" ಧ್ಯಾನ ಪ್ರಚಾರದಿಂದ ಅಗಾಧವಾದ ಶಕ್ತಿ, ನೆಮ್ಮದಿ ಮತ್ತು

ಶಾಂತಿ ದೊರಕಿದೆ "

 

 

ನನ್ನ ಹೆಸರು ಶ್ರೀನಿವಾಸ್ ಕೆ. ನಾನು ದಾವಣಗೆರೆ ನಿವಾಸಿ. ಪ್ರಸ್ತುತ, ಬೀದರ್‌ನ ಸ್ವಯಂ ಸೇವಾ ಸಂಸ್ಥೆ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. 2013ರ ಮೇ 23ರಂದು ಬೆಂಗಳೂರಿನ ಬಳಿಯ ಪಿರಮಿಡ್ ವ್ಯಾಲಿಗೆ ಭೇಟಿಕೊಟ್ಟೆನು. ಅಲ್ಲಿ ಧ್ಯಾನ ಮಾಡುವ ವಿಧಾನ ಹೇಳಿಕೊಟ್ಟರು. ಪಿರಮಿಡ್ ಒಳಗಿರುವ ಕಿಂಗ್ಸ್ ಚೇಂಬರ್‌ನಲ್ಲಿ ಕುಳಿತು ಧ್ಯಾನ ಮಾಡಿದಾಗ ಆದಂತಹ ಅನುಭವ ಅದ್ಭುತ. ಸುಮಾರು 1 ಗಂಟೆಯ ಕಾಲ ಧ್ಯಾನ ಮಾಡುವಾಗ ನನಗೆ ಗೊತ್ತಿಲ್ಲದ ಹಾಗೆ ನನ್ನ ಶರೀರ ಉಯ್ಯಾಲೆಯಂತೆ ತೂಗುತ್ತಿತ್ತು. ಇಂತಹ ಅನುಭವ ಪಡೆದ ನಾನು ಇಷ್ಟು ಶಕ್ತಿ ಧ್ಯಾನದಲ್ಲಿದೆ ಎಂದು ಅರಿತು ಅಂದಿನಿಂದ ಪ್ರತಿದಿನ 2 ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದೇನೆ.


ಧ್ಯಾನದಿಂದ ಆದ ಬದಲಾವಣೆ: ಮಧ್ಯಪಾನ, ಮಾಂಸಾಹಾರ ತ್ಯಜಿಸಿದ್ದೇನೆ. ನಕರಾತ್ಮಕ ಯೋಚನೆಗಳು ಬರುವುದಿಲ್ಲ. ಭವಿಷ್ಯದ ಬಗ್ಗೆ ತುಂಬಾ ಚಿಂತಿಸುವುದಿಲ್ಲ. ಧ್ಯಾನದಿಂದ ಶಾಂತಿ, ನೆಮ್ಮದಿ ದೊರೆತಿದೆ. ನಾನು ಶಾಲೆಗಳಿಗೆ ಹೋಗಿ ಧ್ಯಾನ ಮಾಡಿಸುತ್ತೇನೆ. ನನಗೆ ಪರಿಚಯ ಇರುವವರಿಗೆ ಧ್ಯಾನ ಮಾಡಿಸುತ್ತೇನೆ. ನಾನು ಬೇರೆಯವರಿಗೆ ಧ್ಯಾನ ಹೇಳಿಕೊಡುವಾಗ ಅಗಾಧವಾದ ಶಕ್ತಿಯ ಅನುಭವ ಆಗುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಈ ಆನಾಪಾನಸತಿ ಧ್ಯಾನವನ್ನು ಮಾಡುತ್ತೇನೆ, ಹೇಳಿಕೊಡುತ್ತೇನೆ. ಇಂಥಹ ಅದ್ಭುತವಾದ ಧ್ಯಾನ ವಿಧಾನ ಹೇಳಿಕೊಟ್ಟ ಪತ್ರಿ ಸರ್ ಅವರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ.


***


ನನ್ನ ಹೆಸರು ಭವಾನಿ ಎಸ್. ನಾನು 2013 ಮೇ 23ರಂದು ನನ್ನ ಆತ್ಮ ಸಂಗಾತಿಯಾದ ಶ್ರೀನಿವಾಸ್‌ರೊಡನೆ ಪಿರ‍್ಯಾಮಿಡ್ ವ್ಯಾಲಿಗೆ ಭೇಟಿಕೊಟ್ಟೆನು. ಅಲ್ಲಿ ಧ್ಯಾನ ಮಾಡುವ ವಿಧಾನ ಹೇಳಿಕೊಟ್ಟರು. ಪಿರ‍್ಯಾಮಿಡ್ ಒಳಗೆ ಕಿಂಗ್ಸ್ ಚೇಂಬರ್‌ನಲ್ಲಿ ಕುಳಿತು ಧ್ಯಾನ ಮಾಡಿದೆನು. ಧ್ಯಾನ ಮಾಡುವಾಗ ಆದ ಅನುಭವ ಅದ್ಭುತ. ಸುಮಾರು 1 ಗಂಟೆಯ ಕಾಲ ಧ್ಯಾನ ಮಾಡಿದೆನು. ಧ್ಯಾನ ಮಾಡುವಾಗ ಶರೀರ ತೇಲಾಡಿದ ಹಾಗೆ ಅನುಭವವಾಯಿತು. ಇಂತಹ ಅನುಭವ ನನಗೆ ಇದೇ ಮೊದಲ ಸಲ. ಧ್ಯಾನದಲ್ಲಿ ಮಹತ್ತರವಾದ ಶಕ್ತಿ ಇದೆ ಎಂದು ಅರಿತೆನು. ಅಂದಿನಿಂದ ಧ್ಯಾನ ದಿನಚರಿಯಾಗಿದೆ. 27/09/2013ರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಧ್ಯಾನ ಮಾಡಲು ಕುಳಿತೆನು. ಧ್ಯಾನಕ್ಕೆ ಕುಳಿತಾಗ ಮೊದಲು ದೇವರ ವಿಗ್ರಹ ನಂತರ ಯಾವುದೊ ಸ್ಥಳಕ್ಕೆ ಹೋದ ಅನುಭವವಾಯಿತು. ಅನಂತರ ಒಬ್ಬ ಋಷಿ ಮುನಿಯವರು ಕಾಣಿಸಿದರು. ನನಗೆ ತಿಳಿಹೇಳಿದರು ನೀವು ಆಹಾರ ಸೇವನೆ ಮಾಡುವಾಗ "ಓಂ ಶುದ್ದೋದಕಾಯ ನಮಃ" ಎಂದು ಹೇಳಬೇಕು ಅಂದರು. ಅಂದಿನಿಂದ ಇನ್ನೂ ಉತ್ಸಾಹದಿಂದ ಧ್ಯಾನ ಮಾಡುತ್ತಾ ಬೇರೆಯವರಿಗೂ ಧ್ಯಾನ ಹೇಳಿಕೊಡುತ್ತಾ ಇದ್ದೇನೆ.


ನನ್ನ ಬಳಿ ಧ್ಯಾನ ಕಲಿತ ಮಿತ್ರರು, ನೀವು ಧ್ಯಾನ ಮಾಡಿಸಲು ಬನ್ನಿ. ನಮಗೆ ಈ ಆನಾಪಾನಸತಿ ಧ್ಯಾನದಿಂದ ಜೀವನ ಬದಲಾವಣೆಯಾಗುತ್ತಾ ಇದೆ ಎಂದು ಹೇಳಿದರು. 14/11/2013 ಬೆಳಿಗ್ಗೆ 5.30ಕ್ಕೆ ಧ್ಯಾನ ಮಾಡುವಾಗ ನನಗೆ ಯಾವುದೋ ಒಂದು ಲೋಕಕ್ಕೆ ಹೋದ ಅನುಭವವಾಯಿತು. ಮೊದಲಿಗೆ ಕತ್ತಲು ಕಾಣಿಸಿತು. ಆಮೇಲೆ ಬೆಳಕಿನ ಹಾದಿಗೆ ಹೋದೆ. ನಂತರ ಆ ಬೆಳಕಿನ ಕಿರಣಗಳು ಕಾಣಿಸಿತು. ನಂತರ ಯಥಾ ಪ್ರಕಾರ ಗುರುಗಳು ಕಾಣಿಸಿದರು. ನಾನು ಅವರಿಗೆ ನಿಮ್ಮ ಹೆಸರೇನು ಎಂದು ಕೇಳಿದೆನು. ಸಚ್ಚಿದಾನಂದ ಸ್ವಾಮಿ ಎಂದು ಹೇಳಿದರು. ನಾನು ಮತ್ತೆ ಅವರಿಗೆ ನಾನು ಬಂದ ಜೀವನದ ಉದ್ದೇಶ ಏನು? ಎಂದು ಪ್ರಶ್ನೆ ಕೇಳಿದೆನು. ಆಗ ಅವರು ಬುದ್ಧನ ತತ್ವಗಳು ಪುಸ್ತಕ ಓದಿ ಎಂದರು. ನಂತರ ಕಣ್ಮರೆಯಾದರು. ನಾನು ಕೂಡಾ ದಿನಾಲೂ 2-3 ಗಂಟೆಗಳ ಕಾಲ ಧ್ಯಾನ ಮಾಡುತ್ತೇನೆ. ನಾನು ಮಾಂಸಾಹಾರ ತ್ಯಜಿಸಿದ್ದೇನೆ ಮತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಇಂಥ ಅದ್ಭುತವಾದ ಧ್ಯಾನವನ್ನು ಹೇಳಿಕೊಟ್ಟ ಪತ್ರಿ ಸರ್ ಅವರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ವಂದನೆಗಳು!

 

 

ಶ್ರೀನಿವಾಸ ಕೆ: +91 9663373946

ಭವಾನಿ ಎಸ್: +91 8105051790

Go to top