" ವೈಭೋಗ ಮತ್ತು ವೈರಾಗ್ಯ ಸ್ಥಿತಿಯ ಬಗ್ಗೆ ಗೌತಮ ಬುದ್ಧರದಿವ್ಯ ಸಂದೇಶ " 

 

 

 

ನನ್ನ ಹೆಸರು ಲೋಕೇಶ್, ಚಿಕ್ಕಬಳ್ಳಾಪುರದ ನಿವಾಸಿ. ಒಂದು ದಿನ ಧ್ಯಾನದಲ್ಲಿದ್ದಾಗ, ಗೌತಮ ಬುದ್ಧರಿಂದ “ವೈರಾಗ್ಯಸ್ಥಿತಿ ಮತ್ತು ಶಕ್ತಿಯನ್ನು ಕೇಳು” ಎಂಬ ಸಂದೇಶ ಬಂತು. ಅದರಂತೆಯೇ ಧ್ಯಾನದಲ್ಲಿ ಕುಳಿತ ಮುವ್ವತ್ತು ನಿಮಿಷಗಳ ನಂತರ, ಗೌತಮ ಬುದ್ಧ, ಸಹಸ್ರಾರದಿಂದ ಶಕ್ತಿಯನ್ನು ಕೇಳು ಎಂಬ ಸಂದೇಶ ಕೊಟ್ಟರು. ಶಕ್ತಿಯನ್ನು ಕೇಳಿದ್ದಕ್ಕೆ ತಮ್ಮ ಸಹಸ್ರ ಕಮಲದಿಂದ ಶಕ್ತಿಯನ್ನು ಕೊಟ್ಟು, ಅವರ ಆತ್ಮದಿಂದ ಶಕ್ತಿಯನ್ನು ಕೊಟ್ಟರು. ನಂತರ ಚಾನಲಿಂಗ್ ಮೂಲಕ 7 ಆತ್ಮಸ್ಥಿತಿಗಳ ಬಗ್ಗೆ ಸಂದೇಶ ನೀಡಿದರು. ಶೈಶವಾತ್ಮ, ಬಾಲಾತ್ಮ, ಯುವಾತ್ಮ, ಪ್ರೌಢಾತ್ಮ, ವೃದ್ಧಾತ್ಮ, ವಿಮುಕ್ತಾತ್ಮ, ಪರಮಾತ್ಮಸ್ಥಿತಿ. ಅದರಲ್ಲಿ 5 ಪ್ರಾಪಂಚಿಕ, ಎರಡು ಆಧ್ಯಾತ್ಮಿಕ ಸ್ಥಿತಿ. ಆದ್ದರಿಂದ, ವಿಮುಕ್ತಾತ್ಮ ಸ್ಥಿತಿಯಲ್ಲಿರುವವರು ಪರಮಾತ್ಮ ಸ್ಥಿತಿಯವರೊಡನೆ ಬೆರೆತಾಗ ಅವರಿಂದ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳಬಹುದು.

 

ಐದು ವಿಧವಾದ ಪ್ರಾಪಂಚಿಕತೆಯ ಆತ್ಮಸ್ಥಿತಿಗಳಿರುತ್ತವೆ. ನಾನು ಕೂಡಾ ಪ್ರಾಪಂಚಿಕತೆಯಲ್ಲಿ ಅರಮನೆಯಲ್ಲಿ ವೈಭೋಗದ ಜೀವನ ನಡೆಸುತ್ತಿದ್ದೆ. ಆದರೆ, ನಾನು ಕಂಡಂತಹ ಮೂರು ದೃಶ್ಯಗಳು ವಯಸ್ಸಾದ ವೃದ್ಧ, ಕುಷ್ಠರೋಗಿ, ಒಂದು ಶವದ ಕಾರಣವಾಗಿ ನನಗೆ ವೈರಾಗ್ಯ ಬಂತು. ಅರಮನೆ ಬಿಟ್ಟು ಕಾಡಿಗೆ ಹೋಗಿ ಐದಾರು ವರ್ಷಗಳ ಕಾಲ ಅನೇಕ ರೀತಿ ಸಾಧನೆ ಮಾಡಿದ ನಂತರ, ಉಚ್ಛ್ವಾಸ-ನಿಶ್ವಾಸಗಳ ಜೊತೆ ಇದ್ದಾಗ ಅದೇ ಧ್ಯಾನವಾಯಿತು. ಮನುಷ್ಯ ತನ್ನ ಜೀವನ ಪರಿವರ್ತನೆ ಹೊಂದಲಿಕ್ಕಾಗಿ ಈ ಧ್ಯಾನ ಸಹಾಯಕವಾಗುತ್ತದೆ ಎಂದು ಪಾಳೀ ಭಾಷೆಯಲ್ಲಿ "ಆನಾಪಾನಾಸತಿ" ಎಂದು ಹೆಸರಿಟ್ಟೆ, ಎಂದು ಸಂದೇಶ ನೀಡಿದರು.

 

೧೯೮೦ರಲ್ಲಿ ಓಷೋರವರಲ್ಲಿ ವಾಕಿನ್ ಆಗಿ ಪಿರಮಿಡ್ ಬಗ್ಗೆ ಸಂದೇಶವನ್ನು ನೀಡಿದೆ. ಆದರೆ, ಈಗ ಪತ್ರೀಜಿಯವರು ಈ ಇಡೀ ಜಗತ್‌ನ್ನೇ ಪಿರಮಿಡ್‌ಮಯವನ್ನಾಗಿ ಮಾಡುತ್ತಿದ್ದಾರೆ. ಅನೇಕರು ಪಿರಮಿಡ್‌ನ ಉಪಯೋಗಗಳನ್ನು ಪಡೆಯುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಿರಮಿಡ್ ಕ್ಯಾಪ್ ಧರಿಸಿ ಓದುವುದರಿಂದ ಏಕಾಗ್ರತೆ ಬರುತ್ತದೆ. ಯಾವುದೇ ಖಾಯಿಲೆ, ಸಮಸ್ಯೆ ಇರುವವರು ಪಿರಮಿಡ್ ಉಪಯೋಗಿಸುವುದರಿಂದ ಆ ಖಾಯಿಲೆಯ ನಿವಾರಣೆಯಾಗುತ್ತದೆ ಎಂಬ ಸಂದೇಶ ನೀಡಿದರು. ಆದ್ದರಿಂದ, ನಾವೆಲ್ಲರೂ ಸೇರಿ ಪಿರಮಿಡ್ ಜಗತ್ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.

 

ಜೈ ಧ್ಯಾನ ಜಗತ್ .. ಜೈ ಪಿರಮಿಡ್ ಜಗತ್

 

S.ಲೋಕೇಶ್

ಚಿಕ್ಕಬಳ್ಳಾಪುರ

ಫೋ: +91-9945370070

Go to top