" ಧ್ಯಾನ ಮಾಡಿ, ಮಾಡಿಸಿ " 

 

 

ನನ್ನ ಹೆಸರು ರಾಮು. ನಾನು ಆನಾಪಾನಸತಿ ಧ್ಯಾನಕ್ಕೆ ಪರಿಚಯವಾಗಿದ್ದು Feb 1, 2002. ನನ್ನ ತಾಯಿ ಪ್ರತಿದಿನ ಮೈಗ್ರೇನ್ ನೋವಿನಿಂದ ಅಳುತ್ತಿದ್ದನ್ನು ನೋಡಿ ನಾನು ವೈದ್ಯನಾಗಬೇಕು ಮತ್ತು ಸೇವೆ ಮಾಡಬೇಕೆಂದು ೯ನೇ ತರಗತಿಯಿಂದಲೇ ಪ್ರತಿದಿನ 6 ರಿಂದ 8 ಗಂಟೆಗಳವರೆಗೂ ಓದುತ್ತಿದ್ದರೂ ಕನಿಷ್ಠ 2-3 ವಿಷಯಗಳಲ್ಲಿ ಅನುತ್ತೀರ್ಣನಾಗುತ್ತಿದ್ದೆ. 10ನೇ ತರಗತಿಯಲ್ಲಿ 44.5% ಅಂಕಗಳು ಇರುವುದರಿಂದ ವೈದ್ಯನಾಗುವ ಅವಕಾಶ ಬರಲಿಲ್ಲ. ಆ ಸಮಯದಲ್ಲಿ ನಾನು ಬಹಳ ಮಾನಸಿಕ ಒತ್ತಡಕ್ಕೆ ಗುರಿಯಾದೆ, ಇನ್ನು ಓದಲು ಸಾಧ್ಯವಿಲ್ಲ ಎಂದು ಬಳ್ಳಾರಿಯ O.P.D. ಆಸ್ಪತ್ರೆಯಲ್ಲಿ ಕಾವಲುಗಾರನಾಗಿ ಕೆಲವು ದಿನ ಕೆಲಸ ಮಾಡಿದೆನು. ಸೇವೆ ಮಾಡಬೇಕೆಂದು ಇದ್ದ ನಾನು ಕಾವಲುಗಾರನಾಗಿ ಕೆಲಸಮಾಡುತ್ತಾ ಇದ್ದಾಗ ನನಗೆ ಬಹಳ ದುಃಖ ಆಗುತ್ತಿತ್ತು. "ನನ್ನ ಜೀವನ ಏಕೆ ಹೀಗೆ ಇದೆ? ನಾನು ಜೀವನದಲ್ಲಿ ಏನು ಮಾಡಬೇಕು?" ಇಂತಹ ಆಲೋಚನೆಗಳು ಪ್ರತಿಕ್ಷಣ ನನ್ನನ್ನು ಕಾಡುತ್ತಿದ್ದವು. Feb1, 2002ರಲ್ಲಿ ನನ್ನ ಸ್ನೇಹಿತ ಮಂಜು ಧ್ಯಾನದ ಬಗ್ಗೆ ಹೇಳಿದನು. ವಿದ್ಯಾರ್ಥಿಗಳಿಗೆ, ಯುವ ವಯಸ್ಸಿನವರಿಗೆ ಧ್ಯಾನ ಏಕೆ? ಧ್ಯಾನ ಮಾಡಿದರೆ ಸನ್ಯಾಸಿ ಆಗುತ್ತಾರೆ, ಧ್ಯಾನ ಎನ್ನುವುದು ಸನ್ಯಾಸಿಗಳಿಗೆ, ಯೋಗಿಗಳಿಗೆ" ಎಂದು ನನ್ನ ಮನಸ್ಸಿನಲ್ಲಿತ್ತು. ನಾನು ಆ ದಿನ ಬಳ್ಳಾರಿಯ ಪತಂಜಲಿ ಪಿರಮಿಡ್ ಧ್ಯಾನ ಕೇಂದ್ರಕ್ಕೆ ಹೋಗಿ 2 ಗಂಟೆ ಧ್ಯಾನ ಮಾಡಿ, ಸ್ವಲ್ಪ ನೆಮ್ಮದಿ, ಪ್ರಶಾಂತತೆ ಸ್ಥಿತಿ ಅನುಭವಿಸಿದೆನು. ಆದರೆ ಧ್ಯಾನದಿಂದ ಏಕಾಗ್ರತೆ, ಜ್ಞಾಪಕಶಕ್ತಿ ಬರುತ್ತದೆ ಎಂದರೆ ನಂಬಿಕೆ ಇರಲಿಲ್ಲ. 6 ತಿಂಗಳು ನಾನು ಪ್ರತಿದಿನ ಪಿರಮಿಡ್‌ಗೆ ಹೋಗಿ 4-5 ಗಂಟೆ ಧ್ಯಾನ ಮಾಡುತ್ತಾ, ಪಿರಮಿಡ್‌ನಲ್ಲಿ ಮಲಗುತ್ತಿದ್ದೆನು. ಪ್ರತಿದಿನ ಧ್ಯಾನ ಮಾಡುತ್ತಾ, ಪುಸ್ತಕಗಳು ಓದುತ್ತಾ, ಪತ್ರೀಜಿಯವರ ಆಡಿಯೊ ಕೇಳುತ್ತಿದ್ದೆನು. ನಾನು ಧ್ಯಾನಕ್ಕೆ ಬರುವ ಮುನ್ನ ಮಾಂಸಾಹಾರಿಯಾಗಿದ್ದೆನು. ಆದರೆ, Feb1, 2002 "ಧ್ಯಾನಂ ಶರಣಂ ಗಚ್ಛಾಮಿ" ಪುಸ್ತಕ ಓದಿ ಮಾಂಸ, ಮೊಟ್ಟೆಯನ್ನು ತ್ಯಜಿಸಿ ಸಸ್ಯಾಹಾರಿಯಾದೆನು. ಧ್ಯಾನ ಮಾಡುವುದರಿಂದ, ಆರೋಗ್ಯ, ಶಾಂತಿ, ನಂಬಿಕೆ ಬಂತು. ಮತ್ತೆ ಓದಬೇಕು ಎಂದು ಅನಿಸಿತು. Diploma (E&CE)ಗೆ ಸೇರಿದೆನು. Diplama 60% ತೆಗೆಯಬೇಕೆಂದು ಧ್ಯಾನ ಮಾಡುತ್ತಾ ಓದುತ್ತಿದ್ದೆನು. ಮೊದಲನೆ ಸೆಮಿಸ್ಟರ್‌ನಿಂದ ನನಗೆ distiction ಬಂತು. ಪ್ರತಿ ಸೆಮಿಸ್ಟರ್‌ನಲ್ಲೂ ನಾನು ಜಿಲ್ಲೆಗೆ topper ಆಗಿದ್ದೆ. ಸಿ.ಇ.ಟಿ ಪರೀಕ್ಷೆಯಲ್ಲೂ ನನಗೆ ಜಿಲ್ಲೆಯಲ್ಲೆ ಎರಡನೆ ಸ್ಥಾನ ಬಂತು. ಇಂಜನಿಯರಿಂಗ್‌ನಲ್ಲಿ ಉಚಿತ ಸ್ಥಾನ ಸಿಕ್ಕಿತು. Diploma Semisterನಿಂದಲೇ ನಾನು ನನ್ನ ಅನುಭವಗಳನ್ನು ಜೋಡಿಸಿ, ಶಾಲೆ, ಕಾಲೇಜುಗಳಲ್ಲಿ ಎಲ್ಲರಿಗೂ ಆನಾಪಾನಸತಿ ಧ್ಯಾನ, ಪಿರಮಿಡ್ ಉಪಯೋಗಗಳನ್ನು ಹೇಳುತ್ತಾ ಬಂದೆನು. ನನ್ನನ್ನು ನೋಡಿ ನಮ್ಮ ತಾಯಿ ಧ್ಯಾನ ಮಾಡಲು ಶುರು ಮಾಡಿದರು. ಸುಮಾರು 30 ವರ್ಷಗಳಿಂದ ಇರುವ ಮೈಗ್ರೈನ್ ಕೇವಲ 3 ತಿಂಗಳಲ್ಲಿ ವಾಸಿಯಾಯಿತು. 2003ರಿಂದ ನಮ್ಮ ಕುಟುಂಬ ಧ್ಯಾನ ಕುಟುಂಬ ಮತ್ತು ಸಸ್ಯಾಹಾರಿ ಕುಟುಂಬವಾಯಿತು. ಕುಟುಂಬದಲ್ಲಿ ಆನಂದ, ಶಾಂತಿ ಹರಡಿತು.

 

ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯದಿಂದ ನಾನು ಯಾರು? ಏನು ಮಾಡಲಿಕ್ಕೆ ಭೂಮಿಗೆ ಬಂದಿದ್ದೇನೆ? ಆತ್ಮ ಎಂದರೇನು? ಸೂಕ್ಷ್ಮಶರೀರ ಎಂದರೇನು? ಮೂರನೆಯ ಕಣ್ಣು ಎಂದರೇನು? ಜ್ಞಾನ ಎಂದರೇನು? ಮುಂತಾದ ಪ್ರಶ್ನೆಗಳು ಉದಯಿಸಿದವು. ಇವೆಲ್ಲವನ್ನು ಸ್ವಾನುಭವದಿಂದ ತಿಳಿಯಬೇಕೆಂದು ಧ್ಯಾನಸಾಧನೆ ಹೆಚ್ಚು ಮಾಡುತ್ತಾ ಬಂದೆನು. ರಾತ್ರಿ 12 ರಿಂದ ೬ರವರೆಗೆ ಧ್ಯಾನಸಾಧನೆ ಮಾಡುತ್ತಾ, ಸುಮಾರು 4-5 ತಿಂಗಳಲ್ಲಿ ಕಾಸ್ಮಿಕ್ ಎನರ್ಜಿ ನನ್ನೊಳಗೆ ಬರುವುದು ಅನುಭವಕ್ಕೆ ಬಂತು. ಸಾಧನೆ ಮುಂದುವರೆಸುತ್ತಾ ಇದ್ದಂತೆ ಬಣ್ಣಗಳು ಕಾಣಿಸುವುದು, ಸೂಕ್ಷ್ಮಶರೀರ ನನ್ನ ದೇಹದಿಂದ ಹೊರಗೆ ಬಂದು ನನ್ನನ್ನು ನೋಡಿಕೊಂಡೆನು. ಆಗ "ನಾನು ಕೇವಲ ಶರೀರ ಅಲ್ಲ" ಎಂದು ಅನುಭವಕ್ಕೆ ಬಂತು. ಧ್ಯಾನದಲ್ಲಿ ಪತ್ರೀಜಿ ಬಹಳಷ್ಟು ಸಲ ನನಗೆ ಮಾರ್ಗದರ್ಶನ ಮಾಡುತ್ತಾ ಇದ್ದಾರೆ. ಧ್ಯಾನ ಪ್ರಚಾರ ಹೆಚ್ಚು ಮಾಡುತ್ತಾ, ಶಾಲಾ-ಕಾಲೇಜು, ಆಸ್ಪತ್ರೆ, ಪಾರ್ಕ್‌ಗಳಲ್ಲಿ ಧ್ಯಾನ ಹೇಳುತ್ತಾ ಬಂದೆನು.

 

ಒಮ್ಮೆ ಧ್ಯಾನದಲ್ಲಿದ್ದಾಗ "ನೀನು ಧ್ಯಾನವನ್ನು, ಪಿರಮಿಡ್ ಶಕ್ತಿ"ಯನ್ನು ಎಲ್ಲರಿಗೂ ಹೇಳಲು ಭೂಮಿಗೆ ಬಂದಿರುವುದಾಗಿ ಅಂತರ್ವಾಣಿ ಹೇಳಿತು. ನನ್ನ ಆನಂದ ವರ್ಣನಾತೀತ. ಅಂದಿನಿಂದ ಧ್ಯಾನ ಮಾಡುತ್ತಾ, ಮಾಡಿಸುತ್ತಾ, ಎಷ್ಟೋ ಅನುಭವಗಳಿಂದ ನನ್ನ ಜೀವನ ಸಾಗುತ್ತಿದೆ. ಒಮ್ಮೆ ನಮ್ಮ ತಾಯಿ ಬಹಳ ಅನಾರೋಗ್ಯದಿಂದ ನರಳುತ್ತಿದ್ದಾಗ ಅಮ್ಮನನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು ಕಣ್ಣು ಮುಚ್ಚಿಕೊಂಡೆನು. ಆಗ ಪತ್ರೀಜಿ ಕಾಣಿಸಿ ನನ್ನನ್ನು ಅವರ ತೊಡೆಯ ಮೇಲೆ ಮಲಗಿಸಿಕೊಂಡು "ಧ್ಯಾನ ಮಾರ್ಗದಲ್ಲಿ, ಸತ್ಯಮಾರ್ಗದಲ್ಲಿ ಇರುವವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತೆ, ಚಿಂತಿಸಬೇಡ" ಎಂದು ಹೇಳಿದರು. ಅವರ ಮಾತನ್ನು ಕೇಳಿ ನನಗೆ ಎಷ್ಟೋ ಆನಂದವಾಯಿತು. ಕೇವಲ ಒಂದು ಗಂಟೆಯಲ್ಲಿ ನಮ್ಮ ತಾಯಿಯ ಆರೋಗ್ಯ ಸುಧಾರಿಸಿತು.

 

ಧ್ಯಾನದಲ್ಲಿ "ಹಿಮಾಲಯದ ಯೋಗಿಗಳು" ಪುಸ್ತಕ ಮುದ್ರಣವಾಗುವುದು 2 ತಿಂಗಳು ಮೊದಲೇ ನೋಡಿದೆನು. ಪ್ರತಿದಿನ ಧ್ಯಾನ ಮಾಡುವಾಗ ನನಗೆ ಹೃದಯದಲ್ಲಿ ನೋವು ಬರುತ್ತಿತ್ತು. ಧ್ಯಾನಕ್ಕೆ ಮುಂಚೆ, ಧ್ಯಾನದ ನಂತರ ಹೃದಯದಲ್ಲಿ ನೋವು ಇರುತ್ತಿರಲಿಲ್ಲ. ಅದಕ್ಕೆ ಕಾರಣ ನಾನು ಮಾಂಸಾಹಾರಿಯಾಗಿದ್ದಾಗ ಮೇಕೆ, ಕೋಳಿಯನ್ನು ತಿಂದಿರುವುದೇ ಕಾರಣವಾಗಿತ್ತು. “ಒಂದು ವೇಳೆ ಧ್ಯಾನಕ್ಕೆ ಬಂದಿರಲಿಲ್ಲ ಎಂದರೆ ನಾನು ಹೃದಯಘಾತಕ್ಕೆ ಗುರಿಯಾಗಬೇಕಿತ್ತು” ಎಂದು ಧ್ಯಾನದಲ್ಲಿ ಸಂದೇಶ ಬಂತು.

 

ಒಂದು ದಿನ ಪತ್ರೀಜಿ ಧ್ಯಾನದಲ್ಲಿ ಕಾಣಿಸಿ "ಹೋದ ಜನ್ಮದಲ್ಲಿ ನಿನ್ನ ಹೆಸರು ಸಬರ, ನೀನು ಹೈದರಾಬಾದ್‌ನಲ್ಲಿ ಹುಟ್ಟಿದ್ದೆ. ಧ್ಯಾನ ಪ್ರಚಾರ ಮಾಡಲಿಕ್ಕೆ ಈ ಜನ್ಮ ತೆಗೆದುಕೊಂಡಿದ್ದೀಯಾ, ಒಂದಾನೊಂದು ಜನ್ಮದಲ್ಲಿ ನೀನು ಪಿರಮಿಡ್ ವ್ಯಾಲಿನಲ್ಲಿ ಇದ್ದೆ" ಎಂದು ಹೇಳಿದರು.

 

ಇಂಜನಿಯರಿಂಗ್ ನಂತರ ನಾನು ಕೆಲಸಕ್ಕಾಗಿ ಇಂಟರ್ವ್ಯೂಗೆ ಹೋದಾಗ 60 ಜನ ಇಂಟರ್ವ್ಯೂಗಾಗಿ ಹಾಜರಾಗಿದ್ದರು. ಕೇವಲ ೨ ಹುದ್ದೆ ಇತ್ತು. ಆ ಹುದ್ದೆ ನನ್ನದಾಯಿತು. checkpoint Certifield Security Expert ಎನ್ನುವ ಪರೀಕ್ಷೆಯಲ್ಲಿ 100/100 ಅಂಕಗಳು ಬಂದವು. ಇದು ಕೇವಲ ಧ್ಯಾನದಿಂದ ಸಾಧ್ಯವಾಯಿತು. ಕೆಲಸದ ವೇಳೆ ಹೆಚ್ಚಾದರಿಂದ ಧ್ಯಾನ ಪ್ರಚಾರದ ಸಮಯ ಕಡಿಮೆಯಾಯಿತು. ಇದರಿಂದ ಕೆಲಸವನ್ನು ಬಿಟ್ಟೆನು. ಕೇವಲ ಒಂದು ತಿಂಗಳಲ್ಲಿ ಸಿಂಗಪೂರ್‌ನ checkpoint software Technolgy (No-1 Global Leader in Security) ಕಂಪೆನಿಯಲ್ಲಿ ಕೆಲಸ ದೊರೆಯಿತು. ಕೆಲಸದ ವೇಳೆ 7 ರಿಂದ 4, ಇದರಿಂದ ನಾನು ಹೆಚ್ಚಿನ ಸಮಯವನ್ನು ಧ್ಯಾನಕ್ಕೆ ಕೊಡುತ್ತಿದ್ದೇನೆ. ನನ್ನ ಆತ್ಮಸಂಗಾತಿ ಆದ ಬಿ.ಸಿಂಧು ನನ್ನ ಧರ್ಮಪತ್ನಿ. ಬಹಳ ಜನ್ಮಗಳಲ್ಲಿ ನಾವಿಬ್ಬರು ಒಟ್ಟಿಗೆ ಇದ್ದೆವು ಎಂದು ಧ್ಯಾನದಲ್ಲಿ ತಿಳಿಯಿತು. ಒಂದು ಜನ್ಮದಲ್ಲಿ ನಾನು ಸ್ತ್ರೀ ಸಿಂಧು ಪುರುಷನಾಗಿ ಇದ್ದೆವು. ಈ ಜನ್ಮದಲ್ಲಿ ನಮ್ಮ ಮದುವೆ ಒಂದು ಪವಾಡವೇ ಸರಿ. ಇಂತಹ ಅನುಭವಗಳಿಂದ ನನ್ನ ಜೀವನ ಆನಂದದಿಂದ ಸಾಗುತ್ತಿದೆ. ನಮ್ಮ ಜೀವನಕ್ಕೆ ನಾವೇ ಸೃಷ್ಟಿಕರ್ತರು, ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು ಎಂದು ಆನಾಪಾನಸತಿ ಧ್ಯಾನದಿಂದ ಸ್ಪಷ್ಟವಾಯಿತು. ಇಂತಹ ಅದ್ಭುತವಾದ ಮಾರ್ಗ ತೋರಿಸುತ್ತ, ಮಾರ್ಗ ನಿರ್ದೇಶನ ಮಾಡುತ್ತಿರುವ ಜಗದ್ಗುರು ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ಧ್ಯಾನ ವಂದನೆಗಳು. ಪ್ರತಿಯೊಬ್ಬರು ಒಬ್ಬ ಮೈತ್ರೇಯ ಬುದ್ಧನಾಗುವರೆಗೂ ಸಾಧನೆ ಮಾಡುತ್ತಾ, ಮಾಡಿಸುತ್ತ ಜೀವಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

 

ಗಮನಿಸಿ: "ಆನಾಪಾನಸತಿ" ಉಚಿತ ಧ್ಯಾನ ತರಗತಿಗಳಿಗೆ ಕೆಳಗಿರುವ ದೂರವಾಣಿಗೆ ಸಂಪರ್ಕಿಸಬಹುದು.

 

 

ಎಮ್.ರಾಮು

ಬೆಂಗಳೂರು

ಫೋ: +91 8951601594

Go to top