ಟಲ್ನಂತೆ ಬದಲಾಯಿತು "

 

 


ನನ್ನ ಹೆಸರು ಹಿಮನೀಷ್. ನಾನು ಎಂಟು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ನನಗೀಗ ಹತ್ತು ವರ್ಷ. ಐದನೆಯ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಧ್ಯಾನದಲ್ಲಿ ಬಂದಿರುವ ಕೆಲವು ಮುಖ್ಯವಾದ ಅನುಭವಗಳನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಒಂದು ದಿನ ಧ್ಯಾನದಲ್ಲಿ ನನ್ನ ಆರಾ ನೋಡಿಕೊಂಡೆನು. ನನ್ನ ಆರಾದಲ್ಲಿ ಯಾವ ಹೋಲ್ಸ್ ಇರಲಿಲ್ಲ. ಬೆಳ್ಳುಳ್ಳಿ ತಿನ್ನುವುದು ಬಿಟ್ಟನಂತರ ನನ್ನ ಆರಾ ವಿಸ್ತರಣೆ ಆಯಿತೆಂದು ತಿಳಿದುಕೊಂಡೆನು.

 

ನಾನು ತುಂಬಾ ಆಟಗಳು ಆಡುತ್ತಿರುತ್ತೇನೆ. ತುಂಬಾ ಹೊತ್ತು ಆಡುತ್ತಿದ್ದರೆ, ಅಮ್ಮ ಬೈಯ್ಯುತ್ತಿದ್ದಳು. ಏಕೆ ಆಡಬಾರದು ಎಂದು ಪ್ರಶ್ನಿಸಿದಾಗ, ನನ್ನ ಸೆಲ (ಕಣ) ಹೇಳುತ್ತದೆ "ಅದು ನಿನ್ನನ್ನು ಕಂಟ್ರೋಲ್ ಮಾಡುತ್ತಿದೆ. ಒಂದು ಗಂಟೆ ಆಡಿಕೊಳ್ಳಬಹುದು ಹೆಚ್ಚಾಗಿ ಆಡಬಾರದು" ಎಂದಳು.

 

ಧ್ಯಾನ ಮಾಡುತ್ತಾ ಇದ್ದಾಗ, ನಾನು ನನ್ನ ಆಸ್ಟ್ರಲ್ ಬಾಡಿ ಜೊತೆ ಬೆಂಗಳೂರಿನಲ್ಲಿರುವ ಪಿರಮಿಡ್ಗೆ ಹೋದೆನು. ಅಲ್ಲಿ ಕಿಂಗ್ಸ್ ಛೇಂಬರ್ ಗೆ ಹೋಗಿ ಕುಳಿತೆನು. ಆಸ್ಟ್ರಲ್ ಬಾಡಿಯಿಂದ ಇನ್ನೊಂದು ಬಾಡಿ ಒಂದು, ಹೈದರಾಬಾದ್ನಲ್ಲಿರುವ ಕಡ್ತಾಲ್ ಪಿರಮಿಡ್ಗೆ ಹೋದೆನು. ಅಲ್ಲಿ ಕಿಂಗ್ಸ್ ಛೇಂಬರ್ ನಲ್ಲಿ ಕುಳಿತೆನು. ಅದರಿಂದ ಇನ್ನೊಂದು ಬಾಡಿ ರಿಲೀಸ್ ಆಗಿ ಈಜಿಪ್ಟ್ ಪಿರಮಿಡ್ಗೆ ಹೋದೆನು. ಮೂರು ಶರೀರಗಳೊಂದಿಗೆ ನಾನು ಧ್ಯಾನ ಮಾಡಿದೆನು. ಆಗ ಎನರ್ಜಿ ಶರೀರದೊಳಗೆ ತುಂಬಿ ಹರಿಯುತ್ತಿತ್ತು. ಅದು ಎಲ್ಲಿಗೆ ಹೋಗುತ್ತಿದೆ ಎಂದು ನೋಡಿದರೆ, ಅದು ಎಲ್ಲಾ ಪಿರಮಿಡ್ಗಳಿಗೆ ಹೋಗುತ್ತಿದೆ ಎಂದು ತಿಳಿದುಬಂತು.

 

ಶಿವರಾತ್ರಿಯ ದಿನ ಧ್ಯಾನದಲ್ಲಿ ಮಹಾವತಾರ್ ಬಾಬಾಜಿಯವರು ಅರ್ಥ, ಶಿವ ಅರ್ಥ ಶರೀರದಲ್ಲಿ ಕಾಣಿಸಿದರು. ಅವರ ಮೂರನೆಯ ಕಣ್ಣು ದೊಡ್ಡದಾಗಿ ಕಾಣಿಸಿತು. ನಂತರ ದಿನ ಧ್ಯಾನದಲ್ಲಿ ಕುಳಿತಾಗ ನನ್ನ ಸೆಲ್ಸ್ ಗೋಲ್ಡನ್ ಕಲರ್ನಲ್ಲಿರುವುದನ್ನು ನೋಡಿಕೊಂಡೆನು. ನಾನು ಸೆಂಟ್ರಲ್ ಸೆಲ್ಅನ್ನು ನೋಡಿಕೊಂಡೆನು. ಅದು ಮಾಮೂಲು ಕಣಕ್ಕಿಂತ ದೊಡ್ಡದಾಗಿತ್ತು. ನಂತರ DNA ನೋಡಿಕೊಂಡೆನು. ಅದು 12 ಎಳೆಗಳಿದ್ದು ಗೋಲ್ಡನ್ ಕಲರ್ನಲ್ಲಿತ್ತು.

 

ನಾನು ನನ್ನ overself ಗೆ connect ಆದೆನು. ಅಲ್ಲಿಂದ ನೋಡುತ್ತಾ, ಎಲ್ಲಾ ನಾನೇ, ನಾನೇ ಎಲ್ಲಾ ಅನಿಸಿತು. ನನ್ನ overself ಯಾರು ಎಂದು ಕೇಳಿದೆನು ಮಹಾವತಾರ್ ಬಾಬಾ ಎಂದು ಹೇಳಿತು. ಅಜ್ಜಿಗೆ, ಅಮ್ಮನಿಗೆ ಮತ್ತು ನನಗೆ overself ಮಹಾವತಾರ್ ಬಾಬಾಜಿಯೇ ಎಂದು ಬಂದಿತು.

 

ನನ್ನ ಹುಟ್ಟಿನ ದಿನದಂದು ಧ್ಯಾನ ಮಾಡಿದಾಗ, ಪತ್ರಿಸಾರ್ ಲೋಕಕ್ಕೆ ಹೋದೆನು. ಅಲ್ಲಿ ಸಾರ್ ಧ್ಯಾನ ಮಾಡುತ್ತಿದ್ದರು. ಆ ಲೋಕ ತುಂಬಾ ಚೆನ್ನಾಗಿತ್ತು. ಅಲ್ಲೆಲ್ಲಾ ಹಸಿರಾಗಿತ್ತು. ಹಸಿರನ ಬೆಳಕು ಇದ್ದಂತಿತ್ತು. ಅಲ್ಲಲ್ಲಿ ಪಿರಮಿಡ್ಸ್ ಕಾಣಿಸುತ್ತಿತ್ತು. ಅಲ್ಲಿ ಕೆಲವರು ಧ್ಯಾನ ಮಾಡುತ್ತಿದ್ದರು. ಅವರೆಲ್ಲಾ ಮೇಲಿನಿಂದ ನೋಡಿದರೆ ಪಿರಮಿಡ್ ಆಕಾರದಲ್ಲಿ ಕಾಣುತ್ತಿದ್ದಾರೆ. ನಂತರ ಹಿಂದೆ ಜಲಪಾತ ನದಿ ಇದೆ. ಮೇಲಿನಿಂದ ನೀರಿನೊಳಗೆ ಧುಮಿಕಿದೆನು. ಆ ನದಿಯಲ್ಲಿ ಬಿದ್ದಾಕ್ಷಣ ಸ್ವಿಮ್ಮಿಂಗ್ ವೇಗವಾಗಿ ಮಾಡಲಾಯಿತು. ಅಲ್ಲಿ ವಾಟರ್ ಕ್ರಿಸ್ಟಲ್ ಕ್ಲಿಯರ್ ಆಗಿತ್ತು.

 

ನಂತರ ಸಾರ್ ಅವರ ಬಳಿಗೆ ಬಂದೆನು. ಅವರನ್ನು ಮಾತನಾಡೋಣ ಅಂದುಕೊಂಡರೆ, ಸಾರ್ ಡಿಸ್ಟರ್ಬ್ ಮಾಡಬೇಡ ಎಂದರು. ನಂತರ ಅವರ ಬಳಿ ಧ್ಯಾನ ಮಾಡಿದರೆ ತುಂಬಾ ಎನರ್ಜೀಸ್ ನನ್ನಲ್ಲಿ ತುಂಬಿ ಹೋಗಿ ಕೆಳಗೆ ಬೀಳುತ್ತಿವೆ. ಅಷ್ಟು ಎನರ್ಜೀಸ್ ಬರುತ್ತಿತ್ತು.

 

ಬುದ್ಧಪೂರ್ಣಿಮೆಯ ದಿನ ಪತ್ರಿಸಾರ್ ಸ್ಪೀಚ್ ಕೊಡುತ್ತಿದ್ದಾಗ ನಾನು ಸಾರ್ರವರನ್ನೇ ನೋಡಿದೆ. ಆಗ ಅವರ ಆರಾ ಕಾಣಿಸಿತು. ಅವರ ಆರಾದ ಎನರ್ಜಿ ಅಲ್ಲಿದ್ದವರಿಗೆಲ್ಲಾ ಹರಡಿತು. ಇದು ನನ್ನ ತೆರೆದ ಕಣ್ಣಿಗೆ ಕಾಣಿಸಿತ್ತು.

 

ಬುದ್ಧಪೌರ್ಣಮಿ ನಂತರ ನನ್ನ ಶರೀರದಲ್ಲಿರುವ ಗೋಲ್ಡನ್ ಕಲರ್ ನಲ್ಲಿರುವ ಸೆಲ್ಸ್ ಕ್ರಿಸ್ಟಲ್ನಂತೆ ಬದಲಾಯಿತು. ಅದನ್ನು ನಾನು ನೋಡಿಕೊಂಡೆನು. ಅಮ್ಮನಲ್ಲಿ ಸೆಲ್ಸ್ ಗಳೆಲ್ಲಾ ಕ್ರಿಸ್ಟಲ್ಗಳಂತೆ ಬದಲಾಗುವುದು ನೋಡಿದೆನು.

 

ನಾನು ಧ್ಯಾನದಲ್ಲಿ ಅಮ್ಮನ ಗರ್ಭದೊಳಗೆ ಹೋಗಿ ನೋಡಿದೆನು. ನನಗೆ ಒಂದು ಡೌಟ್ ಇತ್ತು ಮಕ್ಕಳು ಇಲ್ಲಿ ಹೇಗೆ ಇರುತ್ತಾರೆ ಎಂದು. ನನಗೆ ಗರ್ಭದೊಳಗೆ ಹೋದಾಗ ತಿಳಿಯಿತು. ತುಂಬಾ ತಣ್ಣಗಿದೆ, A.Cಯಲ್ಲಿ ಇದ್ದಂತೆ. ಅಲ್ಲಿ ಎನರ್ಜಿಯ ತರಂಗಗಳು ಬರುತ್ತಿದೆ. ಆ ಶಕ್ತಿಯ ತರಂಗಗಳಿಂದ ಒಂದು ನೀಲಿಯ ಕಿರಣ ಬೀಳುತ್ತಿತ್ತು. ಆ ಎನರ್ಜಿಗೆ ನನಗೆ ನಿದ್ರೆಯದ್ದ ಹಾಗೆ ಮತ್ತು ಬರುತ್ತಿತ್ತು. ಅಲ್ಲಿ ಹಾಯಾಗಿತ್ತು.

 

ಒಂದು ದಿನ ಅಮ್ಮ ಪ್ರಕೃತಿ ನೋಡು ಯಾವಾಗಲೂ T.V ನೋಡುತ್ತಿರುತ್ತೀಯಾ ಎಂದಳು. ಪ್ರಕೃತಿಯನ್ನು ಗಮನಿಸು ಏನು ಬರುತ್ತದೋ ಕೇಳು ಎಂದಳು. ಆಗ ನಾನು ಮನೆಯ ಹೊರಗೆ ಬಂದು ಕುಳಿತು ಪ್ರಕೃತಿಯನ್ನು ನೋಡುತ್ತಿದ್ದೆನು. ಚಂದಮಾಮನನ್ನು ನೋಡು ಎಂದಳು ಅಮ್ಮ. ನನಗೆ ಪೂರ್ಣಚಂದ್ರ ಕಾಣಿಸುತ್ತಿದ್ದಾನೆ ಎಂದೆ. ಆದರೆ, ಅಮ್ಮ ಅರ್ಥಚಂದ್ರನಂತೆ ಇದೆಯಲ್ಲಾ ಎಂದಳು. ನಕ್ಷತ್ರಗಳೆಲ್ಲಾ ಎಷ್ಟೋ ಹತ್ತಿರವಾಗಿ, ದೊಡ್ಡದಾಗಿ ಕಾಣಿಸುತ್ತಿತ್ತು. ನಂತರ ಮರಗಳನ್ನು ನೋಡಿದೆ. ಅವುಗಳ ಆರಾ ಎಷ್ಟು ವರ್ಷಗಳಿಂದ ಇದೆ ಎಂಬಂತೆ ಕಾಣಿಸಿತು. “ಹೌದು ಎಲ್ಲದಕ್ಕೂ ಆರಾ ಇರುತ್ತದೆ. ಕಟ್ಟಡಗಳಿಗೆ, ಕಲ್ಲುಗಳಿಗೆ, ಎಲ್ಲಕ್ಕೂ ಆರಾ ಇರುತ್ತದೆ” ಎಂದು ಅಮ್ಮ ಹೇಳಿದಳು. ಆಗ ಬಿಲ್ಡಿಂಗ್ಗಳನ್ನು ಗಮನಿಸಿದೆ. ಎಲ್ಲಕ್ಕೂ ಆರಾ ಇತ್ತು. ಆದರೆ ಕೆಲವಕ್ಕೆ ಕಪ್ಪು ಬಣ್ಣದ ಆರಾ ಇತ್ತು. ಆದರೆ ಧ್ಯಾನ ಮಾಡುವವರು ಇರುವ ಬಿಲ್ಡಿಂಗ್ಸ್ಗೆ ಆರಾ ತುಂಬಾ ಬ್ರೈಟ್ ಆಗಿರುತ್ತದೆ.

 

ಒಂದು ದಿನರಾತ್ರಿ ನಿದ್ರೆ ಮಾಡುತ್ತಿದ್ದಾಗ ಕನಸು ಬಂದಿತು. ನನ್ನ ಶರೀರವನ್ನು ನಾನು ನೋಡಿಕೊಂಡೆನು. ತುಂಬಾ ಎಚ್ಚರ (awareness) ಇತ್ತು. ಮಲಗಿದ್ದಲ್ಲಿಯೇ ನಾನು ಮೇಲಕ್ಕೆ ಎದ್ದಂತೆ ಅನಿಸಿತು. ಆದರೆ, ನನ್ನ ಹಾಸಿಗೆಯಿಂದ ಎದ್ದು ಬಾಲ್ಕನಿಗೆ ಹೋಗಿ, ಅಲ್ಲಿಂದ ಧುಮುಕುವುದು ಎಲ್ಲಾ ಎಚ್ಚರ ಸ್ಥಿತಿಯಲ್ಲಿ ಮಾಡುತ್ತಿದ್ದೆನು. Iron ಸೂಟ್ ಹಾಕಿಕೊಂಡು ಎಗರಿ ಹೋದೆನು. ಇದನ್ನು ಬೆಳಗ್ಗೆ ಅಮ್ಮನಿಗೆ ಹೇಳಿದರೆ, ಅದು ಕನಸಲ್ಲಿ out of body experience ಎಂದು ಹೇಳಿದಳು. ನಿನಗೆ iron man ಇಷ್ಟವಲ್ಲವೇ ಹಾಗೆಯೇ ಕಾಣಿಸಿದೆ. ನೀನು ಅವುಗಳ ಬಗ್ಗೆ ತುಂಬಾ ತಿಳಿದುಕೊಳ್ಳಬಹುದು ಎಂದು ಹೇಳಿದಳು.

 

ಮಾರನೆಯದಿನ ನಾನು ನಿದ್ರೆ ಮಾಡುವಾಗ ಏನಾದರೂ ನೋಡಬೇಕು ಎಂದುಕೊಂಡು ಮಲಗಿಕೊಂಡೆನು. ಹಾಗೆಯೇ ನನ್ನ ಶರೀರವನ್ನು ನೋಡಿಕೊಳ್ಳುತ್ತಾ ಎಚ್ಚರ ಸ್ಥಿತಿಯಲ್ಲಿದ್ದೆನು. ಪ್ರತಿಯೊಂದು ಗಮನಿಸುತ್ತಾ. ನನ್ನ ಸೂಕ್ಷ್ಮಶರೀರ ನನ್ನ ಹಾಸಿಗೆಯಿಂದ ಮೆಟ್ಟಿಲಿಳಿಯುವುದು. ಅಲ್ಲಿ ಎಲ್ಲವೂ ಬೇರೆ ಆಕಾರದಲ್ಲಿ ಇರುವುದೆಲ್ಲಾ ನನಗೆ ಪಿರಮಿಡ್ ಆಕಾರದಲ್ಲಿ ಕಾಣುತ್ತಿದೆ. ಬಾತ್ರೂಮ್ನಲ್ಲಿ ಟಬ್, ಟ್ಯಾಪ್ಸ್ (ನಲ್ಲಿಗಳು), ನಲ್ಲಿಯಲ್ಲಿ ನೀರು ಕೂಡಾ ಪಿರಮಿಡ್ ಆಕಾರದಲ್ಲ್ಲಿ drops ಬೀಳುತ್ತಿದೆ. ನೆಲದಲ್ಲಿ ಇಂಚು ಇಂಚಿಗೂ ಪಿರಮಿಡ್ ಇದೆ. ಹಾಗೆ ಹೊರಗಡೆ ನೋಡಿದರೆ, ಮರದ ಎಲೆ, ನಕ್ಷತ್ರ, ಚಂದ್ರ ಎಲ್ಲಾ ಕೂಡಾ ಪಿರಮಿಡ್ ಆಕಾರದಲ್ಲೇ ಇದೆ. ಹೀಗೆ ಮಾರನೆಯ ದಿನವೂ ಕೂಡಾ out of body experience ಆಯಿತು.

 

ಇದೆಲ್ಲಾ ಅಮ್ಮನಿಗೆ ಹೇಳಿದರೆ, ನೀನು ಹಿಂದಿನ ಜನ್ಮದಲ್ಲಿ ಎಷ್ಟೋ ಸಾಧನೆ ಮಾಡಿದ್ದೀಯಾ ಆದ್ದರಿಂದ ನಿನಗೆ ಇಷ್ಟು awareness ಬಂದಿದೆ ಎಂದು ಹೇಳಿದಳು. ಆಗ ನಾನು ನನ್ನ ಹಿಂದಿನ ಜನ್ಮ ನೋಡಿಕೊಂಡರೆ, ಆ ಜನ್ಮದಲ್ಲಿ ಹದಿನೈದನೆಯ ವರ್ಷದಲ್ಲಿ ನನಗೆ ಆಕ್ಸಿಡೆಂಟ್ ಆಗಿ ಕಣ್ಣು ಹೋಗಿತ್ತು. ಕಣ್ಣು ಇಲ್ಲದಿರುವುದರಿಂದ ನನಗೆ awareness ಎನ್ನುವುದು ಆ ಜನ್ಮದಲ್ಲೇ ಬಂದಿತ್ತು. ನಂತರ ಇಪ್ಪತ್ತನೆಯ ವಯಸ್ಸಿನಲ್ಲಿ ಧ್ಯಾನಕ್ಕೆ ಬಂದೆನು. 22ನೆಯ ವಯಸ್ಸಿನಲ್ಲಿ ಧ್ಯಾನ ಪ್ರಚಾರ ಮಾಡಿದೆನು. 93ನೆಯ ವಯಸ್ಸಿನಲ್ಲಿದ್ದಾಗ ದೇಹ ತ್ಯಾಗ ಮಾಡಿದೆನು. ಶರೀರ ತ್ಯಜಿಸಿದ ಆತ್ಮಗಳು ಎಲ್ಲವೂ assemble ಆಗುವ ಜಾಗಕ್ಕೆ ಹೋದೆನು. ಅಲ್ಲಿ ಪತ್ರಿಸಾರ್ ನನ್ನನ್ನು ಬೇಗನೆ ಕಳುಹಿಸಿಬಿಟ್ಟರು. ಶರೀರ ಸಿದ್ಧವಾಗಿದೆ, ನೀನು ಒಬ್ಬ ಮಾಸ್ಟರ್ ಅಗಿದ್ದೀಯಾ, ಆದ್ದರಿಂದ ಒಬ್ಬ ಮಾಸ್ಟರ್ ಬಳಿಗೆ ಹೋಗಬೇಕೆಂದು ಕಳುಹಿಸಿದರು. ಆಗ ನಾನು ನಮ್ಮ ಅಮ್ಮನ ಗರ್ಭದಿಂದ ಈ ಜನ್ಮ ತೆಗೆದುಕೊಂಡೆ.

ನಂತರ ನಾನು ಇನ್ನೊಂದು ಹಿಂದಿನ ಜನ್ಮ ನೋಡಿಕೊಂಡೆನು. ಆಗ South America ದಲ್ಲಿದ್ದೆನು. ನನ್ನ ಹೆಸರು Mark Twain ಆಗ ನಾನು ಕವಿ ಮತ್ತು ಬರಹಗಾರನಾಗಿದ್ದೆನು. ಆಗ ನಾನು ಪತ್ರಿ ಸಾರ್ರವರನ್ನು ಭೇಟಿಮಾಡಿದ್ದೆನು. ಆಗ ಅವರು ಬೆಂಜಮಿನ್ ಫ್ರಾಂಕ್ಲಿನ್ರಾಗಿದ್ದರು.

 

ಆ ಜನ್ಮದಲ್ಲಿ ನಾನು ಒಂಬತ್ತು ವರ್ಷಕ್ಕೆ ಧ್ಯಾನದಲ್ಲಿ ಇದ್ದೆನು. ಹೀಗೆ ನಾನು 16 ಜನ್ಮಗಳು ಧ್ಯಾನದಲ್ಲಿದ್ದುದ್ದೇ ಆಗಿದೆ. ಇದು 17ನೇ ಜನ್ಮ ನನ್ನದು. Mark Twain ಆಗಿದ್ದಾಗ, ನಾನು ಆತ್ಮಗಳೊಂದಿಗೆ ಮಾತನಾಡುತ್ತಿದ್ದೆನು. ಮರಣದ ನಂತರ ಹೇಗಿರುತ್ತದೊ ಅವುಗಳ ಬಗ್ಗೆ ತಿಳಿದುಕೊಂಡವನು ನಾನು. "The way how it feels after death" book ಬರೆದಿದ್ದೆನು. ಹೀಗೆ ನಾನು 2 past life ಬಗ್ಗೆ ತಿಳಿದುಕೊಂಡೆನು.

 

ಗುರುಪೂರ್ಣಿಮೆ ದಿನ ರಾತ್ರಿಯಲ್ಲಿ ಎದ್ದರೆ, ಆಗ ಪತ್ರಿಸಾರ್ ಕಾಣಿಸಿದರು. ಎಲ್ಲಾ ಕಡೆಯೂ ಅವರೇ ಇದ್ದಾರೆ. ಪ್ರತಿಯೊಂದರಲ್ಲೂ ಅವರೇ ಕಾಣುತ್ತಿದ್ದಾರೆ. ಹೊರಗೆ ಎಲೆಗಳಲ್ಲಿ ಹೀಗೆ ತೆರೆದ ಕಣ್ಣಿನಲ್ಲೇ ನೋಡಿದೆನು. ಹೀಗೆ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಎಷ್ಟೋ ಲೋಕಗಳನ್ನು ಕೂಡಾ ನಾನು ನೋಡಿದೆನು. ಇದನ್ನು ನಾನು ಅಮ್ಮನೊಂದಿಗೆ ಹಂಚಿಕೊಳ್ಳುತ್ತಾ ನನ್ನ ಅನುಭವಗಳನ್ನು ‘ಧ್ಯಾನ ಕಸ್ತೂರಿ’ಗೆ ಕಳುಹಿಸುತ್ತಿರುವುದು ನನಗೆ ತುಂಬಾ ಸಂತೋಷದ ವಿಷಯವಾಗಿದೆ. ಮುಖ್ಯವಾಗಿ ನಮ್ಮ great, great ಮಾಸ್ಟರ್ ಆದ ಪತ್ರೀಜಿ ಸಾರ್ ಗೆ ನನ್ನ ಧನ್ಯವಾದಗಳು.

 

 

ಹಿಮನೀಷ್
ಬೆಂಗಳೂರು
+91 98861 22977

Go to top